Twin Tube Tunnel: ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಯ ಕೆಳಗೆ ನಿರ್ಮಾಣಗೊಳ್ಳಲಿದೆ ಅವಳಿ ಕೊಳವೆ ಸುರಂಗ, ವೈಶಿಷ್ಟ್ಯವೇನು?

ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಯ ಕೆಳಗೆ ₹18,662 ಕೋಟಿ ವೆಚ್ಚದಲ್ಲಿ ಅವಳಿ ಸುರಂಗ ಮಾರ್ಗ ನಿರ್ಮಾಣಗೊಳ್ಳುತ್ತಿದೆ. ವಾಹನಗಳು ಮತ್ತು ರೈಲುಗಳೆರಡಕ್ಕೂ ಅವಕಾಶ ಕಲ್ಪಿಸುವ ಈ ಸುರಂಗವು ಗೋಹ್ಪುರ್ ಮತ್ತು ನುಮಾಲಿಗಢವನ್ನು ಸಂಪರ್ಕಿಸುತ್ತದೆ. ಇದು 33.7 ಕಿ.ಮೀ. ಕಾರಿಡಾರ್ ಭಾಗವಾಗಿದ್ದು, ಪ್ರಯಾಣದ ಸಮಯವನ್ನು ಆರು ಗಂಟೆಗಳಿಂದ ಕೇವಲ 20 ನಿಮಿಷಗಳಿಗೆ ಇಳಿಸಿ, ಈಶಾನ್ಯ ಭಾರತದ ಸಂಪರ್ಕ ಮತ್ತು ಭದ್ರತೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ.

Twin Tube Tunnel: ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಯ ಕೆಳಗೆ ನಿರ್ಮಾಣಗೊಳ್ಳಲಿದೆ ಅವಳಿ ಕೊಳವೆ ಸುರಂಗ, ವೈಶಿಷ್ಟ್ಯವೇನು?
ಸುರಂಗ-ಸಾಂದರ್ಭಿಕ ಚಿತ್ರ
Image Credit source: AI Generated Image

Updated on: Feb 16, 2026 | 7:35 AM

ಗುವಾಹಟಿ, ಫೆಬ್ರವರಿ 16: ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಯ ಕೆಳಗೆ ಅವಳಿ ಕೊಳವೆ ಸುರಂಗ ಮಾರ್ಗ(Tunnel) ನಿರ್ಮಿಸಲಾಗುತ್ತಿದೆ. ಈ ಅವಳಿ ಸುರಂಗದ ವಿಶೇಷತೆ ಏನೆಂದರೆ ಈ ಸುರಂಗದಲ್ಲಿ ವಾಹನಗಳು ಹಾಗೂ ರೈಲು ಒಂದೇ ಕಡೆ ಚಲಿಸುತ್ತದೆ. ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿ ಕೆಳಗೆ ಈ ವಂಡರ್ ಟನಲ್ ನಿರ್ಮಾಣಗೊಳ್ಳಲಿದೆ. 33.7 ಕಿಲೋಮೀಟರ್ ಉದ್ದದ ಈ ಸುರಂಗವು ಗೋಹ್ಪುರ್ ಮತ್ತು ನುಮಾಲಿಗಢವನ್ನು ಸಂಪರ್ಕಿಸುತ್ತದೆ.

ಪ್ರಯಾಣದ ಸಮಯವನ್ನು ಆರು ಗಂಟೆಗಳಿಂದ 20 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾದ ಈ ಸುರಂಗವು ಈಶಾನ್ಯ ಭಾರತದ ಸಂಪರ್ಕ ಮತ್ತು ಭದ್ರತೆಯನ್ನು ಬಲಪಡಿಸುತ್ತದೆ. ಈ ಸುರಂಗವು ಪ್ರಯಾಣದ ದೂರವನ್ನು 240 ಕಿ.ಮೀ ನಿಂದ ಕೇವಲ 34 ಕಿ.ಮೀ ಗೆ ಇಳಿಸುತ್ತದೆ ಮತ್ತು ಪ್ರಯಾಣದ ಸಮಯವನ್ನು ಆರು ಗಂಟೆಗಳಿಂದ 20 ನಿಮಿಷಗಳಿಗೆ ಇಳಿಸುತ್ತದೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಇದನ್ನು ಘೋಷಿಸಿದ್ದಾರೆ. ಮೋದಿ ಸರ್ಕಾರವು 18,662 ಕೋಟಿ ರೂ. ಮೌಲ್ಯದ ಯೋಜನೆಯನ್ನು ನಿರ್ಮಿಸಲು ಸಜ್ಜಾಗಿದೆ. ನದಿಯ ಅಡಿಯಲ್ಲಿ ಅವಳಿ-ಟ್ಯೂಬ್ ಸುರಂಗವನ್ನು ಅನುಮೋದಿಸಿದೆ. ಮೋದಿ ಸರ್ಕಾರದ ಸಂಪುಟ ನಿರ್ಧಾರದ ನಂತರ, ಎಲ್ಲೆಲ್ಲೂ ಈ ಸುರಂಗದ ಬಗ್ಗೆಯೇ ಮಾತು. ಯುರೋಪಿನಲ್ಲಿ ನಿರ್ಮಿಸಲಾದ ಸುರಂಗಕ್ಕೆ ಹೋಲಿಸಲಾಗುತ್ತಿದೆ.

