
ಸಮಾಜ ಎಷ್ಟೇ ಮುಂದುವರೆದಿದ್ದರೂ ಸಹ ಇಂದಿಗೂ ಸಹ ಮಹಿಳೆಯರು (women) ಒಬ್ಬಂಟಿಯಾಗಿ ಪ್ರಯಾಣಿಸುವಾಗ ಕಹಿ ಘಟನೆಗಳನ್ನು ಅನುಭವಿಸುತ್ತಾರೆ. ದೌರ್ಜನ್ಯಗಳನ್ನು ಎದುರಿಸುತ್ತಾರೆ. ಇಂತಹ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಮಹಿಳೆಯರು ಕಹಿ ಘಟನೆಗಳನ್ನು ಅನುಭವಿಸಿದಾಗ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಒಂದಷ್ಟು ಸುರಕ್ಷತಾ ಸಾಧನಗಳನ್ನು ಯಾವಾಗಲೂ ತಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಂಡಿರಬೇಕಾಗುತ್ತದೆ. ಈ ಸಣ್ಣ ಸುರಕ್ಷತಾ ಸಾಧನಗಳು ಪ್ರತಿ ಹೆಣ್ಮಕ್ಳಿಗೂ ಸಹ ದೊಡ್ಡ ಸಂಕಷ್ಟಗಳಿಂದ ಪಾರಾಗಲೂ ಸಹಾಯವನ್ನು ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯೂ ಸಹ ಮೇಕಪ್ ಉತ್ಪನ್ನಗಳಿಗಿಂತ ಹೆಚ್ಚಾಗಿ ಈ ಒಂದಷ್ಟು ವಸ್ತುಗಳನ್ನು ತಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಂಡಿರಲೇಬೇಕು.
ಮಹಿಳೆಯರು ತಮ್ಮ ಬ್ಯಾಗ್‌ನಲ್ಲಿ ಯಾವಾಗಲೂ ಪೆಪ್ಪರ್ ಸ್ಪ್ರೇ ಇಟ್ಟುಕೊಂಡೇ ಓಡಾಡಬೇಕು. ಒಬ್ಬಂಟಿಯಾಗಿ ಓಡಾಡುವ ಸಂದರ್ಭದಲ್ಲಿ ಯಾರಾದರೂ ನಿಮ್ಮನ್ನು ತಡೆದು ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದರೆ ಅಥವಾ ನಿಮಗೆ ಕಿರುಕುಳವನ್ನು ನೀಡಿದರೆ, ತಕ್ಷಣ ಬ್ಯಾಗ್‌ನಿಂದ ಪೆಪ್ಪರ್ ಸ್ಪ್ರೇ ತೆಗೆದು ಅವರ ಕಣ್ಣುಗಳಿಗೆ ಸಿಂಪಡಿಸಿ. ಹೀಗೆ ಮಾಡುವ ಮೂಲಕ ಯಾರ ಸಹಾಯವೂ ಇಲ್ಲದೇ ನಿಮ್ಮನ್ನು ನೀವು ಸಂಕಷ್ಟದಿಂದ ರಕ್ಷಿಸಿಕೊಳ್ಳಬಹುದು.
ಒಬ್ಬಂಟಿಯಾಗಿ ಪ್ರಯಾಣಿಸುವ ಮಹಿಳೆಯರು ಅಗತ್ಯವಾಗಿ ತಮ್ಮ ಬ್ಯಾಗ್‌ನಲ್ಲಿ ಸೇಫ್ಟಿ ಅಲಾರಾಂ, ಜೋರಾಗಿ ಸಸದ್ದು ಮಾಡುವ ವಿಸಿಲ್ ಅನ್ನು ಇಟ್ಟುಕೊಂಡಿರಬೇಕು. ಇತ್ತೀಚಿನ ದಿನಗಳಲ್ಲಿ, ಮಾರುಕಟ್ಟೆಯಲ್ಲಿ ಬಟನ್ ಒತ್ತಿದಾಗ ದೊಡ್ಡ ಶಬ್ದವನ್ನು ಹೊರಸೂಸುವ ಸಣ್ಣ ಅಲಾರಾಂ ಸಾಕಷ್ಟು ಲಭ್ಯವಿದೆ. ನಿಮ್ಮ ಬಳಿ ಅಂತಹ ಅಲಾರಾಂ ಇಲ್ಲದಿದ್ದರೆ, ನೀವು ನಿಮ್ಮ ಬ್ಯಾಗ್‌ನಲ್ಲಿ ವಿಸಿಲ್ ಅನ್ನು ಇಟ್ಟುಕೊಳ್ಳಬಹುದು. ನಿಮಗೆ ಅಪಾಯ ಎದುರಾದಾಗ ಅಲಾರಾಂ ಒತ್ತುವ ಮೂಲಕ ಯಾರನ್ನಾದರೂ ರಕ್ಷಣೆಗೆ ಕರೆಯಬಹುದು.
