High cholesterol: ದೇಹದಲ್ಲಿನ ಅತಿಯಾದ​ ಕೊಲೆಸ್ಟ್ರಾಲ್ ನಿಯಂತ್ರಿಸಲು ಈ ಹಣ್ಣುಗಳನ್ನು ಸೇವಿಸಿ

| Updated By: Pavitra Bhat Jigalemane

Updated on: Jan 11, 2022 | 4:03 PM

ಕೊಲೆಸ್ಟ್ರಾಲ್​ ಒಂದು ಲಿಪಿಡ್ ಆಗಿದ್ದು, ಅದು ರಕ್ತದಲ್ಲಿರುವ ಕೊಬ್ಬಿನಂತಹ ಒಂದು ಪದಾರ್ಥ. ದೇಹವು ಕ್ಯಾಲೋರಿಗಳನ್ನು ಲಿಪಿಡ್​ಗಳಾಗಿ ಪರಿವರ್ತಿಸಿ ಅಗತ್ಯವಿದ್ದಾಗ ಶಕ್ತಿಯಾಗಿ ಬಳಸಿಕೊಳ್ಳುತ್ತದೆ. ದೇಹದಲ್ಲಿ ಜೀವಕೋಶಗಳ ಪದರ ತಯಾರಿಕೆಯಲ್ಲಿಯೂ ಕೊಲೆಸ್ಟ್ರಾಲ್​ ಸಹಾಯಕವಾಗಿದೆ.

High cholesterol: ದೇಹದಲ್ಲಿನ ಅತಿಯಾದ​ ಕೊಲೆಸ್ಟ್ರಾಲ್ ನಿಯಂತ್ರಿಸಲು ಈ ಹಣ್ಣುಗಳನ್ನು ಸೇವಿಸಿ
ಪ್ರಾತಿನಿಧಿಕ ಚಿತ್ರ
Follow us on

ದೇಹದಲ್ಲಿ ಅತಿಯಾದ ಕೊಲೆಸ್ಟ್ರಾಲ್​ ಶೇಖರಣೆಯಾದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಕೊಲೆಸ್ಟ್ರಾಲ್​ ಒಂದು ಲಿಪಿಡ್ ಆಗಿದ್ದು, ಅದು ರಕ್ತದಲ್ಲಿರುವ ಕೊಬ್ಬಿನಂತಹ ಒಂದು ಪದಾರ್ಥ. ದೇಹವು ಕ್ಯಾಲೋರಿಗಳನ್ನು ಲಿಪಿಡ್​ಗಳಾಗಿ ಪರಿವರ್ತಿಸಿ ಅಗತ್ಯವಿದ್ದಾಗ ಶಕ್ತಿಯಾಗಿ ಬಳಸಿಕೊಳ್ಳುತ್ತದೆ. ದೇಹದಲ್ಲಿ ಜೀವಕೋಶಗಳ ಪದರ ತಯಾರಿಕೆಯಲ್ಲಿಯೂ ಕೊಲೆಸ್ಟ್ರಾಲ್​ ಸಹಾಯಕವಾಗಿದೆ. ಇದೇ ಕೊಲೆಸ್ಟ್ರಾಲ್​ ಹೆಚ್ಚಾದರೆ ಹೃದಯ ಸಂಬಂಧೀ ಕಾಯಿಲೆಗಳಿಂದ ಹಿಡಿದು ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಎದೆನೋವಿನಂತಹ ಸಮಸ್ಯೆಗಳು ಉಲ್ಬಣವಾಗುತ್ತದೆ. ಹೀಗಾಗಿ  ಕೊಲೆಸ್ಟ್ರಾಲ್​ ಅನ್ನು ಸಮತೋಲನದಲ್ಲಿಡುವ ಆಹಾರವನ್ನು ಸೇವಿಸಿ. ಅದಕ್ಕೆ ನಿಮಗೆ ಕೆಲವು ಹಣ್ಣುಗಳು ಸಹಾಯ ಮಾಡುತ್ತವೆ. ಹಣ್ಣುಗಳು ನಿಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸಿ ಫಿಟ್ ಆಗಿರುವಂತೆ ಮಾಡುತ್ತದೆ. ಹೌದು ನಿಮ್ಮ ದೇಹದಲ್ಲಿನ ಅಧಿಕ ಕೊಬ್ಬನ್ನು ಕರಗಸಿ ಸಮತೋಲನದಲ್ಲಿಡಲು ಈ ಹಣ್ಣುಗಳು ನಿಮಗೆ ಸಹಕಾರಿಯಾಗಿದೆ. 

ಸ್ಟ್ರಾಬೆರಿ 
ಸಮೃದ್ಧವಾದ ಆ್ಯಂಟಿ ಆಕ್ಸಿಡೆಂಟ್​​ ಗುಣ ಹೊಂದಿರುವ ಸ್ಟ್ರಾಬೆರಿ  ಹಣ್ಣುಗಳು ನಿಮ್ಮ ದೇಹದಲ್ಲಿನ ಕೊಬ್ಬನ್ನು ಕರಗಿಸಲು ಸಹಾಯಕಾವಗಿದೆ. ವಿಭಿನ್ನ ರುಚಿಯ ಹೊಂದಿದ್ದು, ಎಲ್ಲರೂ ಇಷ್ಟಪಡುವ  ಹಣ್ಣಾಗಿದೆ. ಚರ್ಮದ ಆರೋಗ್ಯಕ್ಕೂ ಸ್ಟ್ರಾಬೆರಿ  ಹಣ್ಣುಗಳು ಸಹಕಾರಿಯಾಗಿದೆ. ವಿಟಮಿನ್​ ಮತ್ತು ಪೈಬರ್​ ಅಂಶಗಳ ಮೂಲಕ ಈ ಹಣ್ಣು ನಿಮ್ಮ ಹೃದಯವನ್ನು ರಕ್ಷಿಸುತ್ತದೆ. ಇದರಲ್ಲಿರುವ ಪೈಬರ್​ ಅಂಶ ಅಧಿಕ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ.