ಗೋಹ್ಪುರ್ (NH-15) ಮತ್ತು ನುಮಲಿಗಢ್ (NH-715) ನಡುವಿನ 4-ಪಥದ ಪ್ರವೇಶ-ನಿಯಂತ್ರಿತ ಗ್ರೀನ್‌ಫೀಲ್ಡ್ ಕಾರಿಡಾರ್‌ನ ಭಾಗವಾಗಿ ರೂಪುಗೊಳ್ಳುವ 15.79-ಕಿಮೀ ಅವಳಿ-ಟ್ಯೂಬ್ ಸುರಂಗವು 33.7-ಕಿಮೀ ಕಾರಿಡಾರ್‌ನ ಭಾಗವಾಗಲಿದ್ದು, ಒಂದು ಕಡೆ ವಾಹನಗಳು ಓಡಾಡಿದರೆ ಇನ್ನೊಂದು ಕಡೆ ರೈಲು ಚಲಿಸುತ್ತದೆ.

ಮತ್ತಷ್ಟು ಓದಿ: ಬೆಂಗಳೂರು ಸುರಂಗ ರಸ್ತೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಹೇಗೆಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟ ತೇಜಸ್ವಿ ಸೂರ್ಯ

 

ಇದು ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಇತರ ಈಶಾನ್ಯ ಪ್ರದೇಶಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ. ಈ ನೀರೊಳಗಿನ ಸುರಂಗವನ್ನು ಬ್ರಹ್ಮಪುತ್ರ ನದಿಯ ಕೆಳಗೆ ನಿರ್ಮಿಸಲಾಗುವುದು. ಎರಡು ಸುರಂಗಗಳನ್ನು ಏಕಕಾಲದಲ್ಲಿ ನಿರ್ಮಿಸಲಾಗುವುದು, ಒಂದು ರೈಲು ಮಾರ್ಗಕ್ಕಾಗಿ ಮತ್ತು ಇನ್ನೊಂದು ರಸ್ತೆಗಾಗಿ. ಪೂರ್ಣಗೊಂಡ ನಂತರ, ನದಿಯನ್ನು ದಾಟಲು ತೆಗೆದುಕೊಳ್ಳುವ ಸಮಯ ಕಡಿಮೆಯಾಗುತ್ತದೆ. ಈಶಾನ್ಯದಲ್ಲಿ ಚಿಕನ್ ನೆಕ್ ಕಾರಿಡಾರ್ ಮೂಲಕ ಹಾದುಹೋಗುವ ಇದೇ ರೀತಿಯ 22-ಕಿಮೀ ರಸ್ತೆ-ಕಮ್ರೈಲ್ ಸುರಂಗವು ಸಹ ಯೋಜನಾ ಹಂತದಲ್ಲಿದೆ.

ಮೂರು ರೈಲ್ವೆ ಮಲ್ಟಿಟ್ರ್ಯಾಕಿಂಗ್ ಯೋಜನೆಗಳಿಗೂ ಸಚಿವ ಸಂಪುಟ ಅನುಮೋದನೆ ನೀಡಿದೆ. ಇವುಗಳಲ್ಲಿ ಕಸರಾ ಮತ್ತು ಮನ್ಮಾಡ್ ನಡುವಿನ ಮಾರ್ಗ, ದೆಹಲಿ ಮತ್ತು ಅಂಬಾಲ ನಡುವಿನ ಮೂರನೇ ಮತ್ತು ನಾಲ್ಕನೇ ಮಾರ್ಗಗಳು ಮತ್ತು ಬಳ್ಳಾರಿ ಮತ್ತು ಹೊಸಪೇಟೆ ನಡುವಿನ ಮಾರ್ಗಗಳು ಸೇರಿವೆ. ಅವುಗಳ ಅಂದಾಜು ವೆಚ್ಚ 18,509 ಕೋಟಿ ರೂ. ಇವುಗಳ ಕೆಲಸ 2030-31ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಯೋಜನೆಯು ದೆಹಲಿ, ಹರಿಯಾಣ, ಮಹಾರಾಷ್ಟ್ರ ಮತ್ತು ಕರ್ನಾಟಕದ 12 ಜಿಲ್ಲೆಗಳನ್ನು ಒಳಗೊಂಡಿದೆ. ಹೆಚ್ಚುವರಿ ಹಳಿಗಳನ್ನು ಹಾಕುವುದರಿಂದ ಸುಮಾರು 3,902 ಹಳ್ಳಿಗಳಿಗೆ ಸಂಪರ್ಕ ಸುಧಾರಿಸುತ್ತದೆ. 97 ಲಕ್ಷ ಜನಸಂಖ್ಯೆಗೆ ಪ್ರಯೋಜನವಾಗುತ್ತದೆ ಮತ್ತು ಉದ್ಯೋಗವೂ ಹೆಚ್ಚಾಗುತ್ತದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:30 am, Mon, 16 February 26