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಸುರಕ್ಷತೆಗೆ ಪ್ರಮುಖ ಭದ್ರತಾ ಸಾಧನವಾಗಿದೆ. ಹೀಗಿರುವಾಗ ಕೆಲವೊಮ್ಮೆ ದೂರ ಪ್ರಯಾಣದ ವೇಳೆ ಸ್ಮಾರ್ಟ್‌ಫೋನ್ ಬ್ಯಾಟರಿ ಖಾಲಿಯಾಗುತ್ತದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಫೋನ್ ಬ್ಯಾಟರಿ ಖಾಲಿಯಾದರೆ ಪೊಲೀಸ್ ಅಥವಾ ಕುಟುಂಬ ಸದಸ್ಯರಿಗೆ ಕರೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮನೆಯಿಂದ ಹೊರಡುವಾಗ ಬ್ಯಾಗ್‌ನಲ್ಲಿ ಪವರ್ ಬ್ಯಾಂಕ್ ಇಟ್ಟುಕೊಂಡಿರಿ ಜೊತೆಗೆ ಫೋನ್ ಚಾರ್ಜ್ ಖಾಲಿಯಾಗದಂತೆ ನೋಡಿಕೊಳ್ಳಿ. ಇದರಿಂದ ನೀವು ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಕುಟುಂಬ ಸದಸ್ಯರಿಗೆ ತಕ್ಷಣ ಕರೆ ಮಾಡಬಹುದು, ನಿಮ್ಮ ಲೈವ್ ಲೊಕೇಷನ್ ಹಂಚಿಕೊಳ್ಳಬಹುದು ಮತ್ತು ಸಮಸ್ಯೆಗಳು ಎದುರಾದಾಗ ಪೊಲೀಸರಿಗೂ ಕರೆ ಮಾಡಬಹುದು.
ಇದನ್ನೂ ಓದಿ: ಬೆಳಿಗ್ಗೆ ಅಥವಾ ಸಂಜೆ; ನೆಲ ಒರೆಸಲು ಉತ್ತಮ ಸಮಯ ಯಾವುದು?
ನೀವು ತೊಂದರೆಯಲ್ಲಿ ಸಿಲುಕಿದಾಗ, ಸಣ್ಣ ಸಂಗತಿಯು ಸಹ ನಿಮ್ಮ ಸಹಾಯಕ್ಕೆ ಬರುತ್ತದೆ. ಆದ್ದರಿಂದ ಯಾವಾಗಲೂ ಸಣ್ಣ ಚಾಕು ಮತ್ತು ಸೇಫ್ಟಿ ಪಿನ್ ಅನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡಿರಿ. ಯಾರಾದರೂ ನಿಮ್ಮನ್ನು ಫಾಲೋ ಮಾಡಿದರೆ ಅಥವಾ ನಿಮ್ಮ ಮೇಲೆ ದೌರ್ಜನ್ಯ ಎಸಗಲು ಪ್ರಯತ್ನಿಸಿದರೆ, ಚಾಕುವಿನ ಸಹಾಯದಿಂದ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಇದಲ್ಲದೆ ಕತ್ತರಿಯೂ ಸಹ ಸಹಾಯಕ್ಕೆ ಬರುತ್ತದೆ.
ರಾತ್ರಿಯಲ್ಲಿ ಹೊರಗೆ ಹೋಗುವಾಗ ಪ್ರಕಾಶಮಾನ ಬೆಳಕನ್ನು ಬೀರುವ ಸಣ್ಣ ಟಾರ್ಚ್ ಅನ್ನು ಬ್ಯಾಗ್‌ನಲ್ಲಿ ಇಟ್ಟುಕೊಳ್ಳಬೇಕು. ಇದು ನಿಮಗೆ ಕತ್ತಲೆಯಲ್ಲಿ ಸರಿಯಾಗಿ ಹೋಗಲು ಮಾರ್ಗದರ್ಶನ ಮಾಡುವುದಲ್ಲದೆ, ಯಾರಾದರೂ ನಿಮ್ಮನ್ನು ಹಿಂಬಾಲಿಸಿಕೊಂಡು ಬಂದರೆ ಅವರ ಕಣ್ಣಿಗೆ ಆ ಟಾರ್ಚ್ ಅನ್ನು ಬೆಳಗಿಸುವ ಮೂಲಕ ಅವರನ್ನು ಅವರನ್ನು ಗೊಂದಲಗೊಳಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