ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅಪರಾಧಿಗಳನ್ನು ಹೇಗೆ ಬಿಡುಗಡೆ ಮಾಡಿದಿರಿ?: ಗುಜರಾತ್‌ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ

|

Updated on: Aug 17, 2023 | 8:49 PM

Bilkis Bano case: ಅಪರಾಧಿಗಳಿಗೆ 14 ವರ್ಷಗಳ ನಂತರ ಬಿಡುಗಡೆ ಮಾಡುವ ಮೂಲಕ ಸುಧಾರಣೆಗೆ ಅವಕಾಶ ನೀಡುವ ಈ ನಿಯಮವು ಇತರ ಕೈದಿಗಳಿಗೆ ಎಷ್ಟು ಅನ್ವಯಿಸುತ್ತದೆ? ನೀತಿಯನ್ನು ಏಕೆ ಆಯ್ದ ಕೆಲವರಿಗೆ ಮಾತ್ರ ಅನ್ವಯಿಸಲಾಗುತ್ತಿದೆ? ಸುಧಾರಿಸಲು ಮತ್ತು ಮತ್ತೆ ಸಮಾಜದ ಅಂಗವಾಗಲು ಅವಕಾಶವನ್ನು ಎಲ್ಲರಿಗೂ ನೀಡಬೇಕು. ಹೇಗೆ? ಇದು ಕಾರ್ಯರೂಪಕ್ಕೆ ಬರುತ್ತಿದೆಯೇ? ನಮ್ಮ ಜೈಲುಗಳು ಏಕೆ ತುಂಬಿ ತುಳುಕುತ್ತಿವೆ? ನಮಗೆ ದತ್ತಾಂಶ ನೀಡಿ ಎಂದು ನ್ಯಾಯಾಲಯ ಹೇಳಿದೆ.

ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅಪರಾಧಿಗಳನ್ನು ಹೇಗೆ ಬಿಡುಗಡೆ ಮಾಡಿದಿರಿ?: ಗುಜರಾತ್‌ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ
ಬಿಲ್ಕಿಸ್ ಬಾನು
Follow us on

ದೆಹಲಿ ಆಗಸ್ಟ್ 17: 2002ರ ಗಲಭೆಯಲ್ಲಿ ಬಿಲ್ಕಿಸ್ ಬಾನು (Bilkis Bano) ಮೇಲೆ ಅತ್ಯಾಚಾರವೆಸಗಿ (Supreme Court) ಆಕೆಯ ಕುಟುಂಬವನ್ನು ಹತ್ಯೆಗೈದ ಅಪರಾಧಿಗಳನ್ನು ಶಿಕ್ಷೆಯ ಅವಧಿ ಮುಗಿಯುವ ಮುನ್ನವೇ ಬಿಡುಗಡೆ ಕುರಿತ ಅರ್ಜಿಗಳ ಸರಣಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ (Supreme Court) ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅವರನ್ನು ಅವಧಿಗೆ ಮುನ್ನ ಬಿಡುಗಡೆ ಮಾಡಲು ಗುಜರಾತ್ ಸರ್ಕಾರ ಮುತುವರ್ಜಿ ವಹಿಸಿತ್ತು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ 14 ವರ್ಷಗಳ ಕಾಲ ಜೈಲಿನಲ್ಲಿದ್ದವರನ್ನು ಹೇಗೆ ಬಿಡುಗಡೆ ಮಾಡಲಾಯಿತು? ಇತರ ಕೈದಿಗಳನ್ನು ಯಾಕೆ ಬಿಡುಗಡೆ ಮಾಡಿಲ್ಲ. ಈ ಅಪರಾಧಿಗಳಿಗೆ ಮಾತ್ರ ಏಕೆ ನೀತಿಯ ಪ್ರಯೋಜನವನ್ನು ನೀಡಲಾಗಿದೆ? ಎಂದು ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠ ಪ್ರಶ್ನಿಸಿದೆ.

