Credit card late payment charges: ಐಸಿಐಸಿಐ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್ ಸೇರಿ ಕ್ರೆಡಿಟ್​ ಕಾರ್ಡ್ ವಿಳಂಬ ಪಾವತಿ​ ಶುಲ್ಕಗಳು

| Updated By: Srinivas Mata

Updated on: Jan 13, 2022 | 11:45 AM

ಐಸಿಐಸಿಐ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಹಾಗೂ ಎಸ್​ಬಿಐ ಕಾರ್ಡ್ಸ್​ನಿಂದ ವಿಧಿಸುವ ಕ್ರೆಡಿಟ್​ ಕಾರ್ಡ್​ಗಳ ವಿಳಂಬ ಪಾವತಿ ಶುಲ್ಕದ ಬಗ್ಗೆ ಮಾಹಿತಿ ಇಲ್ಲಿದೆ.

Credit card late payment charges: ಐಸಿಐಸಿಐ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್ ಸೇರಿ ಕ್ರೆಡಿಟ್​ ಕಾರ್ಡ್ ವಿಳಂಬ ಪಾವತಿ​ ಶುಲ್ಕಗಳು
ಸಾಂದರ್ಭಿಕ ಚಿತ್ರ
Follow us on

ಕ್ರೆಡಿಟ್​ ಕಾರ್ಡ್​ ಮೊತ್ತವನ್ನು ಆಯಾ ತಿಂಗಳ ಗಡುವಿನೊಳಗೆ ಪಾವತಿ ಮಾಡದಿದ್ದರೆ ದಂಡ ಬೀಳುತ್ತde. ಅದರ ಜತೆಗೆ ಕಾರ್ಡ್​ದಾರರ ಕ್ರೆಡಿಟ್​ ಸ್ಕೋರ್​ ಮೇಲೂ ಅದರ ಪರಿಣಾಮ ಇರುತ್ತದೆ. ಇದೀಗ ಐಸಿಐಸಿಐ ಬ್ಯಾಂಕ್​ ಫೆಬ್ರವರಿ 10ರಿಂದ ಅನ್ವಯ ಆಗುವಂತೆ ಕ್ರೆಡಿಟ್ ಕಾರ್ಡ್ ಶುಲ್ಕಗಳನ್ನು ಪರಿಷ್ಕರಿಸಿದೆ. ಬ್ಯಾಂಕ್​ನಿಂದ ನೀಡಿರುವ ಮಾಹಿತಿಯಂತೆ, ನಗದು ಅಡ್ವಾನ್ಸ್​ಗೆ ವಹಿವಾಟು ಶುಲ್ಕ ಎಂದು ಮೊತ್ತದ ಮೇಲೆ ಶೇ 2.50ರಷ್ಟು ಪಾವತಿಸಬೇಕು. ಇನ್ನು ಕನಿಷ್ಠ ಮೊತ್ತ 500 ರೂಪಾಯಿ. ಒಂದು ವೇಳೆ ಚೆಕ್ ರಿಟರ್ನ್ ಆದಲ್ಲಿ ಆ ಚೆಕ್​ನ ಒಟ್ಟ ಮೊತ್ತದ ಶೇ 2ರಷ್ಟು, ಕನಿಷ್ಠ 500 ರೂಪಾಯಿ ಶುಲ್ಕವಾಗುತ್ತದೆ. ಇದರ ಜತೆಗೆ ಐಸಿಐಸಿಐ ಬ್ಯಾಂಕ್​ನಿಂದ ವಿಳಂಬ ಶುಲ್ಕವನ್ನೂ ಪರಿಷ್ಕರಣೆ ಮಾಡಲಾಗಿದೆ. ಐಸಿಐಸಿಐ ಬ್ಯಾಂಕ್​ನ ಎಮರಾಲ್ಡ್ ಕ್ರೆಡಿಟ್ ಕಾರ್ಡ್ ಒಂದಕ್ಕೆ ಬಿಟ್ಟು, ಉಳಿದಿದ್ದಕ್ಕೆ ಇದು ಅನ್ವಯಿಸುತ್ತದೆ. ಒಂದು ವೇಳೆ ಬಾಕಿ ಉಳಿಸಿದ ಮೊತ್ತ 100 ರೂಪಾಯಿಗಿಂತ ಕಡಿಮೆ ಇದ್ದ್ಲಲ್ಲಿ ಬ್ಯಾಂಕ್ ಯಾವುದೇ ಶುಲ್ಕ ವಿಧಿಸಲ್ಲ. ಬಾಕಿ ಉಳಿಸಿಕೊಂಡ ಮೊತ್ತ ಹೆಚ್ಚಾಗುತ್ತಾ ಹೋದಂತೆ ಈ ವಿಳಂಬ ಶುಲ್ಕ ಜಾಸ್ತಿ ಆಗುತ್ತಾ ಹೋಗುತ್ತದೆ. 50,000 ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಬ್ಯಾಂಕ್​ನಿಂದ ಅತಿಹೆಚ್ಚು, ಅಂದರೆ 1200 ರೂಪಾಯಿ ಶುಲ್ಕ ಆಗುತ್ತದೆ.

