ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ದಿನದಲ್ಲಿ 6 ರಿಂದ 8 ಗಂಟೆಗಳ ಕಾಲ ಸರಿಯಾದ ನಿದ್ರೆ ಅತ್ಯಗತ್ಯ. ಇದು ಹೃದಯದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ನಿದ್ರೆಯ ಕೊರತೆಯು ಹೃದಯ ಸೇರಿದಂತೆ ದೇಹದ ಮೇಲೆ ಹಲವಾರು ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ನೀವು ನಿದ್ದೆ ಮಾಡಿದ ಸಮಯದಲ್ಲಿ ಹೃದಯ ಬಡಿತ ನಿಧಾನವಾಗುತ್ತದೆ ಮತ್ತು ರಕ್ತದೊತ್ತಡ ಕಡಿಮೆಯಾಗುತ್ತದೆ. ಇದ್ದರಿಂದಾಗಿ ಆರೋಗ್ಯದ ಮೇಲೆ ಸಾಕಷ್ಟು ಪ್ರಯೋಜನಗಳನ್ನು ಕಾಣಬಹುದು. ಸ್ಲೀಪ್ ಫೌಂಡೇಶನ್ನ ಅಧ್ಯಯನವೊಂದರ ಪ್ರಕಾರ, ಸಮಯಕ್ಕೆ ಸರಿಯಾಗಿ ನಿದ್ರಿಸುವುದರಿಂದ ಶೇಕಡಾ 20ರಷ್ಟು ರಕ್ತದೊತ್ತಡ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ತಿಳಿದು ಬಂದಿದೆ.
ನಿದ್ರೆಯ ಕೊರತೆಯು ಹೃದಯದ ಮೇಲೆ ಹಲವು ವಿಧಗಳಲ್ಲಿ ಪರಿಣಾಮ ಬೀರಬಹುದು. ಪ್ರಮುಖವಾಗಿ ರಕ್ತದೊತ್ತಡ, ಇದು ಹೃದಯ ಕಾಯಿಲೆ ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಜೊತೆಗೆ ಸ್ಥೂಲಕಾಯತೆ ಮತ್ತು ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಫರಿದಾಬಾದ್ನ ಕಾರ್ಡಿಯಾಲಜಿ ವಿಭಾಗ ನಿರ್ದೇಶಕರಾದ ಡಾ ಗಜಿಂದರ್ ಗೋಯಲ್ ಹಿಂದೂಸ್ಥಾನ್ ಟೈಮ್ಸ್ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮುಖದ ಮೇಲೆ ಒಂದೇ ಭಾಗದಲ್ಲಿ, ಪದೇ ಪದೇ ಮೊಡವೆಗಳು ಹುಟ್ಟುತ್ತಿದೆಯಾ? ಕಾರಣ ತಿಳಿದುಕೊಳ್ಳಿ
ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಡಾ.ಪವನ್ ಕುಮಾರ್ರವರ ಪ್ರಕಾರ ನಿದ್ರೆಯ ಕೊರತೆಯು ಹೃದಯದ ಮೇಲೆ ಈ ಕೆಳಗಿನ 5 ವಿಧಗಳಲ್ಲಿ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:59 pm, Sun, 12 March 23