ಅಪರಾಧಿಗಳಿಗೆ 14 ವರ್ಷಗಳ ನಂತರ ಬಿಡುಗಡೆ ಮಾಡುವ ಮೂಲಕ ಸುಧಾರಣೆಗೆ ಅವಕಾಶ ನೀಡುವ ಈ ನಿಯಮವು ಇತರ ಕೈದಿಗಳಿಗೆ ಎಷ್ಟು ಅನ್ವಯಿಸುತ್ತದೆ? ನೀತಿಯನ್ನು ಏಕೆ ಆಯ್ದ ಕೆಲವರಿಗೆ ಮಾತ್ರ ಅನ್ವಯಿಸಲಾಗುತ್ತಿದೆ? ಸುಧಾರಿಸಲು ಮತ್ತು ಮತ್ತೆ ಸಮಾಜದ ಅಂಗವಾಗಲು ಅವಕಾಶವನ್ನು ಎಲ್ಲರಿಗೂ ನೀಡಬೇಕು. ಹೇಗೆ? ಇದು ಕಾರ್ಯರೂಪಕ್ಕೆ ಬರುತ್ತಿದೆಯೇ? ನಮ್ಮ ಜೈಲುಗಳು ಏಕೆ ತುಂಬಿ ತುಳುಕುತ್ತಿವೆ? ನಮಗೆ ದತ್ತಾಂಶ ನೀಡಿ ಎಂದು ನ್ಯಾಯಾಲಯ ಹೇಳಿದೆ.

ಬಿಲ್ಕಿಸ್ ಅಪರಾಧಿಗಳಿಗಾಗಿ ಜೈಲು ಸಲಹಾ ಸಮಿತಿಯನ್ನು ಯಾವ ಆಧಾರದ ಮೇಲೆ ರಚಿಸಲಾಗಿದೆ ಎಂದು ಪ್ರಶ್ನಿಸಿದ ನ್ಯಾಯಾಲಯ, ವಿವರಗಳನ್ನು ನೀಡುವಂತೆ ರಾಜ್ಯಕ್ಕೆ ಆದೇಶಿಸಿದೆ. ಗೋಧ್ರಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯದ ಕಾರಣ ಅದರ ಅಭಿಪ್ರಾಯವನ್ನು ಏಕೆ ಕೇಳಲಾಗಿದೆ ಎಂದೂ ಅದು ಕೇಳಿದೆ.

ಕಳೆದ ವರ್ಷ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾದ 11 ಮಂದಿಗೆ ಮಹಾರಾಷ್ಟ್ರದ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿದ ನ್ಯಾಯಾಧೀಶರು ಅಪರಾಧಿಗಳನ್ನು ಬಿಡುಗಡೆ ಮಾಡಬೇಕೇ ಎಂಬ ರಾಜ್ಯದ ಪ್ರಶ್ನೆಗೆ ನಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದರು.

2002ರಲ್ಲಿ ಉರಿಯುತ್ತಿದ್ದ ಸಬರಮತಿ ಎಕ್ಸ್‌ಪ್ರೆಸ್‌ನಲ್ಲಿ 59 ಕರಸೇವಕರ ಸಾವಿನ ನಂತರ ಹಿಂಸಾಚಾರದ ಕಂಡ ರಾಜ್ಯದಲ್ಲಿ ನ್ಯಾಯಯುತ ವಿಚಾರಣೆ ಸಾಧ್ಯವಿಲ್ಲ ಎಂದು ಭಾವಿಸಿದ್ದರಿಂದ ಪ್ರಕರಣದ ವಿಚಾರಣೆಯನ್ನು ಗುಜರಾತ್‌ನಿಂದ ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಯಿತು.

ಗುಜರಾತ್ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು ಸಾಮಾನ್ಯವಾಗಿ ಉತ್ತರಿಸುವುದು ಕಷ್ಟ. ಆದರೆ, ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣವೊಂದು ಬಾಕಿ ಉಳಿದಿದ್ದು, ಎಲ್ಲ ರಾಜ್ಯಗಳು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಬೇಕು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಅಪರಾಧಿಗಳನ್ನು ಕಾನೂನಿನ ಪ್ರಕಾರ ಬಿಡುಗಡೆ ಮಾಡಲಾಗಿದೆ. ಅವರು 2008 ರಲ್ಲಿ ಶಿಕ್ಷೆಗೊಳಗಾದ ಕಾರಣ, ಅವರನ್ನು 1992 ರ ನೀತಿಯ ಅಡಿಯಲ್ಲಿ ಪರಿಗಣಿಸಬೇಕಾಗಿತ್ತು. ಒಂದು ಅಪರಾಧಿಯ ಮನವಿಯ ಬಗ್ಗೆ ರಾಜ್ಯವನ್ನು ಕರೆಯುವಂತೆ ಸರ್ವೋಚ್ಚ ನ್ಯಾಯಾಲಯವು ಕೇಳಿಕೊಂಡ ನಂತರ, ಆಡಳಿತಾರೂಢ ಬಿಜೆಪಿಗೆ ಸಂಬಂಧಿಸಿರುವ ವ್ಯಕ್ತಿಗಳನ್ನ ಒಳಗೊಂಡ ಸಮಿತಿಯೊಂದಿಗೆ ಸಮಾಲೋಚಿಸಿ, ಆ ನೀತಿಯ ಆಧಾರದ ಮೇಲೆ ಅಪರಾಧಿಗಳನ್ನು ಬಿಡುಗಡೆ ಮಾಡಲಾಯಿತು.