ಅಂದಹಾಗೆ, 50 ಸಾವಿರ ರೂಪಾಯಿ ಮೇಲ್ಪಟ್ಟ ಮೊತ್ತ ಬಾಕಿ ಉಳಿಸಿಕೊಂಡಲ್ಲಿ ಕ್ರೆಡಿಟ್​ ಕಾರ್ಡ್​ ವಿತರಿಸುವ ಇತರ ಪ್ರಮುಖ ಸಂಸ್ಥೆಗಳಾದ ಎಚ್​ಡಿಎಫ್​ಸಿ ಬ್ಯಾಂಕ್, ಎಸ್​ಬಿಐ ಕಾರ್ಡ್, ಆಕ್ಸಿಸ್​ ಬ್ಯಾಂಕ್​ನಂಥವು ಕ್ರಮವಾಗಿ 1300, 1300 ಹಾಗೂ 1000 ವಿಳಂಬ ಶುಲ್ಕವನ್ನು ವಿಧಿಸುತ್ತವೆ.

ಯಾವ ಕ್ರೆಡಿಟ್​ ಕಾರ್ಡ್​​ನ ಶುಲ್ಕ ಎಷ್ಟಿದೆ ಎಂಬುದರ ವಿವರ ಇಲ್ಲಿದೆ:
1) ಐಸಿಐಸಿಐ ಬ್ಯಾಂಕ್- ನಗದು ವಿಥ್​ಡ್ರಾ ಮೊತ್ತದ ಮೇಲೆ ಶೇ 2.5ರಷ್ಟು ಅಥವಾ 500 ರೂಪಾಯಿ, ಇವೆರಡರಲ್ಲಿ ಯಾವುದು ಹೆಚ್ಚೋ ಅಷ್ಟು ಮೊತ್ತ.
100 ರೂ. ಒಳಗಿದ್ದಲ್ಲಿ: ಯಾವುದೇ ಶುಲ್ಕ ಇಲ್ಲ
100ರಿಂದ 500: 100
501-5000: 500
5001- 10000: 750
10001- 25000: 900
25001- 50000: 1000
50000 ಮೇಲ್ಪಟ್ಟು: 1200

ಮಿತಿಯನ್ನು ಮೀರಿದ ಮೊತ್ತಕ್ಕೆ ಶೇ 2.5ರಷ್ಟು ಅಥವಾ ಕನಿಷ್ಠ 550 ರೂಪಾಯಿ. ಬಾಕಿ ಉಳಿಸಿಕೊಂಡ ಮೊತ್ತದ ಮೇಲೆ ಶೇ 2ರಷ್ಟು, ಕನಿಷ್ಠ 500 ರೂಪಾಯಿ.

2) ಎಚ್​ಡಿಎಫ್​ಸಿ ಬ್ಯಾಂಕ್- ನಗದು ವಿಥ್​ಡ್ರಾ ಮೊತ್ತದ ಮೇಲೆ ಶೇ 2.5ರಷ್ಟು ಅಥವಾ 500 ರೂಪಾಯಿ, ಇವೆರಡರಲ್ಲಿ ಯಾವುದು ಹೆಚ್ಚೋ ಅಷ್ಟು ಮೊತ್ತ.
100 ರೂ. ಒಳಗಿದ್ದಲ್ಲಿ: ಯಾವುದೇ ಶುಲ್ಕ ಇಲ್ಲ
100ರಿಂದ 500: 100
501-5000: 500
5001- 10000: 600
10001- 25000: 800
25001- 50000: 1100
50000 ಮೇಲ್ಪಟ್ಟು: 1300

ಮಿತಿಯನ್ನು ಮೀರಿದ ಮೊತ್ತಕ್ಕೆ ಶೇ 2.5ರಷ್ಟು ಅಥವಾ ಕನಿಷ್ಠ 550 ರೂಪಾಯಿ. ಬಾಕಿ ಉಳಿಸಿಕೊಂಡ ಮೊತ್ತದ ಮೇಲೆ ಶೇ 2ರಷ್ಟು, ಕನಿಷ್ಠ 450 ರೂಪಾಯಿ.

