ಮಕ್ಕಳಿಗೆ ಸರಿಯಾದ ಜಲಸಂಚಯನವು ನಿರ್ಣಾಯಕವಾಗಿದೆ. ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ ಅವರು ಹೆಚ್ಚು ನಿರ್ಜಲೀಕರಣಕ್ಕೆ ಒಳಗಾಗುತ್ತಾರೆ. ವಯಸ್ಕರಿಗೆ ಹೋಲಿಸಿದರೆ ಮಕ್ಕಳ ದೇಹವು ಹೆಚ್ಚಿನ ಶೇಕಡಾವಾರು ನೀರನ್ನು ಹೊಂದಿರುತ್ತದೆ. ಇದು ಸಾಕಷ್ಟು ಜಲಸಂಚಯನ ಮಟ್ಟವನ್ನು ಕಾಪಾಡಿಕೊಳ್ಳಲು ಅವರಿಗೆ ಅವಶ್ಯಕವಾಗಿದೆ. ನಿರ್ಜಲೀಕರಣವು ಮಕ್ಕಳಲ್ಲಿ ಆಯಾಸ, ಕಿರಿಕಿರಿ ಮತ್ತು ಏಕಾಗ್ರತೆಯ ತೊಂದರೆ ಸೇರಿದಂತೆ ಹಲವಾರು ನೆಗೆಟಿವ್ ಪರಿಣಾಮಗಳಿಗೆ ಕಾರಣವಾಗಬಹುದು. ಹೀಗಾಗಿ, ತಮ್ಮ ಮಕ್ಕಳು ಬಾಯಾರಿಕೆಯಾಗುವ ಮೊದಲು ನಿಯಮಿತವಾಗಿ ನೀರನ್ನು ಕುಡಿಸಬೇಕು ಎಂದು ಪೋಷಕರಿಗೆ ಶಿಫಾರಸು ಮಾಡಲಾಗುತ್ತದೆ. ಏಕೆಂದರೆ ಬಾಯಾರಿಕೆಯು ಮಕ್ಕಳಲ್ಲಿ ನಿರ್ಜಲೀಕರಣದ ತಡವಾದ ಸಂಕೇತವಾಗಿದೆ.
ಮಕ್ಕಳು ಸರಿಯಾದ ಪ್ರಮಾಣದ ನೀರನ್ನು ಕುಡಿಯುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ಅಗತ್ಯ. ಮಕ್ಕಳ ವಿಷಯಕ್ಕೆ ಬಂದಾಗ ವಯಸ್ಸು, ತೂಕ, ಪರಿಸರದ ತಾಪಮಾನ ಮತ್ತು ಚಟುವಟಿಕೆಯ ಮಟ್ಟಗಳಂತಹ ಅಂಶಗಳ ಆಧಾರದ ಮೇಲೆ ವೈಯಕ್ತಿಕ ಅಗತ್ಯಗಳು ಬದಲಾಗುವುದರಿಂದ ಅವರು ಎಷ್ಟು ನೀರನ್ನು ಸೇವಿಸಬೇಕು ಎಂಬುದರ ಕುರಿತು ಯಾವುದೇ ನಿರ್ದಿಷ್ಟ ಮಾರ್ಗಸೂಚಿಗಳಿಲ್ಲ. ಆದರೂ, ಈ ವಯಸ್ಸಿನ ಮಕ್ಕಳನ್ನು ದಿನವಿಡೀ ನಿಯಮಿತವಾಗಿ 2 ರಿಂದ 3 ಗಂಟೆಗಳ ಮಧ್ಯಂತರದಲ್ಲಿ ನೀರು ಕುಡಿಯಲು ಪ್ರೋತ್ಸಾಹಿಸುವುದು ಅಗತ್ಯ.
