ಮಕ್ಕಳಿಂದ ಹಿಡಿದು ದೊಡ್ಡವರೆಗೂ ಬಾಯಿ ಚಪ್ಪರಿ ತಿನ್ನೋ ಸಿಹಿ ಪದಾರ್ಥಗಳಲ್ಲಿ ಚಾಕೊಲೇಟ್ ಕೂಡ ಒಂದು. ಬಾಯನ್ನು ಸಿಹಿಯಾಗಿಸುವುದರೊಂದಿಗೆ ಮನವನ್ನು ತಣಿಸುತ್ತದೆ. ಹೀಗಾಗಿ ಈ ಚಾಕೊ ಲೇಟ್ಗೆ ಮನಸೋಲದವರಿಲ್ಲ. ಈ ಚಾಕೊಲೇಟ್ಗಾಗಿ ಒಂದು ದಿನವನ್ನು ಮೀಸಲಿರಿಸಲಾಗಿದೆ. ಪ್ರತಿ ಜುಲೈ 7 ರಂದು ವಿಶ್ವ ಚಾಕೊಲೇಟ್ ದಿನವನ್ನು ಆಚರಿಸಿದರೆ, ಸೆಪ್ಟೆಂಬರ್ 13 ರಂದು ವಾರ್ಷಿಕವಾಗಿ ಅಂತಾರಾಷ್ಟ್ರೀಯ ಚಾಕೊಲೇಟ್ ದಿನವನ್ನು ಆಚರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಚಾಕೊಲೇಟ್ ದಿನದ ಇತಿಹಾಸದ ಬಗ್ಗೆ ಹೇಳುವುದಾದರೆ, ಸೆಪ್ಟೆಂಬರ್ 13 ರಂದು ಪ್ರಸಿದ್ಧ ಅಮೇರಿಕನ್ ಉದ್ಯಮಿ ಮಿಲ್ಟನ್ ಎಸ್ ಹರ್ಷೆಯವರ ಜನ್ಮದಿನ ವಾಗಿದೆ. ಮಿಲ್ಟನ್ ಎಸ್. ಹರ್ಷೆ 1864 ರಲ್ಲಿ ಚಾಕೊಲೇಟ್ ಕಂಪನಿಯನ್ನು ಮೊದಲು ಸ್ಥಾಪಿಸಿದವರು. ಈ ಕಂಪೆನಿಯ ಮೂಲಕ ಸಾಮಾನ್ಯ ಜನರಿಗೆ ವಿಭಿನ್ನವಾದ ಸುವಾಸನೆಗಳೊಂದಿಗೆ ಕೂಡಿದ ಚಾಕೊಲೇಟ್ ಗಳು ಲಭ್ಯವಾಗುವಂತೆ ಮಾಡಿದರು. ಇದರ ಸ್ಮರಣಾರ್ಥವಾಗಿ ಸೆಪ್ಟೆಂಬರ್ 13 ರಂದು ಅಂತಾರಾಷ್ಟ್ರೀಯ ಚಾಕೊಲೇಟ್ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ. ಈ ಚಾಕೊಲೇಟ್‌ನ ಪ್ರಾಮುಖ್ಯತೆಯನ್ನು ತಿಳಿಸಲು ಹಾಗೂ ಜೀವನದಲ್ಲಿ ಅದರ ಪ್ರಾಮುಖ್ಯತೆಯನ್ನು ತಿಳಿಸುವದಕ್ಕೆ ಈ ದಿನವು ಮಹತ್ವ ಪೂರ್ಣವಾಗಿದೆ.
ಇದನ್ನೂ ಓದಿ: ಬೈಕ್ ತೊಳೆಯುವಾಗ ಈ ತಪ್ಪು ಮಾಡಬೇಡಿ
* ಡಾರ್ಕ್ ಚಾಕೊಲೇಟ್‌ನಲ್ಲಿ ಉತ್ಕರ್ಷಣ ವಿರೋಧಿ ಅಂಶಗಳು ಅಧಿಕವಾಗಿದ್ದು, ಸಾವಯವ ಸಂಯುಕ್ತಗಳಿಂದ ಕೂಡಿದೆ. ಇದು ಹೃದಯರಕ್ತನಾಳದ ಆರೋಗ್ಯ ತೊಂದರೆಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
* ಡಾರ್ಕ್ ಚಾಕೊಲೇಟ್ ನಿಯಮಿತವಾಗಿ ಸೇವಿಸುವುದರಿಂದ ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಕೋಕಾ ಫ್ಲೇವನಾಯ್ಡ್‌ಗಳು ಮೆದುಳಿನಲ್ಲಿ ರಕ್ತವು ಸರಾಗವಾಗಿ ಹರಿಯುವಂತೆ ಮಾಡಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
* ಈ ಡಾರ್ಕ್ ಚಾಕೊಲೇಟ್ ಉತ್ತಮ ಪ್ರಮಾಣದ ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಅದು ದೇಹವನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ.
* ನಿಯಮಿತವಾಗಿ ಡಾರ್ಕ್ ಚಾಕೊಲೇಟ್‌ಗಳು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ಇದರಲ್ಲಿ ಪಾಲಿಫಿನಾಲ್‌ಗಳು, ಕ್ಯಾಟೆಚಿನ್‌ಗಳು ಮತ್ತು ಫ್ಲೇವನಾಯ್ಡ್‌ಗಳಂತಹ ಸಾವಯವ ಸಂಯುಕ್ತಗಳು ಸಮೃದ್ಧವಾಗಿದ್ದು, ಕೆಟ್ಟ ಕೊಲೆಸ್ಟ್ರಾಲನ್ನು ತಗ್ಗಿಸುತ್ತದೆ.
* ಫ್ಲಾವನಾಲ್ ನಂತಹ ಸಂಯುಕ್ತಗಳು ಸೂರ್ಯನ ಕಿರಣಗಳಿಂದ ಚರ್ಮಕ್ಕೆ ಹಾನಿಯಾಗುವುದನ್ನು ತಡೆಯುತ್ತದೆ. ರಕ್ತದ ಹರಿವು, ಚರ್ಮವು ತೇವಾಂಶಭರಿತವಾಗಿರಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