ನಿಮಗಾಗಿ ನೀವು ಸಮಯ ಕೊಡಬೇಕೆಂದು ಹೇಳುವ ಸಂಕೇತಗಳಿವು

ಮನೆ, ಕಚೇರಿ ಕೆಲಸ ಬೇರೆಯವರಿಗೆ ತಮ್ಮನ್ನು ಹೋಲಿಕೆ ಮಾಡುವುದು, ಯಾರೋ ಏನೋ ಅಂದಿದ್ದಕ್ಕೆ ಬೇಸರಗೊಳ್ಳುವುದು ಇದನ್ನೇ ಮಾಡುತ್ತಿದ್ದರೆ ನೀವು ನಿಮಗಾಗಿ ಸಮಯ ಕೊಡುವುದು ಯಾವಾಗ?

ನಿಮಗಾಗಿ ನೀವು ಸಮಯ ಕೊಡಬೇಕೆಂದು ಹೇಳುವ ಸಂಕೇತಗಳಿವು
ಮಾನಸಿಕ ಆರೋಗ್ಯ
Image Credit source: Healthshots.com

Updated on: May 01, 2023 | 9:00 AM

ಮನೆ, ಕಚೇರಿ ಕೆಲಸ ಬೇರೆಯವರಿಗೆ ತಮ್ಮನ್ನು ಹೋಲಿಕೆ ಮಾಡುವುದು, ಯಾರೋ ಏನೋ ಅಂದಿದ್ದಕ್ಕೆ ಬೇಸರಗೊಳ್ಳುವುದು ಇದನ್ನೇ ಮಾಡುತ್ತಿದ್ದರೆ ನೀವು ನಿಮಗಾಗಿ ಸಮಯ ಕೊಡುವುದು ಯಾವಾಗ? ನೀವು ತಿನ್ನುವುದರಿಂದ ಹಿಡಿದು ನಿಮಗೆ ಇಷ್ಟವಾಗುವ ಅಭ್ಯಾಸಗಳ ಬಗ್ಗೆಯೂ ನೀವು ಆಲೋಚಿಸಬೇಕಿದೆ, ನಿಮ್ಮನ್ನು ನೀವು ಮೊದಲು ಪ್ರೀತಿಸಬೇಕು. ಸಣ್ಣ ಸಣ್ಣ ವಿಚಾರಕ್ಕೆ ತಲೆ ಕೆಡಿಸಿಕೊಳ್ಳುವ ಬದಲು ನಿಮ್ಮನ್ನು ಖುಷಿಯಾಗಿಟ್ಟುಕೊಳ್ಳಲು ಏನು ಮಾಡಬೇಕು ಎಂದು ಆಲೋಚನೆ ಮಾಡಿ. ಇದರಿಂದ ನೀವು ಹಲವು ರೀತಿಯ ಬದಲಾವಣೆಯನ್ನು ಕಾಣಬಹುದು.

ನಿಮ್ಮೊಂದಿಗೆ ನೀವು ಹೆಚ್ಚು ಸಮಯ ಕಳೆಯಬೇಕು ಎಂದು ಸೂಚಿಸುವ ಚಿಹ್ನೆಗಳಿವು

ಜನರು ತುಂಬಾ ಮಾತನಾಡುತ್ತಿದ್ದಾರೆ ಎನ್ನುವ ಭಾವನೆ
ಕೆಲವೊಮ್ಮೆ ನೀವು ಇತರರೊಂದಿಗೆ ಗಂಟೆಗಟ್ಟಲೆ ಮಾತನಾಡುತ್ತೀರಿ, ಕೆಲವೊಮ್ಮೆ ಅವರೊಂದಿಗೆ ಐದು ನಿಮಿಷ ಮಾತನಾಡಲೂ ಕಷ್ಟವಾಗುವುದು, ಜನರು ಮಾತನಾಡಿದರೂ ಕಿರಿ ಕಿರಿ ಅನುಭವಿಸುವುದು, ನೆಚ್ಚಿನ ಸಂಗೀತವೂ ತಲೆನೋವು ತರಿಸುವುದು, ಹೀಗಿದ್ದಾಗ ನೀವು ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಲೇಬೇಕು.

