Important Days in August 2026: ಆಗಸ್ಟ್‌ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ

ಪ್ರತಿ ತಿಂಗಳಲ್ಲೂ ಸಹ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಜಾಗೃತಿ ಮೂಡಿಸುವಂತಹ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ವರ್ಷದ ಎಂಟನೇ ತಿಂಗಳಾದ ಆಗಸ್ಟ್‌ ತಿಂಗಳಲ್ಲೂ ಹಲವಾರು ಕಾರ್ಯಕ್ರಮಗಳಿದ್ದು, ಸ್ವಾತಂತ್ರ್ಯ ದಿನ, ವಿಶ್ವ ಸಿಂಹ ದಿನದಿಂದ ಹಿಡಿದು ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ದಿನಗಳವರೆಗೆ ಯಾವೆಲ್ಲಾ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Important Days in August 2026: ಆಗಸ್ಟ್‌ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jul 29, 2026 | 6:18 PM

ಇನ್ನೇನೂ ವರ್ಷದ ಎಂಟನೇ ತಿಂಗಳಾದ ಆಗಸ್ಟ್‌ (August)  ಬರುತ್ತಿದೆ. ಧಾರ್ಮಿಕ ಹಬ್ಬಗಳಿಂದ ಕೂಡಿದ ಈ ತಿಂಗಳಲ್ಲಿ ನಾಗರಪಂಚಮಿ, ಓಣಂ, ರಕ್ಷಾಬಂಧನ ಸೇರಿದಂತೆ ಒಂದಷ್ಟು ಹಬ್ಬಗಳನ್ನು ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೆ ಈ ತಿಂಗಳು ಐತಿಹಾಸಿಕ, ಜಾಗೃತಿ ದಿನಗಳನ್ನು ಸಹ ಆಚರಿಸಲಾಗುತ್ತದೆ. ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ಎಲ್ಲಾ ಕಾರ್ಯಕ್ರಮ್ಳನ್ನು ಆಚರಿಸಲಾಗುತ್ತದೆ. ಸ್ನೇಹ ದಿನ, ಸ್ವಾತಂತ್ರ್ಯ ದಿನ, ಸಿಂಹ ದಿನ, ಆನೆ ದಿನದಿಂದ ಹಿಡಿದು ರಾಷ್ಟ್ರೀಯ ಕೈಮಗ್ಗ ದಿನದವರೆಗೆ ಆಗಸ್ಟ್‌ ತಿಂಗಳಲ್ಲಿ ಯಾವೆಲ್ಲಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಆಗಸ್ಟ್‌ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಕಾರ್ಯಕ್ರಮಗಳ ಪಟ್ಟಿ:

  • ಆಗಸ್ಟ್‌ 1-7- ವಿಶ್ವ ಸ್ತನ್ಯಪಾನ ವಾರ
  • ಆಗಸ್ಟ್‌ 2 – ಸ್ನೇಹ ದಿನ
  • ಆಗಸ್ಟ್ 3 – ರಾಷ್ಟ್ರೀಯ ಕಲ್ಲಂಗಡಿ ದಿನ
  • ಆಗಸ್ಟ್ 6 – ಹಿರೋಷಿಮಾ ದಿನ
  • ಆಗಸ್ಟ್ 7 – ರಾಷ್ಟ್ರೀಯ ಕೈಮಗ್ಗ ದಿನ
  • ಆಗಸ್ಟ್ 8 – ಭಾರತ ಬಿಟ್ಟು ತೊಲಗಿ ಚಳುವಳಿ ದಿನ
  • ಆಗಸ್ಟ್‌ 8 – ಅಂತಾರಾಷ್ಟ್ರೀಯ ಬೆಕ್ಕು ದಿನ
  • ಆಗಸ್ಟ್‌ 10 – ವಿಶ್ವ ಜೈವಿಕ ಇಂಧನ ದಿನ
  • ಆಗಸ್ಟ್‌ 10 – ವಿಶ್ವ ಸಿಂಹ ದಿನ
  • ಆಗಸ್ಟ್ 12 – ಅಂತಾರಾಷ್ಟ್ರೀಯ ಯುವ ದಿನ
  • ಆಗಸ್ಟ್‌ 12 – ವಿಶ್ವ ಆನೆ ದಿನ
  • ಆಗಸ್ಟ್‌ 13 – ವಿಶ್ವ ಎಡಗೈ ಜನರ ದಿನ
  • ಆಗಸ್ಟ್‌ 13 – ವಿಶ್ವ ಅಂಗಾಂಗ ದಾನ ದಿನ
  • ಆಗಸ್ಟ್ 15 – ಸ್ವಾತಂತ್ರ್ಯ ದಿನ
  • ಆಗಸ್ಟ್‌ 19 – ವಿಶ್ವ ಛಾಯಾಗ್ರಹಣ ದಿನ
  • ಆಗಸ್ಟ್‌ 19 – ವಿಶ್ವ ಮಾನವೀಯ ದಿನ
  • ಆಗಸ್ಟ್‌ 20 – ವಿಶ್ವ ಸೊಳ್ಳೆ ದಿನ
  • ಆಗಸ್ಟ್‌ 21 – ವಿಶ್ವ ಹಿರಿಯ ನಾಗರಿಕರ ದಿನ
  • ಆಗಸ್ಟ್‌ 21 – ವಿಶ್ವ ಉದ್ಯಮಿಗಳ ದಿನ
  • ಆಗಸ್ಟ್ 26 – ಮಹಿಳಾ ಸಮಾನತೆ ದಿನ
  • ಆಗಸ್ಟ್‌ 27 – ವಿಶ್ವ ಸರೋವರ ದಿನ
  • ಆಗಸ್ಟ್‌ 28 – ವಿಶ್ವ ಸಂಸ್ಕೃತ ದಿನ
  • ಆಗಸ್ಟ್ 29 – ರಾಷ್ಟ್ರೀಯ ಕ್ರೀಡಾ ದಿನ
  • ಆಗಸ್ಟ್‌ 29 – ಅಂತರರಾಷ್ಟ್ರೀಯ ಪರಮಾಣು ಪರೀಕ್ಷೆಗಳ ವಿರೋಧಿ ದಿನ
  • ಆಗಸ್ಟ್‌ 30 – ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ದಿನ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us