ಬಂಗಾರದ ಈ ಒಂದು ಮಾಸ್ಕ್‌ ರೇಟ್‌ ಕೇಳಿದ್ರೆ ದಂಗಾಗಿ ಬಿಡ್ತಿರಾ!

|

Updated on: Jul 19, 2020 | 8:34 PM

ಕೋಯಂಬತ್ತೂರ್‌: ಎಲ್ಲೆಡೆ ಈಗ ಕೊರೊನಾದ್ದೇ ಹಾವಳಿ. ಆದ್ರೆ ತಮಿಳುನಾಡಿನ ಈ ಚಿನ್ನದ ಕರಕುಶಲಗಾರರೊಬ್ಬರಿಗೆ ಮಾತ್ರ ಈ ಕೊರೊನಾವನ್ನೇ ಬಂಡವಾಳ ಮಾಡಿಕೊಂಡು ತಮ್ಮ ಪ್ರತಿಭೆಯನ್ನ ಪ್ರದರ್ಶಿಸುತ್ತಿದ್ದಾರೆ. ಹೌದು ತಮಿಳುನಾಡಿನ ಕೋಯಂಬತ್ತೂರಿನ ಚಿನ್ನದ ಕರಕುಶಲಗಾರ ಸುಂದರಮ್‌ ಆಚಾರ್ಯ ಕೊರೊನಾ ಹಾವಳಿಯ ಸಂಕಷ್ಟವನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಎಲ್ಲಡೆ ಉಪಯೋಗಿಸುವ ಮಾಸ್ಕ್‌ ಅನ್ನು ಇವರು ಈಗ ಚಿನ್ನ ಮತ್ತು ಬೆಳ್ಳಿಯಲ್ಲಿ ತಯಾರಿಸುತ್ತಿದ್ದಾರೆ. ಚಿನ್ನದ ಮತ್ತು ಬೆಳ್ಳಿಯ ಎಳೆಗಳನ್ನು ಉಪಯೋಗಿಸಿ ಚಿನ್ನ ಹಾಗೂ ಬೆಳ್ಳೆಯ ಮಾಸ್ಕ್‌ಗಳನ್ನು ತಯಾರಿಸಿದ್ದಾರೆ. ಇವರ ಪ್ರತಿಭೆಗೆ ಮಾರುಹೊಗಿರುವ ಮತ್ತು […]

ಬಂಗಾರದ ಈ ಒಂದು ಮಾಸ್ಕ್‌ ರೇಟ್‌ ಕೇಳಿದ್ರೆ ದಂಗಾಗಿ ಬಿಡ್ತಿರಾ!
Follow us on

ಕೋಯಂಬತ್ತೂರ್‌: ಎಲ್ಲೆಡೆ ಈಗ ಕೊರೊನಾದ್ದೇ ಹಾವಳಿ. ಆದ್ರೆ ತಮಿಳುನಾಡಿನ ಈ ಚಿನ್ನದ ಕರಕುಶಲಗಾರರೊಬ್ಬರಿಗೆ ಮಾತ್ರ ಈ ಕೊರೊನಾವನ್ನೇ ಬಂಡವಾಳ ಮಾಡಿಕೊಂಡು ತಮ್ಮ ಪ್ರತಿಭೆಯನ್ನ ಪ್ರದರ್ಶಿಸುತ್ತಿದ್ದಾರೆ.

ಹೌದು ತಮಿಳುನಾಡಿನ ಕೋಯಂಬತ್ತೂರಿನ ಚಿನ್ನದ ಕರಕುಶಲಗಾರ ಸುಂದರಮ್‌ ಆಚಾರ್ಯ ಕೊರೊನಾ ಹಾವಳಿಯ ಸಂಕಷ್ಟವನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಎಲ್ಲಡೆ ಉಪಯೋಗಿಸುವ ಮಾಸ್ಕ್‌ ಅನ್ನು ಇವರು ಈಗ ಚಿನ್ನ ಮತ್ತು ಬೆಳ್ಳಿಯಲ್ಲಿ ತಯಾರಿಸುತ್ತಿದ್ದಾರೆ. ಚಿನ್ನದ ಮತ್ತು ಬೆಳ್ಳಿಯ ಎಳೆಗಳನ್ನು ಉಪಯೋಗಿಸಿ ಚಿನ್ನ ಹಾಗೂ ಬೆಳ್ಳೆಯ ಮಾಸ್ಕ್‌ಗಳನ್ನು ತಯಾರಿಸಿದ್ದಾರೆ.

ಇವರ ಪ್ರತಿಭೆಗೆ ಮಾರುಹೊಗಿರುವ ಮತ್ತು ಫ್ಯಾಶನ್‌ಗೆ ಒತ್ತು ನೀಡುವ ಕೆಲ ಶ್ರೀಮಂತರು ಈಗಾಗಲೇ ಇವರಿಗೆ ತಮಗೂ ಚಿನ್ನದ ಮಾಸ್ಕ್‌ಗಳನ್ನು ಮಾಡಿಕೊಡಿ ಎಂದು ಆರ್ಡರ್‌ ನೀಡಿದ್ದಾರಂತೆ. ಪ್ರತಿ ಮಾಸ್ಕ್‌ಗೆ 18 ಕ್ಯಾರೆಟ್‌ ಚಿನ್ನ ಬೇಕಾಗುತ್ತದೆ. ಇದಕ್ಕೆ ತಗಲುವ ವೆಚ್ಚ ಬರೋಬ್ಬರಿ 2.75 ಲಕ್ಷ ರೂಪಾಯಿಗಳು.