ಅಮರಾವತಿ: 108 ಉಚಿತ ಆಂಬ್ಯುಲೆನ್ಸ್ ಸೇವೆಯ (108 free ambulance) ಅಡಿಯಲ್ಲಿ 146 ಹೊಸ ಆಂಬ್ಯುಲೆನ್ಸ್ಗಳಿಗೆ ಆಂಧ್ರಪ್ರದೇಶದ (Andhra Pradesh) ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಇಂದು ಚಾಲನೆ ನೀಡಿದ್ದಾರೆ. 35 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾದ ಹೊಸ ಆಂಬ್ಯುಲೆನ್ಸ್‌ಗಳು ಈಗಾಗಲೇ 2.5 ಲಕ್ಷ ಕಿ.ಮೀ.ಗಿಂತ ಹೆಚ್ಚು ದೂರಗಳವರೆಗೆ ಕ್ರಮಿಸಲ್ಲಿದೆ. ಈಗಾಗಲೇ ಹಳೆಯ ಆಂಬ್ಯುಲೆನ್ಸ್‌ಗಳನ್ನು ದುರಸ್ತಿ ಮಾಡಿ ಬದಲಾವಣೆ ಮಾಡಲಾಗುತ್ತಿದೆ.
ರಾಜ್ಯದ ಪ್ರತಿಯೊಬ್ಬ ಬಡವರಿಗೂ ಆರೋಗ್ಯ ಸೇವೆಗಳನ್ನು ಫಲಶುತ್ರಿಯನ್ನು ಪಡೆಯಬೇಕು ಎಂದು ಗುರಿಯನ್ನು ಸರ್ಕಾರ ಹೊಂದಿದ್ದು, ಹೊಸ ವಾಹನಗಳು ಆಂಧ್ರಪ್ರದೇಶದಾದ್ಯಂತ 108 ಆಂಬ್ಯುಲೆನ್ಸ್ ವಾಹನಗಳ ಫ್ಲೀಟ್ನ್ನು 768 ಕ್ಕೆ ಹೆಚ್ಚಿಸಿವೆ.
ಈ ಆಂಬ್ಯುಲೆನ್ಸ್‌ಗಳನ್ನು ನಿರ್ವಹಿಸಲು ರಾಜ್ಯ ಸರ್ಕಾರ ವಾರ್ಷಿಕ 189 ಕೋಟಿ ರೂ. ವೆಚ್ಚ ಮಾಡುತ್ತಿದೆ ಎಂದು ಪ್ರಕಟಣೆ ತಿಳಿಸಿದೆ. 2019ರಲ್ಲಿ ಕೇವಲ 531 ಆಂಬ್ಯುಲೆನ್ಸ್‌ಗಳು ಇದ್ದವು, ಅದರಲ್ಲಿ ಈಗ 336 ಮಾತ್ರ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿವೆ. 108 ಆಂಬ್ಯುಲೆನ್ಸ್ ಸೇವೆಯನ್ನು ಮೊದಲ ಬಾರಿಗೆ ದಕ್ಷಿಣ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಅವರ ಅವಧಿಯಲ್ಲಿ ಪರಿಚಯಿಸಲಾಯಿತು.
ಇದನ್ನೂ ಓದಿ: ಬಗೆಹರಿಯದ 108 ಸಿಬ್ಬಂದಿ ವೇತನ ಸಮಸ್ಯೆ: ರಾಜ್ಯ ಸರ್ಕಾರಕ್ಕೆ ಡೆಡ್ಲೈನ್ ನೀಡಿದ ಚಾಲಕರು
ಇನ್ನೂ 108 ಉಚಿತ ಆಂಬ್ಯುಲೆನ್ಸ್ ಸ್ಥಿತಿ ಕರ್ನಾಟಕದಲ್ಲಿ ಅದೋಗತಿಗೆ ತಲುಪಿದೆ. ಕರ್ನಾಟಕದ ಅನೇಕ ಕಡೆ 108 ಉಚಿತ ಸೇವೆಗಳು ಸಕಾಲದಲ್ಲಿ ದೂರಕುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ರಾಜ್ಯದಲ್ಲಿ ತುರ್ತು ಸಂದರ್ಭದಲ್ಲಿ 108 ಆಂಬ್ಯುಲೆನ್ಸ್ ಸರಿಯಾಗಿ ದೊರಕುತ್ತಿಲ್ಲ. ಉಚಿತವಿದ್ದರು, ಅನೇಕರು ಸೂಲಿಗೆ ಮಾಡುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಈ ಘಟನೆ ಹೆಚ್ಚಿತ್ತು ಎಂದು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿತ್ತು.
ಇನ್ನೂ ಕರ್ನಾಟಕದಲ್ಲಿ ಹೊಸದಾಗಿ ಯಾವುದೇ 108 ಆಂಬ್ಯುಲೆನ್ಸ್ ಬಿಡುಗಡೆ ಮಾಡಿಲ್ಲ, ಇರುವ 108 ಆಂಬ್ಯುಲೆನ್ಸ್‌ಗಳು ದುರಸ್ಥಿತಿ ಮಾಡುವುದೇ ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿದೆ. ಇನ್ನೂ ದುರಸ್ಥಿತಿಯಾಗದ ಅದೆಷ್ಟೊ ಆಂಬ್ಯುಲೆನ್ಸ್‌ಗಳನ್ನು ಗ್ಯಾರೆಜ್ಗೆ ಹಾಕುವ ಪರಿಸ್ಥಿತಿ ಉಂಟಾಗಿದೆ. ಈ 108 ಆಂಬ್ಯುಲೆನ್ಸ್ ಯೋಜನೆಯನ್ನು ನಂಬಿಕೊಂಡಿರುವ ಬಡ ಜನರಿಗೆ ತೊಂದರೆ ಉಂಟಾಗಿದೆ. ಇದರ ಜತೆಗೆ 108 ಆಂಬ್ಯುಲೆನ್ಸ್ ಸಿಬ್ಬಂದಿಗಳ ವೇತನ ಹೆಚ್ಚು ಮಾಡುವಂತೆ ಹೋರಾಟ, ಸರ್ಕಾರ ಮುಂದೆ 108 ಆಂಬ್ಯುಲೆನ್ಸ್ ಬಗ್ಗೆ ಹಲವು ಸವಾಲು ಇದೆ. ಈ ನಡುವೆ ಕರ್ನಾಟಕದ ಪಕ್ಕದ ರಾಜ್ಯ ಆಂಧ್ರಪ್ರದೇಶ ಹೆಚ್ಚುವರಿಯಾಗಿ ಆಂಬ್ಯುಲೆನ್ಸ್ಗಳಿಗೆ ಚಾಲನೆ ನೀಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