ನಿಮ್ಮ ಫೋನ್‌ಗೂ ತುರ್ತು ಎಚ್ಚರಿಕೆಯ ಸಂದೇಶ ಬಂತಾ? ಏನಿದರ ಅರ್ಥ?

|

Updated on: Aug 17, 2023 | 7:18 PM

ಮೊಬೈಲ್ ಆಪರೇಟರ್‌ಗಳು ಮತ್ತು ಸೆಲ್ ಬ್ರಾಡ್‌ಕಾಸ್ಟ್ ಸಿಸ್ಟಮ್‌ಗಳ ತುರ್ತು ಎಚ್ಚರಿಕೆ ಪ್ರಸಾರ ಸಾಮರ್ಥ್ಯಗಳ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ನಿರ್ಣಯಿಸಲು ವಿವಿಧ ಪ್ರದೇಶಗಳಲ್ಲಿ ಕಾಲಕಾಲಕ್ಕೆ ಇಂತಹ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ದೂರಸಂಪರ್ಕ ಇಲಾಖೆಯ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ತಿಳಿಸಿದೆ.

ನಿಮ್ಮ ಫೋನ್‌ಗೂ ತುರ್ತು ಎಚ್ಚರಿಕೆಯ ಸಂದೇಶ ಬಂತಾ? ಏನಿದರ ಅರ್ಥ?
ಸಂದೇಶ
Follow us on

ದೆಹಲಿ ಆಗಸ್ಟ್ 17: ಭಾರತ ಸರ್ಕಾರ ಇಂದು (ಗುರುವಾರ) ತನ್ನ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಹಲವಾರು ಸ್ಮಾರ್ಟ್‌ಫೋನ್‌ಗಳಲ್ಲಿ (Smart Phone) ಟೆಸ್ಟ್ ಫ್ಲಾಶ್ (test flash) ಕಳುಹಿಸುವ ಮೂಲಕ ಪರೀಕ್ಷಿಸಿದೆ. ಹಾಗಾಗಿ ಇಂದು ಬಳಕೆದಾರರು ಫೋನ್‌ಗಳಲ್ಲಿ ‘emergency alert: severe‘ ಎಂಬ ಸಂದೇಶವೊಂದನ್ನು ಸ್ವೀಕರಿಸಿದ್ದಾರೆ. ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ ಏಕೆಂದರೆ ನಿಮ್ಮ ಕಡೆಯಿಂದ ಯಾವುದೇ ಕ್ರಮದ ಅಗತ್ಯವಿಲ್ಲ. ಈ ಸಂದೇಶವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅನುಷ್ಠಾನಗೊಳಿಸುತ್ತಿರುವ TEST ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಗೆ ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಸಂದೇಶದಲ್ಲಿದೆ.

ಇಂದು ಮಧ್ಯಾಹ್ನ 1.35 ಕ್ಕೆ ಎಲ್ಲಾ ಆಂಡ್ರಾಯ್ಡ್ ಫೋನ್‌ಗಳಿಗೆ ಈ ಸಂದೇಶ ಬಂದಿದೆ.

ಮೊಬೈಲ್ ಆಪರೇಟರ್‌ಗಳು ಮತ್ತು ಸೆಲ್ ಬ್ರಾಡ್‌ಕಾಸ್ಟ್ ಸಿಸ್ಟಮ್‌ಗಳ ತುರ್ತು ಎಚ್ಚರಿಕೆ ಪ್ರಸಾರ ಸಾಮರ್ಥ್ಯಗಳ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ನಿರ್ಣಯಿಸಲು ವಿವಿಧ ಪ್ರದೇಶಗಳಲ್ಲಿ ಕಾಲಕಾಲಕ್ಕೆ ಇಂತಹ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ದೂರಸಂಪರ್ಕ ಇಲಾಖೆಯ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ತಿಳಿಸಿದೆ.

