ಇನ್ಮುಂದೆ ಹೇರ್ ಕಟಿಂಗ್, ಬ್ಯೂಟಿ ಪಾರ್ಲರ್​ಗೂ ಆಧಾರ್ ಕಡ್ಡಾಯ!

ಚೆನ್ನೈ: ಕೊರೊನಾ ಕ್ರಿಮಿಯಿಂದ ದೇಶಾದ್ಯಂತ ಲಾಕ್​ಡೌನ್ ಮಾಡಲಾಗಿತ್ತು. ಸುಮಾರು 3 ತಿಂಗಳ ಬಳಿಕ ನಿಯಮಗಳನ್ನು ಸಡಿಲಿಕೆ ಮಾಡಿದ್ದು, ಎಲ್ಲ ಅಂಗಡಿಗಳನ್ನ ತೆರೆಯಲು ಅವಕಾಶ ನೀಡಲಾಗಿದೆ. ಆದ್ರೆ ಸಲೂನ್ ಅಂಗಡಿಗಳಲ್ಲಿ ಹೇರ್​ಕಟ್ ಮಾಡಿಸಿಕೊಳ್ಳಬೇಕೆಂದರೆ ನೀವು ಆಧಾರ್ ಕಾರ್ಡ್ ನೀಡಲೇಬೇಕು. ಹೌದು, ಕೊರೊನಾ ಸಾಂಕ್ರಾಮಿಕ ರೋಗವಾಗಿರುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತೆ. ಹೀಗಾಗಿ ಸಲೂನ್ ಅಂಗಡಿಗಳಿಗೆ ನಿತ್ಯ ನೂರಾರು ಜನ ಬರ್ತಾರೆ. ಅದರಲ್ಲಿ ಒಬ್ಬರಿಗೆ ಕೊರೊನಾ ಬಂದ್ರೂ ಬೇರೆಯವರನ್ನು ಪತ್ತೆಹಚ್ಚುವುದು ಕಷ್ಟಕರವಾಗಿದೆ. ಹೀಗಾಗಿ ಸಲೂನ್​ಗಳಲ್ಲಿ ಆಧಾರ್ ಕಾರ್ಡ್​ ಕಡ್ಡಾಯಗೊಳಿಸಿ ತಮಿಳುನಾಡು ಸರ್ಕಾರ ಆದೇಶಿಸಿದೆ. […]

ಇನ್ಮುಂದೆ ಹೇರ್ ಕಟಿಂಗ್, ಬ್ಯೂಟಿ ಪಾರ್ಲರ್​ಗೂ ಆಧಾರ್ ಕಡ್ಡಾಯ!
ಸಾಧು ಶ್ರೀನಾಥ್​ Edited By:

Updated on: Jun 02, 2020 | 11:34 AM

ಚೆನ್ನೈ: ಕೊರೊನಾ ಕ್ರಿಮಿಯಿಂದ ದೇಶಾದ್ಯಂತ ಲಾಕ್​ಡೌನ್ ಮಾಡಲಾಗಿತ್ತು. ಸುಮಾರು 3 ತಿಂಗಳ ಬಳಿಕ ನಿಯಮಗಳನ್ನು ಸಡಿಲಿಕೆ ಮಾಡಿದ್ದು, ಎಲ್ಲ ಅಂಗಡಿಗಳನ್ನ ತೆರೆಯಲು ಅವಕಾಶ ನೀಡಲಾಗಿದೆ. ಆದ್ರೆ ಸಲೂನ್ ಅಂಗಡಿಗಳಲ್ಲಿ ಹೇರ್​ಕಟ್ ಮಾಡಿಸಿಕೊಳ್ಳಬೇಕೆಂದರೆ ನೀವು ಆಧಾರ್ ಕಾರ್ಡ್ ನೀಡಲೇಬೇಕು. ಹೌದು, ಕೊರೊನಾ ಸಾಂಕ್ರಾಮಿಕ ರೋಗವಾಗಿರುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತೆ. ಹೀಗಾಗಿ ಸಲೂನ್ ಅಂಗಡಿಗಳಿಗೆ ನಿತ್ಯ ನೂರಾರು ಜನ ಬರ್ತಾರೆ.

ಅದರಲ್ಲಿ ಒಬ್ಬರಿಗೆ ಕೊರೊನಾ ಬಂದ್ರೂ ಬೇರೆಯವರನ್ನು ಪತ್ತೆಹಚ್ಚುವುದು ಕಷ್ಟಕರವಾಗಿದೆ. ಹೀಗಾಗಿ ಸಲೂನ್​ಗಳಲ್ಲಿ ಆಧಾರ್ ಕಾರ್ಡ್​ ಕಡ್ಡಾಯಗೊಳಿಸಿ ತಮಿಳುನಾಡು ಸರ್ಕಾರ ಆದೇಶಿಸಿದೆ. ಇನ್ಮುಂದೆ ಚೆನ್ನೈನಲ್ಲಿ ಹೇರ್ ಕಟ್ ಮಾಡಿಸಿಕೊಳ್ಳುವ ಮೊದಲೇ ಆಧಾರ್ ಕಾರ್ಡ್ ನೀಡಬೇಕಿದೆ. ಹೆಸರು, ಮೊಬೈಲ್ ನಂಬರ್, ವಿಳಾಸ ಬರೆದು ಕಟಿಂಗ್ ಮಾಡಿಸಿಕೊಳ್ಳಬೇಕು.

ಸಲೂನ್ ಹಾಗೂ ಬ್ಯೂಟಿ ಪಾರ್ಲರ್​ಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳಲ್ಲಿ ಜನ ಇರುವಂತಿಲ್ಲ. ಕಟ್ಟಕಡೆಯದಾಗಿ ಕಾಡುವ ಪ್ರಶ್ನೆಯೆಂದರೆ ಆಧಾರ್​ ಕಾರ್ಡ್​ ಇಲ್ಲದವರು ಬ್ಯೂಟಿ ಪಾರ್ಲರ್​ ಹಾಗೂ ಕಟಿಂಗ್, ಶೇವಿಂಗ್ ಹೇಗೆ ಮಾಡಿಸಬೇಕು?

Published On - 11:31 am, Tue, 2 June 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us