ಅಂದವಾಗಿ ಕಾಣಲು ಹೆಣ್ಣುಮಕ್ಕಳು ಮೇಕಪ್ (Makeup) ಮಾಡಿಕೊಳ್ಳುವುದು ಸಾಮಾನ್ಯ. ಅದಕ್ಕಾಗಿ ಹಲವು ರೀತಿಯ ಕಾಸ್ಮೆಟಿಕ್ಸ್, ಕ್ರೀಮ್, ಪೌಡರ್ಗಳನ್ನು ಬಳಸುತ್ತಾರೆ. ಈಗಷ್ಟೇ ವರ್ಕ್ ಫ್ರಾಮ್ ಹೋಮ್ ಮುಗಿದು ಆಫೀಸ್ಗಳು ಆರಂಭವಾಗುತ್ತಿದೆ. ಹೆವಿ ಮೇಕಪ್(Heavy Makeup) ಗಿಂತ ಲೈಟ್ ಆಗಿ ಮೇಕಪ್ ಮಾಡಿಕೊಂಡು ಅಂದವಾಗಿ ಕಾಣಿಸಿಕೊಳ್ಳಲು ಹೆಣ್ಣುಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ಕೆಲವೊಮ್ಮೆ ಆಫೀಸಿಗೆ ಹೋದಮೇಲೆ ಮೇಕಪ್ ಡಲ್ ಆಗಿ ಕಾಣುತ್ತದೆ. ಅಥವಾ ಕೆಲವೊಮ್ಮೆ ಆಫೀಸ್ನಿಂದಲೇ ಬೇರೆ ಎಲ್ಲಿಗೂ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಹೀಗಿದ್ದಾಗ ಮಿನಿ ಮೇಕಪ್ ಕಿಟ್ ನಿಮ್ಮೊಂದಿಗೆ ಇರಿಸಿಕೊಳ್ಳುವುದು ಬೆಸ್ಟ್. ನಿಮ್ಮ ಮಿನಿ ಮೇಕಪ್ ಕಿಟ್ನಲ್ಲಿ ಯಾವೆಲ್ಲಾ ವಸ್ತುಗಳು ಇರಬೇಕು ಎನ್ನುವುದನ್ನು ಸರಿಯಾಗಿ ಗಮನಿಸಿಕೊಳ್ಳಿ. ಇಲ್ಲವಾದರೆ ಒಂದು ವಸ್ತು ಇಲ್ಲವಾದರೂ ಮೇಕಪ್ ಕಂಪ್ಲೀಟ್ ಆಗುವುದಿಲ್ಲ. ಹಾಗಾದರೆ ಯಾವೆಲ್ಲಾ ವಸ್ತುಗಳನು ನಿಮ್ಮ ದಿನನಿತ್ಯದ ಮೇಕಪ್ ಕಿಟ್ನಲ್ಲಿರಬೇಕು? ಆ ಬಗ್ಗೆ ಗೊಂದಲ ಬೇಡ ನಿಮ್ಮ ಮಿನಿ ಮೇಕಪ್ ಕಿಟ್ನಲ್ಲಿರಬೇಕಾದ ಅಗತ್ಯ ವಸ್ತುಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ,
ಪೌಂಡೇಶನ್ ಕ್ರೀಮ್ ಅಥವಾ ಬಿ ಬಿ ಕ್ರೀಮ್:
ಬಿ ಬಿ (BB) ಅಥವಾ ಪೌಂಡೇಶನ್ ಕ್ರೀಮ್ಗಳನ್ನು ನಿಮ್ಮಮ ಬ್ಯಾಗ್ನಲ್ಲಿರಿಸಿಕೊಳ್ಳಿ. ಇದು ನಿಮ್ಮ ಮುಖದ ಮೇಕಪ್ಗೆ ಹೊಳಪು ನೀಡುತ್ತದೆ. ಆದರೆ ನೆನಪಿಡಿ ಪೌಂಡೇಶನ್ ಕ್ರೀಮ್ ನಿಮ್ಮ ತ್ವಚೆಯ ಬಣ್ಣಕ್ಕೆ ಸರಿಹೊಂದುವಂತೆ ನೋಡಿಕೊಳ್ಳಿ. ಅದೇ ರೀತಿ ಹೆಚ್ಚು ರಾಸಾಯನಿಕಗಳಿರುವ ಪೌಂಡೇಶನ್ ಕ್ರೀಮ್ಗಳ ಬಳಕೆ ಬೇಡ.