ಸೇಬು
ಪ್ರತಿದಿನ ಒಂದು ಸೇಬು ಸೇವನೆ ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಸೇಬುವಿನಲ್ಲಿರುವ ಪೈಬರ್​  ಮತ್ತು ಪ್ಯಾಕ್ಟಿನ್​ ಅಂಶಗಳು ದೇಹದಲ್ಲಿರುವ ಅಧಿಕ ಕೊಲೆಸ್ಟ್ರಾಲ್​ ಅನ್ನು ಕರಗಿಸಿ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಶೂನ್ಯ ಪ್ರಮಾಣದಲ್ಲಿ  ಕೊಲೆಸ್ಟ್ರಾಲ್​ ಅಂಶವನ್ನು ಹೊಂದಿರುವ ಸೇಬು  ಎಲ್ಲಾ ಕಾಲದಲ್ಲೂ ದೇಹವನ್ನು ಆರೋಗ್ಯವಾಗಿಸಲು ಸಹಾಯಕವಾಗಿದೆ.

ವಿಟಮಿನ್​ ಸಿ 
ವಿಟಮಿನ್​ ಸಿ ಯಥೇಚ್ಛವಾಗಿರುವ ಹಣ್ಣುಗಳಾದ ಕಿತ್ತಳೆ, ಹಸಿರು ದ್ರಾಕ್ಷಿ ಹಣ್ಣುಗಳು ಕೊಲೆಸ್ಟ್ರಾಲ್​ ಪ್ರಮಾಣವನ್ನು ನಿಯಂತ್ರಿಸುತ್ತವೆ.  ಕಿಡ್ನಿ ಸ್ಟೋನ್​, ಕ್ಯಾನ್ಸರ್​​ನಂತಹ ರೋಗಗಳಿಂದಲೂ ದೂರವಿರಲು ಈ ಸಿಟ್ರಿಕ್​ ಅಂಶವಿರುವ ಹಣ್ಣುಗಳು ಸಹಾಯಕವಾಗಿದೆ. ಕೊಲೆಸ್ಟ್ರಾಲ್​ ಪ್ರಮಾಣ ಕಡಿಮೆ ಇರುವ ಕಾರಣ ಈ ಹಣ್ಣುಗಳ ಸೇವನೆ ನಿಮಗೆ ಕೊಬ್ಬನ್ನು ಸಮತೋಲನದಲ್ಲಿಡುವಂತೆ ಮಾಡುತ್ತದೆ.

ದ್ರಾಕ್ಷಿ ಹಣ್ಣುಗಳು
ಚಳಿಗಾಲದಲ್ಲಿ ದ್ರಾಕ್ಷಿ ಸೇವನೆ ನಿಮ್ಮ ಕೊಲೆಸ್ಟ್ರಾಲ್​ ಮಟ್ಟವನ್ನು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲದೆ ನಿಮ್ಮ ದೇಹದ ಅತಿಯಾದ ತೂಕವನ್ನು ಕಡಿಮೆಗೊಳಿಸಲು ಸಹಾಯಕವಾಗಿದೆ. ಸಮೃದ್ದವಾದ ವಿಟಮಿನ್  ಸಿ ಮತ್ತು ಕೆ ಯನ್ನು ಹೊಂದಿರುವ ದ್ರಾಕ್ಷಿ ಹಣ್ಣಗಳು ಕೆಲವು ಹಂತದ ಕ್ಯಾನ್ಸರ್​ಗಳನ್ನೂ ನಿಯಂತ್ರಿಸುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ.

ಅವಕಾಡೋ ​
ಅವಾಕಾಡೋ ಅಥವಾ ಬೆಣ್ಣೆ ಹಣ್ಣುಗಳು ಶೂನ್ಯ  ಪ್ರಮಾಣದ ಕೊಲೆಸ್ಟ್ರಾಲ್ ಅಂಶವನ್ನು ಹೊಂದಿದೆ. ಅವಕಾಡೋ ಸೇವನೆಯಿಂದ ನಿಮ್ಮ ದೇಹದಲ್ಲಿನ  ಕೊಲೆಸ್ಟ್ರಾಲ್​ ಅಂಶವನ್ನು ನಿಯಂತ್ರಿಸಬಹುದು ವಿಟಮಿನ್​ ಬಿ, ಇ, ಬಿ6, ಪೊಟ್ಯಾಷಿಯಂ, ಪೈಬರ್​,  ಮ್ಯಾಗ್ನಿಶಿಯಂ ಅಂಶಗಳು ಸಮೃದ್ಧವಾಗಿವೆ. ಇವು ದೇಹವನ್ನು ಸುಸ್ಥಿತಿಯಲ್ಲಿಡಲು ಸಹಾಯಕವಾಗಿದೆ.

ಇದನ್ನೂ ಓದಿ:

Turmeric side effects: ಅತಿಯಾದ ಅರಿಶಿಣ ಸೇವನೆಯು ದೇಹಕ್ಕೆ ಹಾನಿಕಾರಕ