Uttarkashi Earthquake: ಉತ್ತರಕಾಶಿಯಲ್ಲಿ ಕಂಪಿಸಿದ ಭೂಮಿ, 3.0 ತೀವ್ರತೆ ದಾಖಲು

ಉತ್ತರಾಖಂಡದ ಉತ್ತರಕಾಶಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಬೆಳಗ್ಗೆ 3.0 ತೀವ್ರತೆಯ ಭೂಕಂಪ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಯಾವುದೇ ಪ್ರಾಣಹಾನಿ ಕುರಿತು ವರದಿಯಾಗಿಲ್ಲ.

Uttarkashi Earthquake: ಉತ್ತರಕಾಶಿಯಲ್ಲಿ ಕಂಪಿಸಿದ ಭೂಮಿ, 3.0 ತೀವ್ರತೆ ದಾಖಲು
ಭೂಕಂಪ
Image Credit source: Mint

Updated on: Apr 06, 2023 | 7:24 AM

ಉತ್ತರಾಖಂಡದ ಉತ್ತರಕಾಶಿ(Uttarkashi) ಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಬೆಳಗ್ಗೆ 3.0 ತೀವ್ರತೆಯ ಭೂಕಂಪ(Earthquake) ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಯಾವುದೇ ಪ್ರಾಣಹಾನಿ ಕುರಿತು ವರದಿಯಾಗಿಲ್ಲ. ಗುರುವಾರ ಬೆಳಗಿನ ಜಾವ ಉತ್ತರಕಾಶಿಯ 5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.
ಏಪ್ರಿಲ್ 1 ರಂದು, ಪೋರ್ಟ್ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ 140 ಕಿಮೀ ENE ನಲ್ಲಿ ರಿಚರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು NCS ಮಾಹಿತಿ ನೀಡಿದೆ. ರಾತ್ರಿ 11.56ರ ಸುಮಾರಿಗೆ ಭೂಕಂಪ ಸಂಭವಿಸಿತ್ತು.

ಇತ್ತೀಚಿನ ದಿನಗಳಲ್ಲಿ, ಟರ್ಕಿ ಮತ್ತು ಸಿರಿಯಾದಲ್ಲಿ ಅತಿದೊಡ್ಡ ವಿಕೋಪ ಕಂಡುಬಂದಿದೆ, ಈ ವರ್ಷ, ಫೆಬ್ರವರಿ 6 ರಂದು ಸಂಭವಿಸಿದ ಭೂಕಂಪದಿಂದಾಗಿ, ಎರಡೂ ದೇಶಗಳಲ್ಲಿ 40 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ವಿನಾಶಕಾರಿ ಭೂಕಂಪದ ನಂತರ ಭಾರತವು ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ತನ್ನ ತಂಡಗಳನ್ನು ಕಳುಹಿಸಿತ್ತು. ಭೂಕಂಪವು ಎಷ್ಟು ವಿನಾಶಕಾರಿಯಾಗಿತ್ತೆಂದರೆ ನೂರಾರು ಕಟ್ಟಡಗಳು ನೆಲಸಮವಾದವು.

ಮತ್ತಷ್ಟು ಓದಿ: ICDRI Conference 2023: ಹಿಂದಿನ ಘಟನೆಗಳಿಂದ ಕಲಿಯುವುದೊಂದೇ ದಾರಿ: ವಿಕೋಪಗಳ ಕುರಿತು ಪ್ರಧಾನಿ ಮೋದಿ ಮಾತು

ಈ ಎರಡೂ ದೇಶಗಳಲ್ಲಿ ಪರಿಸ್ಥಿತಿ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಕಟ್ಟಡಗಳ ಅವಶೇಷಗಳು ಎಲ್ಲೆಂದರಲ್ಲಿ ಬಿದ್ದಿವೆ. ಭೂಕಂಪನದ ಬಗ್ಗೆ ಜನರಲ್ಲಿ ಸಾಕಷ್ಟು ಭೀತಿ ಉಂಟಾಗಿದ್ದು, ಜನರು ತಮ್ಮ ಮನೆಗಳಿಗೆ ಹೋಗಲು ಇನ್ನೂ ಭಯಪಡುತ್ತಿದ್ದಾರೆ. ಹೆಚ್ಚಿನ ಜನರು ರಸ್ತೆ ಬದಿಯಲ್ಲಿ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ.

ವಿಪತ್ತುಗಳ ಪರಿಣಾಮವು ಕೇವಲ ಸ್ಥಳೀಯವಾಗಿರುವುದಿಲ್ಲ. ಒಂದು ಪ್ರದೇಶದಲ್ಲಿನ ನೈಸರ್ಗಿಕ ವಿಪತ್ತುಗಳು ವಿಭಿನ್ನ ದೇಶ, ಪ್ರದೇಶಗಳ ಮೇಲೆಯೂ ಪರಿಣಾಮ ಬೀರುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us