ಇದನ್ನೂ ಓದಿ: Mens Beauty Tips: ಸುಡು ಬಿಸಿಲಿನಲ್ಲಿ ಪುರುಷರು ತಮ್ಮ ಅಂದವನ್ನು ಕಾಪಾಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಒಣ ತುಟಿಗಳು, ಹಳದಿ ಬಣ್ಣದ ಮೂತ್ರ, ಅಥವಾ ಮಕ್ಕಳಲ್ಲಿ ಕಿರಿಕಿರಿಯಂತಹ ನಿರ್ಜಲೀಕರಣದ ಲಕ್ಷಣಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಅಗತ್ಯವಿದ್ದಾಗ ಹೆಚ್ಚು ದ್ರವಗಳನ್ನು ಕುಡಿಯಲು ಪ್ರೋತ್ಸಾಹಿಸುವುದು ಮುಖ್ಯ. ಉತ್ತಮ ಜಲಸಂಚಯನ ಅಭ್ಯಾಸವನ್ನು ಮೊದಲೇ ಹುಟ್ಟುಹಾಕುವ ಮೂಲಕ, ಪೋಷಕರು ತಮ್ಮ ಮಕ್ಕಳಿಗೆ ಆರೋಗ್ಯಕರವಾದ ಹೈಡ್ರೇಷನ್ ಅಭ್ಯಾಸವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಬಹುದು. ಅದು ಅವರ ಜೀವನದುದ್ದಕ್ಕೂ ಅವರಿಗೆ ಪ್ರಯೋಜನವನ್ನು ನೀಡುತ್ತದೆ.
ಸಾಮಾನ್ಯವಾಗಿ 1-3 ವರ್ಷ ವಯಸ್ಸಿನ ಮಕ್ಕಳು ದಿನಕ್ಕೆ ಸುಮಾರು 5 ಕಪ್ ನೀರು ಕುಡಿಯಬೇಕು. 4-9 ವರ್ಷ ವಯಸ್ಸಿನ ಮಕ್ಕಳು ಸುಮಾರು 6 ಕಪ್ ನೀರು ಕುಡಿಯಬೇಕು. 10-15 ವರ್ಷ ವಯಸ್ಸಿನ ಮಕ್ಕಳು ಸುಮಾರು 8 ಕಲ್ ನೀರು ಹೊಂದಿರಬೇಕು. 15-18 ವರ್ಷ ವಯಸ್ಸಿನ ಹದಿಹರೆಯದವರು ದಿನಕ್ಕೆ ಸುಮಾರು 12 ಕಪ್ ನೀರನ್ನು ಸೇವಿಸಬೇಕು.
ಮಕ್ಕಳ ಚರ್ಮದ ಸುರಕ್ಷತೆ ಮಾರ್ಗಸೂಚಿಗಳು:
– ಶಿಶುಗಳನ್ನು ಸಂಪೂರ್ಣವಾಗಿ ನೇರ ಸೂರ್ಯನಿಂದ ದೂರವಿಡಿ ಮತ್ತು ತುಂಬಾ ಬಿಸಿಯಾಗಿರುವಾಗ (ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರ ನಡುವೆ) ಮಕ್ಕಳನ್ನು ಸೂರ್ಯನಿಂದ ದೂರವಿಡಿ.
ಇದನ್ನೂ ಓದಿ: Total Solar Eclipse 2024: ಸೂರ್ಯಗ್ರಹಣದ ವೇಳೆ ಏನು ಮಾಡಬೇಕು? ಏನು ಮಾಡಬಾರದು?
– ಯಾವಾಗಲೂ ಬಿಸಿಲಿಗೆ ಹೋಗುವಾಗ ಮಕ್ಕಳನ್ನು ಕವರ್ ಅಪ್ ಮಾಡಿ (ಟಿ-ಶರ್ಟ್, ಅಗಲವಾದ ಅಂಚುಳ್ಳ ಟೋಪಿ ಮತ್ತು ಗುಣಮಟ್ಟದ ಸನ್ಗ್ಲಾಸ್ ಹಾಕಿ)
– ಹೊರಗೆ ಹೋಗುವ 15-20 ನಿಮಿಷಗಳ ಮೊದಲು ಸನ್‌ಸ್ಕ್ರೀನ್ (ಭಾರತದಲ್ಲಿ spf 30) ಅನ್ನು ಹಚ್ಚಿ. ಮಕ್ಕಳು ಪೂಲ್‌ಗೆ ಹೋದ ನಂತರ ಪುನಃ ಹಚ್ಚಿ.
– ನಿಮ್ಮ ಮಗುವಿಗೆ ಬೇಸಿಗೆಯಲ್ಲಿ ಹೆಚ್ಚುವರಿ ದ್ರವ ಅಥವಾ ಎದೆಹಾಲು ನೀಡಿ.
– ಬಿಸಿಯಾಗಿರುವಾಗ ನಿಮ್ಮ ಮಗುವನ್ನು ಕಾರಿನಲ್ಲಿ ಬಿಡಬೇಡಿ
– ಆಯಾ ಸೀಸನ್ನಲ್ಲಿ ಸಿಗುವ ನೀರಿನಂಶವಿರುವ ಹಣ್ಣು, ತರಕಾರಿಗಳನ್ನು ನೀಡಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