
ನೈಟಿ (nighty) ಆರಾಮದಾಯಕವಾದ ಉಡುಗೆಯಾಗಿದ್ದು, ಹೆಚ್ಚಿನ ಗ ಮನೆಯಲ್ಲಿ ನೈಟಿಗಳನ್ನೇ ಧರಿಸುತ್ತಾರೆ. ಈ ನೈಟಿಗಳನ್ನೇ ಧರಿಸಿ ಮನೆ ಕೆಲಸಗಳನ್ನು ಮಾಡುವುದರಿಂದ ಇವುಗಳು ಬೇಗನೇ ಹಳೆಯದಾಗಿಬಿಡುತ್ತದೆ. ಈ ಹಳೆಯದಾಗ ನೈಟಿಗಳನ್ನು ಬಹುತೇಕರು ವೇಸ್ಟ್ ಎಂದು ಎಸೆದು ಬಿಡುತ್ತಾರೆ. ಆದ್ರೆ ಏನು ಗೊತ್ತಾ, ಮನೆಯಲ್ಲಿರುವ ಕೆಲವೊಂದು ಹಳೆಯ ವಸ್ತುಗಳನ್ನು ಎಸೆಯದೆ ಅಲಂಕಾರಿಕ ವಸ್ತುಗಳನ್ನು ತಯಾರಿಸುವಂತೆ ಹಳೆಯ ನೈಟಿಗಳನ್ನು ಸಹ ಮರು ಬಳಕೆ ಮಾಡಬಹುದು. ಹಳೆಯ ನೈಟಿಗಳಿಂದ ಏನೆಲ್ಲಾ ಸೃಜನಶೀಲ ವಸ್ತುಗಳನ್ನು ತಯಾರಿಸಬಹುದು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಕುಶನ್, ದಿಂಬಿನ ಕವರ್ ತಯಾರಿಸಿ: ವರ್ಣಮಯ ಹೂವಿನ ಡಿಸೈನ್‌ಗಳನ್ನು ಹೊಂದಿರುವ ನೈಟಿಗಳಿಂದ ಸುಂದರವಾದ ಕುಶನ್ ಕವರ್, ದಿಂಬಿನ ಕವರ್‌ಗಳನ್ನು ತಯಾರಿಸಬಹುದು. ಹಳೆಯ ಬಟ್ಟೆಗಳ ಈ ಮರುಬಳಕೆಯು ನಿಮ್ಮ ಮನೆಯನ್ನು ಬಜೆಟ್ ಸ್ನೇಹಿ ರೀತಿಯಲ್ಲಿ ಅಲಂಕರಿಸಲು ಸುಲಭವಾದ ಮಾರ್ಗವಾಗಿದೆ.
ಸೊಗಸಾದ ಏಪ್ರನ್ ಮಾಡಿ: ಅಡುಗೆ ಮಾಡುವ ಸಂದರ್ಭದಲ್ಲಿ ಎಣ್ಣೆ, ಮಸಾಲೆಗಳು ಬಟ್ಟೆಗಳಿಗೆ ಚೆಲ್ಲುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಡುಗೆ ಮಾಡುವಾಗ ಏಪ್ರನ್ ಇರಲೇಬೇಕು. ಹೀಗಿರುವಾಗ ನೀವು ಹಳೆಯ ನೈಟಿಯಿಂದ ಈ ಏಪ್ರನ್ ತಯಾರಿಸಬಹುದು. ಹತ್ತಿ ನೈಟಿಗಳಿಂದ ಮಾಡಿದ ಏಪ್ರನ್‌ಗಳು ಅಡುಗೆ ಮಾಡುವಾಗ ವಿಶೇಷವಾಗಿ ಆರಾಮದಾಯಕವಾಗಿರುತ್ತದೆ. ಏಪ್ರನ್ ಮುಂಭಾಗದಲ್ಲಿ ಸಣ್ಣ ಪಾಕೆಟ್ ಕೂಡ ಇಡಬಹುದು.