ಭೂಕಂಪಗಳು, ಸುನಾಮಿಗಳು ಮತ್ತು ಹಠಾತ್ ಪ್ರವಾಹಗಳಂತಹ ವಿಪತ್ತುಗಳಿಗೆ ಉತ್ತಮವಾಗಿ ಸನ್ನದ್ಧವಾಗಿರಲು ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಕೆಲಸ ಮಾಡುತ್ತಿದೆ.

ಭಾರತದಲ್ಲಿನ ಫೋನ್ ಬಳಕೆದಾರರು ಜುಲೈ 20 ರಂದು ಇದೇ ರೀತಿಯ ಟೆಸ್ಟಿಂಗ್ ಎಚ್ಚರಿಕೆಯನ್ನು ಸ್ವೀಕರಿಸಿದ್ದರು.

ಈ ಎಚ್ಚರಿಕೆಗಳನ್ನು ನಿಲ್ಲಿಸಲು ಸಾಧ್ಯವೇ?

ತಮ್ಮ ಫೋನ್‌ಗಳಲ್ಲಿ ಎಚ್ಚರಿಕೆಯ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟರ್ ನಲ್ಲಿ  ಹಂಚಿಕೊಂಡ ನೆಟ್ಟಿರು ಈ ಅಧಿಸೂಚನೆಗಳು ಅಧಿಕಪ್ರಸಂಗದ್ದು ಕರೆದರೆ, ಇನ್ನು ಕೆಲವರು ಗಟ್ಟಿಯಾದ ಎಚ್ಚರಿಕೆಯ ದನಿ ಎಂದು ಹೇಳಿದ್ದಾರೆ

ಆ ಸಂದೇಶ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಜುಲೈ 20 ರ ಬಿಡುಗಡೆಯಲ್ಲಿ, ಪರೀಕ್ಷಾ ಅವಧಿಯಲ್ಲಿ ಜನರು ಈ ಎಚ್ಚರಿಕೆಗಳನ್ನು ಸ್ವೀಕರಿಸಬಹುದು ಎಂದು ಸಂವಹನ ಸಚಿವಾಲಯ ತಿಳಿಸಿದೆ. ಗೊಂದಲವನ್ನು ತಪ್ಪಿಸಲು ಪ್ರತಿ ಪರೀಕ್ಷಾ ಎಚ್ಚರಿಕೆಯನ್ನು “ಮಾದರಿ ಪರೀಕ್ಷಾ ಸಂದೇಶ” ಎಂದು ಸ್ಪಷ್ಟವಾಗಿ ಲೇಬಲ್ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಅಂದಹಾಗೆಮೊಬೈಲ್ ಫೋನ್‌ನಲ್ಲಿ ಈ ಎಚ್ಚರಿಕೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಲು ಸಹ ಸಾಧ್ಯವಿದೆ. ಬಳಕೆದಾರರು ತಮ್ಮ ಫೋನ್‌ಗಳಲ್ಲಿನ ಸೆಟ್ಟಿಂಗ್‌ಗಳ ಮೂಲಕ ವೈರ್‌ಲೆಸ್ ತುರ್ತು ಎಚ್ಚರಿಕೆ ಅಧಿಸೂಚನೆಯನ್ನು ನಿಷ್ಕ್ರಿಯಗೊಳಿಸಬೇಕಾಗುತ್ತದೆ. ಒಮ್ಮೆ ಹೀಗೆ ಮಾಡಿದರೆ ಈ ಎಚ್ಚರಿಕೆ ಸಂದೇಶಗಳು ಬರುವುದಿಲ್ಲ.

