ಚಿತ್ತೂರು: ಕೆಲವರಿಗೆ ತಾವು ಏನೇ ಮಾಡಿದ್ರೂ.. ವಿಭಿನ್ನವಾಗಿರಬೇಕು ಅನ್ನೋ ವಿಚಾರಧಾರೆ! ಇಂಥ ವ್ಯಕ್ತಿಗಳು ಯಾವಾಗಲೂ ಯೋಚಿಸೋದು ವಿಭಿನ್ನ, ಕೆಲಸ ಕಾರ್ಯಗಳನ್ನ ಮಾಡೋದು ಕೂಡಾ ವಿಭಿನ್ನವಾಗಿಯೇ. ಇಂಥವರ ಸಾಲಿಗೆ ಸೇರ್ತಾರೆ ಆಂಧ್ರಪ್ರದೇಶದ ವೈಎಸ್‌ಆರ್ ಸಿಪಿ ಪಕ್ಷದ ಶಾಸಕ ಬಿ ಮಧುಸೂದನ್ ರೆಡ್ಡಿ.
ಹೌದು, ವೈಎಸ್‌ಆರ್‌ಸಿಪಿ ಪಕ್ಷದ ಶಾಸಕ ಬಿ ಮಧುಸೂದನ್ ರೆಡ್ಡಿ ತಾವು ಏನೇ ಮಾಡಿದ್ರೂ ವಿಭಿನ್ನವಾಗಿರಬೇಕು ಮತ್ತು ಅದು ಜನರ ಗಮನ ಸೆಳೆಯಬೇಕು ಅನ್ನೋ ಮನೋಭಾವದವರು ಅಂತಾ ಕಾಣುತ್ತೆ. ಹೀಗಾಗಿ ಚಿತ್ತೂರಿನಲ್ಲಿ ನಡೆದ ಮಡಿವಾಳ ಸಮಾಜದ ಕಾರ್ಯಕ್ರಮದಲ್ಲಿ ಬಟ್ಟೆ ತೊಳೆದು ನಂತರ ಅದನ್ನ ಇಸ್ತ್ರಿ ಮಾಡೋ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ್ದಾರೆ.
ಇತ್ತೀಚೆಗೆ ಆಂಧ್ರ ಸರ್ಕಾರ ಧೋಬಿ ಸಮಾಜದ ವೃತ್ತಿ ನಿರತರ ಅನುಕೂಲಕ್ಕಾಗಿ ಯೋಜನೆಯೊಂದನ್ನ ಜಾರಿಗೆ ತಂದಿದೆ. ಈ ಯೋಜನೆಯನ್ವಯ ಪ್ರತಿ ಧೋಬಿ ಸಮಾಜದ ವೃತ್ತಿನಿರತರಿಗೆ ವಾರ್ಷಿಕ ತಲಾ 10,000 ರೂ. ಸಹಾಯ ಧನವನ್ನ ಐದು ವರ್ಷಗಳ ಕಾಲ ನೀಡಲಾಗುತ್ತೆ. ಈ ಹಿನ್ನೆಲೆಯಲ್ಲಿ ಶಾಸಕರನ್ನ ಸನ್ಮಾನಿಸಲು ಮಡಿವಾಳ ಸಮಾಜ ಈ ಕಾರ್ಯಕ್ರಮ ಅಯೋಜಿಸಿತ್ತು.
ಈ ಹಿಂದೆ ನಮ್ಮ ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಕೂಡಾ ಬೆಂಗಳೂರಿನ ಜಯನಗರದಲ್ಲಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಧುಮುಕಿ ಈಜುವ ಮೂಲಕ ಸ್ವಿಮ್ಮಿಂಗ್ ಪೂಲ್ ಉದ್ಘಾಟನೆ ಮಾಡಿದ್ದರು.
Andhra Pradesh: B Madhusudan Reddy, YSRCP MLA washed & ironed clothes at a felicitation programme organised by washermen's union in Chittoor y'day. AP govt recently launched a scheme ‘Jagan Anna Chedodu’ under which washermen will be given Rs10000 financial aid per annum for 5yrs pic.twitter.com/IU3wZRX5HK
— ANI (@ANI) June 24, 2020
Published On - 2:08 pm, Wed, 24 June 20