ಕೋಣೆಯಲ್ಲಿ ಒಬ್ಬರೇ ಕುಳಿತುಕೊಳ್ಳಿ
ಕೆಲಸದ ಬಳಿಕ ನಿಮ್ಮ ಮನಸ್ಸು ತುಂಬಾ ಆಯಾಸಗೊಂಡಿದ್ದರೆ, ಏಕಾಂತವನ್ನು ಬಯಸುತ್ತಿದ್ದರೆ ಸ್ವಲ್ಪ ಹೊತ್ತು ಕೋಣೆಯಲ್ಲಿ ಸುಮ್ಮನೆ ಕುಳಿತುಕೊಳ್ಳಿ, ನೀವು ಇಷ್ಟಪಡುವ ಸಂಗೀತವನ್ನು ಕೇಳಿ.

ಮನಸ್ಸಿಗೆ ತೋಚಿದ್ದೆಲ್ಲಾ ತಿನ್ನುವುದು
ಅನೇಕ ಮಂದಿ ಕೆಲವು ಸಮಯದಲ್ಲಿ ಮನಸ್ಸಿಗೆ ತೋಚಿದ್ದೆಲ್ಲಾ ತಿನ್ನುತ್ತಾರೆ, ಇದರಿಂದ ಆರೋಗ್ಯ ಕೆಡುವುದಷ್ಟೇ ಅಲ್ಲದೆ, ಮಾನಸಿಕ ಆರೋಗ್ಯವೂ ಹಾಳಾಗುವುದು, ನಿತ್ಯ ಧ್ಯಾನ ಮಾಡಿ.

ಮತ್ತಷ್ಟು ಓದಿ: ಆಕಳಿಕೆ ಏಕೆ ಉಂಟಾಗುತ್ತದೆ ಮತ್ತು ಅದು ಸಾಂಕ್ರಾಮಿಕವೇ?: ಆರೋಗ್ಯ ತಜ್ಞರು ಈ ಕುರಿತು ಏನು ಹೇಳುತ್ತಾರೆ

ಸುಮ್ಮನೆ ಅಳುವುದು
ಒತ್ತಡವು ದೇಹದಿಂದ ಅಳು, ಕೋಪ ಹೀಗೆ ಯಾವುದೇ ರೀತಿಯಿಂದಲಾದರೂ ಹೊರಬರಬಹುದು, ಅಳುತ್ತಿದ್ದರೆ ಅವರು ಯಾವುದೋ ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ ಎಂದರ್ಥ. ಒತ್ತಡದಲ್ಲಿರುವಾಗ ಚಿಕ್ಕಿಚಿಕ್ಕ ವಿಷಯಗಳಿಗೂ ಅಳು ಬರುವುದು. ಆಗ ನೀವು ನಿಮಗಾಗಿ ಸ್ವಲ್ಪ ಸಮಯ ನೀಡಬೇಕೆಂಬುದನ್ನು ತಿಳಿದುಕೊಳ್ಳಿ.

ಸಣ್ಣ ವಿಷಯಗಳಿಗೆ ಅಸಮಾಧಾನಗೊಳ್ಳುವುದು
ನಾವು ಮಾನಸಿಕವಾಗಿ ತೊಂದರೆಗೊಳಗಾದಾಗ ಯಾರಾದರೂ ಏನಾದರೂ ಹೇಳಿದರೆ ಸಾಕು ಅಳು ಬರುವುದು, ಸಣ್ಣ ಸಣ್ಣ ವಿಷಯಗಳಿಗೆ ಕೋಪ ಮಾಡಿಕೊಳ್ಳುವುದನ್ನು ಮಾಡುತ್ತಾರೆ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಭಿನ್ನ ಮಾರ್ಗಗಳಿಗೆ ಅದನ್ನು ಅಳವಡಿಸಿಕೊಳ್ಳಿ.

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us