ನೀವು Android ಬಳಕೆದಾರಾಗಿದ್ದರೆ, Settings > Safety and Emergency > Wireless emergency alerts ಹೋಗಿ ಅದನ್ನು ನಿಷ್ಕ್ರಿಯಗೊಳಿಸಿ. ವಿಪರೀತ ಬೆದರಿಕೆಗಳು, ತೀವ್ರ ಬೆದರಿಕೆಗಳು, AMBER ಎಚ್ಚರಿಕೆಗಳು ಮತ್ತು ಪರೀಕ್ಷಾ ಎಚ್ಚರಿಕೆಗಳಂತಹ ವೈಯಕ್ತಿಕ ಆಯ್ಕೆಗಳನ್ನು ಆಯ್ಕೆಮಾಡುವ/ಆಯ್ಕೆಮಾಡದಿರುವ ಮೂಲಕ ನಿಮ್ಮ ಎಚ್ಚರಿಕೆಗಳನ್ನು ಕಸ್ಟಮೈಸ್ ಮಾಡಲು ನೀವು ಆಯ್ಕೆ ಮಾಡಬಹುದು.

ಇದನ್ನೂ ಓದಿ: ನೆಹರು ಮಾಡಿದ ಕೆಲಸಗಳಿಂದಲೇ ಅವರು ಖ್ಯಾತರಾಗಿದ್ದಾರೆ: ಮ್ಯೂಸಿಯಂ ಮರುನಾಮಕರಣ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ

ಸರ್ಕಾರದ ಈ ಕ್ರಮವು 1996 ರಲ್ಲಿ US ನಿಂದ ಹೊರತಂದಿದ್ದ ‘AMBER ಎಚ್ಚರಿಕೆಗಳು’ ಉಪಕ್ರಮವನ್ನು ಹೋಲುತ್ತದೆ.  ಅಂಬರ್ ರೆನೆ ಹ್ಯಾಗರ್‌ಮ್ಯಾನ್ ಎಂಬ ಹುಡುಗಿಯನ್ನು ಅಪಹರಣಕ್ಕೊಳಗಾಗಿ ನಂತರ ಶವವಾಗಿ ಪತ್ತೆಯಾಗಿದ್ದಳು.ಅವಳ ಹೆಸರನ್ನೇ ಈ ಉಪಕ್ರಮಕ್ಕೆ ಇರಿಸಲಾಗಿದೆ. ಅಮೆರಿಕದಲ್ಲಿ AMBER ಎಚ್ಚರಿಕೆ ವ್ಯವಸ್ಥೆಯನ್ನು ಕಾಣೆಯಾದ ಮಕ್ಕಳನ್ನು ಪತ್ತೆಹಚ್ಚಲು ಮಕ್ಕಳ ಅಪಹರಣ ತುರ್ತು ಎಚ್ಚರಿಕೆಯಾಗಿ ಬಳಸಲಾಗುತ್ತದೆ.

6-8 ತಿಂಗಳಲ್ಲಿ ಎಚ್ಚರಿಕೆ ವ್ಯವಸ್ಥೆಯನ್ನು ಆರಂಭಿಸಲು ಸರ್ಕಾರ ಚಿಂತನೆ

ಮುಂದಿನ ಆರರಿಂದ ಎಂಟು ತಿಂಗಳಲ್ಲಿ ಎಚ್ಚರಿಕೆ ವ್ಯವಸ್ಥೆಯನ್ನು ಆರಂಭಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಎನ್‌ಡಿಎಂಎ ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ. ಕಾಮನ್ ಅಲರ್ಟಿಂಗ್ ಪ್ರೋಟೋಕಾಲ್‌ನ ಎರಡನೇ ಹಂತವನ್ನು ಇಂದು ಪರೀಕ್ಷಿಸಲಾಯಿತು. ಮುಂಬರುವ ತಿಂಗಳುಗಳಲ್ಲಿ, ಟಿವಿ, ರೇಡಿಯೋ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ತುರ್ತು ವಿಪತ್ತು ಎಚ್ಚರಿಕೆ ಸಂದೇಶಗಳನ್ನು ಪ್ರಸಾರ ಮಾಡಲು ಟೆಸ್ಟಿಂಗ್ ಕೈಗೊಳ್ಳಲು ಸರ್ಕಾರ ಯೋಜಿಸಿದೆ ಎಂದು ಮೂಲಗಳು ಹೇಳಿರುವುದಾಗಿ ವರದಿಯಲ್ಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:12 pm, Thu, 17 August 23