ಕಳೆದ ವಿಚಾರಣೆಯಲ್ಲಿ ಪೀಠವು ಬಿಲ್ಕಿಸ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ಹಿಂದಿನ ಆದೇಶವನ್ನು ಪ್ರಶ್ನಿಸಿತ್ತು. ಬಾಂಬೆ ಹೈಕೋರ್ಟ್‌ನ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬೇಕಿದ್ದರೂ ಹಿಂದಿನ ಆದೇಶವನ್ನು ಪಿಐಎಲ್ ಮೇಲೆ ಹೇಗೆ ರವಾನಿಸಲಾಯಿತು ಎಂದು ನ್ಯಾಯಾಲಯ ಕೇಳಿದೆ.

ಬಿಲ್ಕಿಸ್ ಬಾನು ಪರ ವಕೀಲ ಶೋಭಾ ಗುಪ್ತಾ, ಅಪರಾಧಿಗಳ ಬಿಡುಗಡೆ ಕುರಿತು ಗುಜರಾತ್ ಸರ್ಕಾರದ ನಿರ್ಧಾರ ತಪ್ಪು ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ಮಹಾರಾಷ್ಟ್ರ ರಾಜ್ಯವನ್ನು ಕೇಳಲಿಲ್ಲ, ಕೇಂದ್ರವನ್ನು ಇದರಲ್ಲಿ ಪಕ್ಷವನ್ನಾಗಿ ಮಾಡಿಲ್ಲ. ಸುಪ್ರೀಂಕೋರ್ಟ್‌ನ ಆದೇಶವು ಅಪರಾಧಿ ರಾಧೇಶ್ಯಾಮ್‌ನ ಅರ್ಜಿಗೆ ಸಂಬಂಧಿಸಿದಂತೆ ಮಾತ್ರ, ಆದರೆ ಗುಜರಾತ್ ಸರ್ಕಾರವು ಎಲ್ಲಾ 11 ಅಪರಾಧಿಗಳಿಗೆ ವಿನಾಯಿತಿ ನೀಡಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಶಿಮ್ಲಾ ಭೂಕುಸಿತದಲ್ಲಿ 3 ತಲೆಮಾರುಗಳನ್ನು ಕಳೆದುಕೊಂಡ ಕುಟುಂಬ; ಮೃತದೇಹಕ್ಕಾಗಿ ಮುಂದುವರಿದ ಹುಡುಕಾಟ

15 ವರ್ಷ 4 ತಿಂಗಳ ಜೈಲು ವಾಸವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಅಪರಾಧಿ ರಾಧೇಶ್ಯಾಮ್ ಷಾ ವಿನಾಯತಿ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಗುಜರಾತ್ ಸರ್ಕಾರವನ್ನು ಈ ವಿಷಯವನ್ನು ಪರಿಶೀಲಿಸಲು ಮತ್ತು ಎರಡು ತಿಂಗಳೊಳಗೆ ಅವರಿಗೆ ವಿನಾಯಿತಿ ನೀಡಬಹುದೇ ಎಂದು ನಿರ್ಧರಿಸಲು ಕೇಳಿದೆ. ಇದಕ್ಕೆ ಪ್ರತಿಯಾಗಿ ಗುಜರಾತ್ ಸರ್ಕಾರ ಎಲ್ಲಾ ಅಪರಾಧಿಗಳನ್ನು ಬಿಡುಗಡೆ ಮಾಡಿದೆ.

ಆಗಾಗಲೇ 14 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ ಮತ್ತು ಉತ್ತಮ ನಡವಳಿಕೆಯನ್ನು ಪ್ರದರ್ಶಿಸಿದ ಪುರುಷರನ್ನು ಸುಸಂಸ್ಕೃತ ಬ್ರಾಹ್ಮಣರು ಎಂದು ಕರೆದ ಸಮಿತಿಯ ಸದಸ್ಯರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಅಪರಾಧಿಗಳ ಬಿಡುಗಡೆಯ ಬಗ್ಗೆ ತನಗೆ ಸೂಚನೆ ನೀಡಿಲ್ಲ ಎಂದು ಬಿಲ್ಕಿಸ್ ಬಾನು ವಾದಿಸಿದ್ದಾರೆ. ಆಕೆಯ ಅರ್ಜಿಯ ವಿಚಾರಣೆ ಆಗಸ್ಟ್ 24 ರಂದು ನಡೆಯಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:43 pm, Thu, 17 August 23