ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಗೆದ್ದಿದ್ದೇ ಗೆದ್ದಿದ್ದು, ಆ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹರ್ಯಾಣದ ಹಲವು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿಯ ಮಾಜಿ ಶಾಸಕ ಗುರುಗಾಂವ್ ಶಾಸಕ ಉಮೇಶ್ ಅಗರ್ವಾಲ್, ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಬಿಜೇಂದ್ರ ಸಿಂಗ್ ಸೇರಿ ಹಲವು ನಾಯಕರು ಆಪ್ಗೆ ಸೇರ್ಪಡೆಗೊಂಡಿದ್ದಾರೆ.
ಗುರುಗ್ರಾಮದ ಬಿಜೆಪಿ ಮಾಜಿ ಶಾಸಕ ಉಮೇಶ್ ಅಗರ್ವಾಲ್, ಹಿರಿಯ ಕಾಂಗ್ರೆಸ್ ನಾಯಕ ಬಿಜೇಂದ್ರ ಸಿಂಗ್, ಭಾರತೀಯ ರಾಷ್ಟ್ರೀಯ ಲೋಕದಳ ನಾಯಕ, ಹರ್ಯಾಣದ ಮಾಜಿ ಸಚಿವ ಬಲಬೀರ್ ಸೈನಿ ಮತ್ತಿತರ ಪ್ರಮುಖ ನಾಯಕರು ಇದೀಗ ಆಪ್ ಪಕ್ಷ ಸೇರಿದ್ದಾರೆ. ಇನ್ನು, ಸಮಲ್ಖಾದ ಮಾಜಿ ಶಾಸಕ (ಸ್ವತಂತ್ರ) ರವೀಂದ್ರ ಕುಮಾರ್, ಕಾಂಗ್ರೆಸ್ ನಾಯಕ ಜಗತ್ ಸಿಂಗ್, ಬಿಎಸ್ಪಿಯ ಅಶೋಕ್ ಮಿತ್ತಲ್, ಬಿಜೆಪಿಯ ಅಮಂದೀಪ್ ಸಿಂಗ್ ವಾರಾಯಿಚ್, ಬಿಜೆಪಿಯ ಬಹ್ಮ ಸಿಂಗ್ ಗುರ್ಜಾರ್, ಹರ್ಯಾಣದ ಸರ್ಪಂಚ್ ಆಗಿದ್ದ ಸರ್ದಾರ್ ಗುರ್ಲಾಲ್ ಸಿಂಗ್ ಕೂಡ ಕೈಯಲ್ಲಿ ಪೊರಕೆ ಹಿಡಿದಿದ್ದಾರೆ. ಅರ್ಥಾತ್ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ.
ಈ ಬಗ್ಗೆ ಆಪ್ ಶಾಸಕ ಸುಶೀಲ್ ಗುಪ್ತಾ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಂದ ಹಲವು ಶಾಸಕರು, ಪ್ರಮುಖ ನಾಯಕರು ಆಪ್ ಸೇರಿದ್ದಾರೆ. ಇವರೆಲ್ಲ ದೆಹಲಿಯಲ್ಲಿ, ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು ಎಂದೂ ತಿಳಿಸಿದ್ದಾರೆ. ಪಂಜಾಬ್ ಮತ್ತು ದೆಹಲಿಯ ನಂತರ ಹರ್ಯಾಣದ ಜನರು ಆಪ್ನತ್ತ ಒಲವು ತೋರಿಸುತ್ತಿದ್ದಾರೆ. ಅಲ್ಲಿಯೂ ಕೂಡ ಮುಂದಿನ ಚುನಾವಣೆ ನಂತರ ಆಪ್ ಸರ್ಕಾರ ರಚಿಸಲಿದೆ ಎಂದು ಹೇಳಿದ್ದಾರೆ.
Published On - 9:23 am, Tue, 15 March 22