ಶೇಖರಣಾ ಚೀಲಗಳು: ಪ್ಲಾಸ್ಟಿಕ್ ಕವರ್‌ಗಳಲ್ಲಿ ಮೇಕಪ್, ಆಭರಣ ಸೇರಿದಂತೆ ಸಣ್ಣಪುಟ್ಟ ವಸ್ತುಗಳನ್ನು ಸಂಗ್ರಹಿಸಿಡುವ ಬದಲು ನೈಟಿಗಳಿಂದ ಪೌಚ್ ತಯಾರಿಸಿ ನಿಮ್ಮೆಲ್ಲಾ ವಸ್ತುಗಳನ್ನು ಅದರಲ್ಲಿಡಬಹುದು. ಅಲ್ಲದೆ ಹಳೆಯ ನೈಟಿಯನ್ನು ಬಳಸಿ ಹ್ಯಾಂಗಿಂಗ್ ಆರ್ಗನೈಸರ್ ಅನ್ನು ತಯಾರಿಸಬಹುದು. ಇದರಲ್ಲಿ ಬಾಚಣಿಗೆಗಳು, ಕೀಗಳು, ರಿಮೋಟ್‌ಗಳು, ಸ್ಟೇಷನರಿಗಳು ಅಥವಾ ಸಣ್ಣ ಗೃಹೋಪಯೋಗಿ ವಸ್ತುಗಳನ್ನು ಇಟ್ಟುಕೊಳ್ಳಬಹುದು.
ಇದನ್ನೂ ಓದಿ: ಈ ಸ್ಮಾರ್ಟ್ ಟ್ರಿಕ್ಸ್ ಪಾಲಿಸುವ ಮೂಲಕ ಮಳೆಗಾಲದಲ್ಲಿ ಬಟ್ಟೆಗಳನ್ನು ಸುಲಭವಾಗಿ ಒಣಗಿಸಬುದು
ಡೈನಿಂಗ್ ಟೇಬಲ್ ರನ್ನರ್: ನೀವು ಹಳೆಯ ನೈಟಿಗಳಿಂದ ಡೈನಿಂಗ್ ಟೇಬಲ್‌ನ ಮಧ್ಯಭಾಗದಲ್ಲಿ ಹಾಸುವ ಉದ್ದವಾದ ಬಟ್ಟೆಯಾದ ಡೈನಿಂಗ್ ಟೇಬರ್ ರನ್ನರ್ ಅನ್ನು ತಯಾರಿಸಬಹುದು. ಹಳೆಯ ನೈಟಿ ಸುಂದರವಾದ ಮುದ್ರಣವನ್ನು ಹೊಂದಿದ್ದರೆ ಅದರಿಂದ ಟೇಬಲ್ ರನ್ನರ್ ಮಾಡಿ. ಮತ್ತು ಅದರ ಅಂಚುಗಳ ಸುತ್ತಲೂ ಲೇಸ್ ಅಥವಾ ಟಸೆಲ್‌ಗಳನ್ನು ಸೇರಿಸಿದರೆ. ಇದು ನಿಮ್ಮ ಡೈನಿಂಗ್ ಟೇಬಲ್ ರಾಯಲ್ ಆಗಿ ಕಾಣುವಂತೆ ಮಾಡುತ್ತದೆ.
ಫ್ರಿಡ್ಜ್ ಟಾಪ್ ಕವರ್: ಸುಂದರ ಡಿಸೈನ್ ಇರುವಂತಹ ಹಳೆಯ ನೈಟಿಗಳನ್ನು ಎಸೆಯುವ ಬದಲು ಅದರಿಂದ ನೀವು ಫ್ರಿಡ್ಜ್ ಟಾಪ್ ಕವರ್‌ಗಳನ್ನು ತಯಾರಿಸಬಹುದು. ಮಾರುಕಟ್ಟೆಯಲ್ಲಿ ಸಿಗುವಂತಹ ಈ ವಸ್ತುಗಳಿಗೆ ಸುಮ್ಮನೆ ದುಡ್ಡು ಖರ್ಚು ಮಾಡುವ ಬದಲು ಹಳೆಯ ನೈಟಿಗಳನ್ನು ಬಳಸಿ ನೀವೇ ಮನೆಯಲ್ಲಿ ಫ್ರಿಡ್ಜ್ ಟಾಪ್ ಕವರ್ ರೆಡಿ ಮಾಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