World Snakes Day 2026: ವಿಶ್ವ ಹಾವುಗಳ ದಿನದ ಆಚರಣೆಯ ಹಿಂದಿದೆ ಈ ಉದ್ದೇಶ

ಪರಿಸರ ಸಮತೋಲನದಲ್ಲಿ ಈ ಹಾವುಗಳ ಪಾತ್ರವು ಅಗಾಧವಾದದ್ದು. ಹೀಗಾಗಿ ಈ ಹಾವುಗಳ ರಕ್ಷಣೆಗಾಗಿ ಹಾಗೂ ಅವುಗಳ ಸಂತತಿಯನ್ನು ಉಳಿಸುವ ಸಲುವಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಅದುವೇ ವಿಶ್ವ ಹಾವುಗಳ ದಿನ. ಪ್ರತಿ ವರ್ಷ ಜುಲೈ 16 ರಂದು ವಿಶ್ವ ಹಾವುಗಳ ದಿನವನ್ನು ಆಚರಿಸಲಾಗುತ್ತದೆ. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

World Snakes Day 2026: ವಿಶ್ವ ಹಾವುಗಳ ದಿನದ ಆಚರಣೆಯ ಹಿಂದಿದೆ ಈ ಉದ್ದೇಶ
ವಿಶ್ವ ಹಾವುಗಳ ದಿನ
Image Credit source: Alan Tunnicliffe Photography/Moment/Getty Images

Updated on: Jul 16, 2026 | 9:52 AM

ಹಾವುಗಳೆಂದರೆ (Snakes) ಎಲ್ಲರಿಗೂ ಭಯನೇ. ತಮ್ಮ ಮನೆಯ ಸುತ್ತ ಮುತ್ತ ಹಾವುಗಳು ಬಂತೆಂದರೆ ಓಡಿ ಹೋಗುವವರೇ ಹೆಚ್ಚು. ಆದರೆ ಈ ಹಾವುಗಳ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. ಈ ಭಾವನೆಯನ್ನು ತೊಡೆದು ಹಾಕಿ ಪರಿಸರ ಸಮತೋಲನದಲ್ಲಿ ಅವುಗಳ ಪಾತ್ರವನ್ನು ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 16 ರಂದು ವಿಶ್ವ ಹಾವುಗಳ ದಿನವನ್ನು (World Snakes Day) ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಆಚರಣೆ ಹುಟ್ಟಿಕೊಂಡದ್ದು ಹೇಗೆ? ಈ ಮಾಹಿತಿ ಇಲ್ಲಿದೆ ನೋಡಿ.

ವಿಶ್ವ ಹಾವುಗಳ ದಿನದ ಇತಿಹಾಸವೇನು?

ವಿಶ್ವ ಹಾವು ದಿನವನ್ನು ಯಾವಾಗಿನಿಂದ ಆಚರಣೆ ಮಾಡಿಕೊಂಡು ಬರಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಆದರೆ ಈ ಹಾವುಗಳ ಉಳಿವಿಗಾಗಿ ಬಹಳ ಹಿಂದಿನಿಂದಲೂ ಕೆಲ ಧಾರ್ಮಿಕ ಆಚರಣೆಗಳು ಜಾರಿಯಲ್ಲಿದೆ.

ಇದನ್ನೂ ಓದಿ: World Youth Skills Day 2026: ವಿಶ್ವ ಯುವ ಕೌಶಲ್ಯ ದಿನದ ಇತಿಹಾಸ, ಮಹತ್ವ ತಿಳಿಯಿರಿ

ವಿಶ್ವ ಹಾವುಗಳ ದಿನ ಮಹತ್ವ ಹಾಗೂ ಆಚರಣೆ ಹೇಗೆ?

ಭಾರತವು ಸರಿಸುಮಾರು 300 ಹಾವು ಪ್ರಭೇದಗಳಿವೆ. ಆದರೆ ಈ ಎಲ್ಲಾ ಹಾವುಗಳು ವಿಷಕಾರಿಗಳಲ್ಲ. ಆದರೆ ಇವು ಪರಿಸರ ಸಮತೋಲನಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತವೆ. ಇಲಿಗಳನ್ನು ನಿಯಂತ್ರಿಸುವುದರೊಂದಿಗೆ ಅವುಗಳಿಂದ ಹರಡುವ ರೋಗಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾವುಗಳ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಉತ್ತೇಜಿಸಲು, ಅವುಗಳ ಸಂತತಿಗಳ ಉಳಿಸಲು ಹಾಗೂ ತಪ್ಪು ಕಲ್ಪನೆಯನ್ನು ಹೋಗಲಾಡಿಸುವುದೇ ಈ ದಿನದ ಮೂಲ ಉದ್ದೇಶ. ಈ ಉರಗ ದಿನದಂದು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇನ್ನಷ್ಟು ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 9:51 am, Thu, 16 July 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us