Kannada News National ಹೈದರಾಬಾದ್ ಎಲೆಕ್ಟ್ರಿಕಲ್ ಡಿಇ ಮನೆ ಮೇಲೆ ಎಸಿಬಿ ದಾಳಿ, ಅಪಾರ ಪ್ರಮಾಣದ ಆಸ್ತಿ ಪತ್ತೆ
ಹೈದರಾಬಾದ್ ಎಲೆಕ್ಟ್ರಿಕಲ್ ಡಿಇ ಮನೆ ಮೇಲೆ ಎಸಿಬಿ ದಾಳಿ, ಅಪಾರ ಪ್ರಮಾಣದ ಆಸ್ತಿ ಪತ್ತೆ
ಹೈದರಾಬಾದ್: ಹೈದರಾಬಾದ್ ಎಲೆಕ್ಟ್ರಿಕಲ್ ಡಿಇ ಮುತ್ಯಂ ವೆಂಕಟ್ ರಮಣ್ ಎಂಬುವವರ ಮನೆ ಮೇಲೆ ಎಸಿಬಿ ದಾಳಿ ನಡೆಸಿ ಭಾರಿ ಪ್ರಮಾಣದ ನಗದು, ಚಿನ್ನ, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ವೆಂಕಟ್ ₹25 ಸಾವಿರ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದ, ನಂತರ ಎಸಿಬಿ ಹೈದರಾಬಾದ್ನ ಮಾದಾಪುರದಲ್ಲಿನ ಮನೆಗೆ ದಾಳಿ ಮಾಡಿದೆ. ಈ ವೇಳೆ ಆದಾಯ ಮೀರಿದ ಅಪಾರ ಆಸ್ತಿಪಾಸ್ತಿ ಪತ್ತೆಯಾಗಿದೆ. ಶೋಧ ವೇಳೆ 26.40 ಲಕ್ಷ ನಗದು, 600 ಗ್ರಾಂ ಚಿನ್ನಾಭರಣ, 2.93 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ದಾಖಲೆಗಳು ಹಾಗೂ […]
ಎಸಿಬಿ ದಾಳಿ
Follow us on
ಹೈದರಾಬಾದ್: ಹೈದರಾಬಾದ್ ಎಲೆಕ್ಟ್ರಿಕಲ್ ಡಿಇ ಮುತ್ಯಂ ವೆಂಕಟ್ ರಮಣ್ ಎಂಬುವವರ ಮನೆ ಮೇಲೆ ಎಸಿಬಿ ದಾಳಿ ನಡೆಸಿ ಭಾರಿ ಪ್ರಮಾಣದ ನಗದು, ಚಿನ್ನ, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ವೆಂಕಟ್ ₹25 ಸಾವಿರ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದ, ನಂತರ ಎಸಿಬಿ ಹೈದರಾಬಾದ್ನ ಮಾದಾಪುರದಲ್ಲಿನ ಮನೆಗೆ ದಾಳಿ ಮಾಡಿದೆ.
ಈ ವೇಳೆ ಆದಾಯ ಮೀರಿದ ಅಪಾರ ಆಸ್ತಿಪಾಸ್ತಿ ಪತ್ತೆಯಾಗಿದೆ. ಶೋಧ ವೇಳೆ 26.40 ಲಕ್ಷ ನಗದು, 600 ಗ್ರಾಂ ಚಿನ್ನಾಭರಣ, 2.93 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ದಾಖಲೆಗಳು ಹಾಗೂ 8 ದುಬಾರಿ ಗಡಿಯಾರ, 5 ಡಿಜಿಟಲ್ ಕ್ಯಾಮರಾಗಳನ್ನು ವಶಕ್ಕೆ ಪಡೆಯಲಾಗಿದೆ.