3) ಆಕ್ಸಿಸ್ ಬ್ಯಾಂಕ್- ನಗದು ವಿಥ್​ಡ್ರಾ ಮೊತ್ತದ ಮೇಲೆ ಶೇ 2.5ರಷ್ಟು ಅಥವಾ 500 ರೂಪಾಯಿ, ಇವೆರಡರಲ್ಲಿ ಯಾವುದು ಹೆಚ್ಚೋ ಅಷ್ಟು ಮೊತ್ತ. (ಬರ್ಗಂಡಿ ಪ್ರೈವೇಟ್, ರಿಸರ್ವ್ ಅಂಡ್ ಮ್ಯಾಗ್ನಸ್ ಸಿಸಿಗೆ ಮನ್ನಾ ಆಗುತ್ತದೆ)
300 ರೂ. ಒಳಗಿದ್ದಲ್ಲಿ: ಯಾವುದೇ ಶುಲ್ಕ ಇಲ್ಲ
301ರಿಂದ 500: 100
501-1000: 500
1001- 10000: 500
10001- 25000: 750
25001- 50000: 1000
50000 ಮೇಲ್ಪಟ್ಟು: 1000

ಮಿತಿಯನ್ನು ಮೀರಿದ ಮೊತ್ತಕ್ಕೆ ಶೇ 3ರಷ್ಟು ಅಥವಾ ಕನಿಷ್ಠ 550 ರೂಪಾಯಿ. ಬಾಕಿ ಉಳಿಸಿಕೊಂಡ ಮೊತ್ತದ ಮೇಲೆ ಶೇ 2ರಷ್ಟು, ಕನಿಷ್ಠ 450 ರೂಪಾಯಿ, ಗರಿಷ್ಠ 1500 ರೂಪಾಯಿ.

4) ಎಸ್​ಬಿಐ ಕಾರ್ಡ್- ನಗದು ವಿಥ್​ಡ್ರಾ ಮೊತ್ತದ ಮೇಲೆ ಶೇ 2.5ರಷ್ಟು ಅಥವಾ 500 ರೂಪಾಯಿ, ಇವೆರಡರಲ್ಲಿ ಯಾವುದು ಹೆಚ್ಚೋ ಅಷ್ಟು ಮೊತ್ತ.
500 ರೂ. ಒಳಗಿದ್ದಲ್ಲಿ: ಯಾವುದೇ ಶುಲ್ಕ ಇಲ್ಲ
501ರಿಂದ 1000: 400
1001-10000: 750
10001- 25000: 950
25001- 50000: 1100
50000 ಮೇಲ್ಪಟ್ಟು: 1300

ಮಿತಿಯನ್ನು ಮೀರಿದ ಮೊತ್ತಕ್ಕೆ ಶೇ 2.5ರಷ್ಟು ಅಥವಾ ಕನಿಷ್ಠ 600 ರೂಪಾಯಿ. ಬಾಕಿ ಉಳಿಸಿಕೊಂಡ ಮೊತ್ತದ ಮೇಲೆ ಶೇ 2ರಷ್ಟು, ಕನಿಷ್ಠ 500 ರೂಪಾಯಿ.

ಕ್ರೆಡಿಟ್​ ಕಾರ್ಡ್ ಬಳಕೆದಾರರಿಗೆ ಕಾರ್ಡ್​ ಮೂಲಕ ದೊರೆಯುವ ಮಿತಿಯನ್ನೂ ಮೀರಿ ಖರೀದಿಗೆ ಅವಕಾಶ ಇರುತ್ತದೆ. ಖರೀದಿ ಸಮಯದಲ್ಲಿ ಅವಮಾನವೋ ಮುಜುಗರವೋ ಅನುಭವಿಸಬಾರದು ಎಂಬ ಕಾರಣಕ್ಕೆ ನೀಡುವ ಸವಲತ್ತು ಇದು. ಮೇಲ್ಕಂಡಲ್ಲಿ ಎಲ್ಲೆಲ್ಲ ಮಿತಿ ಮೀರಿದ ಮೊತ್ತದ (Credit card over limit) ಮೇಲಿನ ಶುಲ್ಕ ಅಂತಿದೆಯೋ ಅದು ಬಳಕೆದಾರರು ತಮಗಿರುವ ಕ್ರೆಡಿಟ್ ಕಾರ್ಡ್​ ಮಿತಿಯನ್ನೂ ಮೀರಿ ಬಳಸಿದಲ್ಲಿ ಪಾವತಿಸುವುದು.

ಇದನ್ನೂ ಓದಿ: Credit Card: ಮೊದಲ ಸಲ ಕ್ರೆಡಿಟ್​ ಕಾರ್ಡ್​ ಬಳಸುತ್ತಿರುವವರು ಈ 6 ಶುಲ್ಕಗಳ ಬಗ್ಗೆ ತಿಳಿದಿರಬೇಕು