ಐಲೇನರ್:
ಕಣ್ಣಿನ ಅಂದ ಹೆಚ್ಚಿಸುವ ಐಲೇನರ್ ಅಥವಾ ಕಾಜಲ್ಅನ್ನು ಸದಾ ನಿಮ್ಮೊಂದಿಗೆ ಇರಿಸಿಕೊಳ್ಳಿ. ಸುಸ್ತಾದ ಮುಖವನ್ನು ಕೂಡ ಕಾಜಲ್ ಅಂದವಾಗಿಸುತ್ತದೆ. ಆದರೆ ಐಲೇನರ್ ಹಚ್ಚಿಕೊಳ್ಳುವಾಗ ಎಚ್ಚರಿಕೆವಹಿಸಿ. ಏಕೆಂದರೆ ಕೆಲವು ರಾಸಾಯನಿಕಗಳು ಕಣ್ಣಿಗೆ ಹಾನಿಯುಂಟು ಮಾಡಬಹುದು. ಆದ್ರಿಂದ ಕಣ್ಣಿಗೆ ಹಚ್ಚುವಾಗ ಕಣ್ಣಿನ ಒಳಗೆ ಹೋಗದಂತೆ ಜಾಗೃತೆವಹಿಸಿ
ಲಿಪ್ಸ್ಟಿಕ್:
ಹೆಂಗಳೆಯರ ನೆಚ್ಚಿನ ಮೇಕಪ್ ವಸ್ತು ಎಂದರೆ ಲಿಪ್ಸ್ಟಿಕ್. ಕೆಲವರಿಗೆ ಬಣ್ಣ ಬಣ್ಣದ ಲಿಪ್ಸ್ಟಿಕ್ಗಳನ್ನು ಕಲೆಹಾಕುವುದೇ ಒಂದು ಹವ್ಯಾಸವಾಗಿರುತ್ತದೆ. ಡ್ರೆಸ್ ತಕ್ಕ ಹಾಗೆ ಲಿಪ್ಸ್ಟಿಕ್ ಹಾಕಿಕೊಂಡರೆ ಅದರ ಅಂದವೇ ಬೇರೆ. ಕೆಲವೊಮ್ಮೆ ಏನೋ ತಿಂದಾಗ ಅಥವಾ ಈಗಂತೂ ಮಾಸ್ಕ್ ಹಾಕಿಕೊಂಡಾಗ ಲಿಪ್ಸ್ಟಿಕ್ ಅಳಿಸಿಹೋಗುವ ಸಾಧ್ಯತೆಗಳಿರುತ್ತದೆ. ಅದ್ದರಿಂದ ನಿಮ್ಮ ಬ್ಯಾಹಗ್ನ ಮಿನಿನ ಮೇಕಪ್ ಕಿಟ್ನಲ್ಲಿ ಎಲ್ಲಾ ಡ್ರೆಸ್ಗೂ ಹೊಂದಾಣಿಕೆಯಾಗುವ ಲಿಪ್ಸ್ಟಿಕ್ ಅನ್ನು ಇರಿಸಿಕೊಳ್ಳಿ.
ಮಸ್ಕರಾ:
ಕಣ್ಣಿನ ಕಾಡಿಗೆ ಅಥವಾ ಐಲೇನರ್ ಹಚ್ಚಿದ ಬಳಿಕ ಮಸ್ಕರಾ ಹಚ್ಚದಿದ್ದರೆ, ಖಾಲಿ ಖಾಲಿ ಎನಿಸುತ್ತದೆ. ಹೀಗಾಗಿ ನಿಮ್ಮ ಮೇಕಪ್ ಕಿಟ್ನಲ್ಲೊಂದು ಮಸ್ಕಕರಾ ಇರಿಸಿಕೊಳ್ಳಿ. ಪಾರ್ಟಿಗಳಿಗೆ ಹೋರಡುವಾಗ ಇದು ನಿಮಗೆ ನೆರವಾಗುತ್ತದೆ. ಕಣ್ಣಿನ ಕೂದಲು ಕಡಿಮೆ ಇದ್ದರೆ ಮಸ್ಕರಾ ಹಾಕಿಕೊಂಡಾಗ ಕಣ್ಣು ಇನ್ನಷ್ಟು ಆಕರ್ಷಕವಾಗಿ ಕಾಣಿಸುತ್ತದೆ.
ಇದನ್ನೂ ಓದಿ:
Side Effects of Kajal: ಕಣ್ಣಿನ ಅಂದ ಹೆಚ್ಚಿಸುವ ಕಾಜಲ್ ಬಳಕೆಯ ಮುನ್ನ ಈ ಅಂಶಗಳನ್ನು ಗಮನಿಸಿ
Published On - 5:19 pm, Fri, 25 February 22