ವಿಜಯವಾಡದಲ್ಲಿ ಲ್ಯಾಂಡಿಂಗ್​ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಏರ್​​ ಇಂಡಿಯಾ ಎಕ್ಸ್​ಪ್ರೆಸ್​ ವಿಮಾನ

|

Updated on: Feb 20, 2021 | 9:34 PM

ಏರ್​ ಇಂಡಿಯಾ ಎಕ್ಸ್​ಪ್ರೆಸ್​ ವಿಮಾನ ಖತಾರ್​ನ ದೋಹಾದಿಂದ ಗನ್ನಾವರಂನಲ್ಲಿರುವ ವಿಜಯವಾಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಲ್ಯಾಂಡ್​ ಆಗಿ ವಿಮಾನ ಇನ್ನೇನು ನಿಲ್ಲಬೇಕು ಎನ್ನುವಾಗ ನಿಲ್ದಾಣದಲ್ಲಿರುವ ವಿದ್ಯುತ್​ ಕಂಬಕ್ಕೆ ವಿಮಾನದ ರೆಕ್ಕೆಗೆ ತಾಗಿದೆ.

ವಿಜಯವಾಡದಲ್ಲಿ ಲ್ಯಾಂಡಿಂಗ್​ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಏರ್​​ ಇಂಡಿಯಾ ಎಕ್ಸ್​ಪ್ರೆಸ್​ ವಿಮಾನ
ಡಿಕ್ಕಿಯಾದ ವಿಮಾನ
Follow us on

ವಿಜಯವಾಡ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ವೇಳೆ ವಿಮಾನದ ರೆಕ್ಕೆ ವಿದ್ಯುತ್​ ಕಂಬಕ್ಕೆ ತಾಗಿದೆ. ಇದರಿಂದ ಒಂದು ಕ್ಷಣ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅದೃಷ್ಟವಶಾತ್​ ಯಾವುದೇ ಪ್ರಯಾಣಿಕರಿಗೆ ತೊಂದರೆ ಉಂಟಾಗಿಲ್ಲ.

ಏರ್​ ಇಂಡಿಯಾ ಎಕ್ಸ್​ಪ್ರೆಸ್​ ವಿಮಾನ ಖತಾರ್​ನ ದೋಹಾದಿಂದ ಗನ್ನಾವರಂನಲ್ಲಿರುವ ವಿಜಯವಾಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಲ್ಯಾಂಡ್​ ಆಗಿ ವಿಮಾನ ಇನ್ನೇನು ನಿಲ್ಲಬೇಕು ಎನ್ನುವಾಗ ನಿಲ್ದಾಣದಲ್ಲಿರುವ ವಿದ್ಯುತ್​ ಕಂಬಕ್ಕೆ ವಿಮಾನದ ರೆಕ್ಕೆಗೆ ತಾಗಿದೆ. ತಕ್ಷಣಕ್ಕೆ ನಿಲ್ದಾಣದ ಸಿಬ್ಬಂದಿ ಬಂದು ಪ್ರಯಾಣಿಕರನ್ನು ಇಳಿಸಿದ್ದಾರೆ. ವಿಮಾನದಲ್ಲಿ ಸಿಬ್ಬಂದಿ ಸೇರಿ 64 ಜನರು ಇದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ.

ಇದೇ ಮಾದರಿಯ ಘಟನೆ ಕೇರಳದ ಕೋಳಿಕ್ಕೋಡ್​ನಲ್ಲಿ ಶುಕ್ರವಾರ ಸಂಭವಿಸಿತ್ತು. ಶಾರ್ಜಾದಿಂದ ಕೋಳಿಕ್ಕೋಡ್​ಗೆ ಬರುತ್ತಿದ್ದ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ, ತಿರುವನಂತಪುರದಲ್ಲಿ ವಿಮಾನವನ್ನು ಲ್ಯಾಂಡ್​ ಮಾಡಲಾಗಿತ್ತು.

ಕೋಳಿಕ್ಕೋಡ್​ ನಿಲ್ದಾಣದಲ್ಲಿ 12.40ಕ್ಕೆ ವಿಮಾನ ಲ್ಯಾಂಡ್​ ಆಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆ ಎದುರಾದರ ನಂತರವೂ ಈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಮಾಡುವುದು ಪೈಲಟ್​ಗಳಿಗೆ ದೊಡ್ಡ ಸವಾಲಿನ ಸಂಗತಿ. ಇದೇ ಕಾರಣಕ್ಕೆ ಇಲ್ಲಿ ಸಾಕಷ್ಟು ದುರಂತಗಳು ಸಂಭವಿಸಿವೆ. ಹೀಗಾಗಿ, ತಿರುವನಂತಪುರದಲ್ಲೇ ವಿಮಾನವನ್ನು ಲ್ಯಾಂಡ್​ ಮಾಡುವಂತೆ ಸೂಚಿಸಲಾಗಿತ್ತು.

ಇದನ್ನೂ ಓದಿ: Olympian Harassed: ದೆಹಲಿಯಲ್ಲಿ ಖ್ಯಾತ ಶೂಟರ್ ಮನು ಭಾಕರ್ ವಿಮಾನ ಹತ್ತದಂತೆ ತಡೆದು ಉದ್ಧಟತನ ಮೆರೆದ ಏರ್ ಇಂಡಿಯಾ ಅಧಿಕಾರಿಗಳು

Published On - 9:19 pm, Sat, 20 February 21