ನವದೆಹಲಿಯಲ್ಲಿ ‘ಬ್ರಿಕ್ಸ್ ಥಿಯೇಟರ್ ಫೆಸ್ಟಿವಲ್’: ರಷ್ಯಾದ ಗಿಟಿಸ್‌ ತಂಡದಿಂದ ‘ಲಾ ಬಯಾಡೆರ್​’ ಗೀತನಾಟಕ ಪ್ರದರ್ಶನ!

ನವದೆಹಲಿಯಲ್ಲಿ ಅಕ್ಟೋಬರ್ 12 ರಂದು ಬ್ರಿಕ್ಸ್ ಥಿಯೇಟರ್ ಫೆಸ್ಟಿವಲ್ ಅಂಗವಾಗಿ ರಷ್ಯಾದ GITIS ಥಿಯೇಟರ್‌ನ "ಲಾ ಬಯಾಡೆರೆ" ನಾಟಕ ಪ್ರದರ್ಶನಗೊಳ್ಳಲಿದೆ. ಇಮ್ರೆ ಕಾಲ್ಮನ್ ಅವರ ಈ ಪ್ರಸಿದ್ಧ ಅಪೆರೆಟ್ಟಾ 1950ರ ಹಾಲಿವುಡ್ ಸ್ಟುಡಿಯೋ ಕಥಾವಸ್ತುವನ್ನು ಹೊಂದಿದೆ. ಶಾಸ್ತ್ರೀಯ ಮತ್ತು ಜಾಝ್ ಸಂಗೀತದ ಸಮ್ಮಿಲನದಿಂದ ಕೂಡಿದ ಈ ಅನನ್ಯ ಪ್ರದರ್ಶನ ಕಲಾಪ್ರಿಯರಿಗೆ ಉತ್ತಮ ರಸದೌತಣ ನೀಡಲಿದೆ. ಟಿಕೆಟ್‌ಗಳನ್ನು ಬುಕ್ ಮೈ ಶೋ ಮೂಲಕ ಕಾಯ್ದಿರಿಸಬಹುದು.

ನವದೆಹಲಿಯಲ್ಲಿ ‘ಬ್ರಿಕ್ಸ್ ಥಿಯೇಟರ್ ಫೆಸ್ಟಿವಲ್’: ರಷ್ಯಾದ ಗಿಟಿಸ್‌ ತಂಡದಿಂದ ‘ಲಾ ಬಯಾಡೆರ್​’ ಗೀತನಾಟಕ ಪ್ರದರ್ಶನ!
ಲಾ ಬಯಾಡೆರ್
Image Credit source: instagram/russiainindia

Updated on: Oct 07, 2026 | 11:04 AM

ನವದೆಹಲಿ: ಸಾಂಸ್ಕೃತಿಕ ಪ್ರಿಯರಿಗೆ ಸಂಸ್ಕೃತಿ ಮತ್ತು ಕಲೆಯ ರಸದೌತಣವೊಂದು ಕಾಯುತ್ತಿದೆ. ಬ್ರಿಕ್ಸ್ ಥಿಯೇಟರ್ ಫೆಸ್ಟಿವಲ್ (BRICS Theatre Festival) ಅಂಗವಾಗಿ, ರಷ್ಯಾದ ಪ್ರಸಿದ್ಧ ‘ಗಿಟಿಸ್ ಥಿಯೇಟರ್’ (GITIS Theatre) ತಂಡವು ಇಮ್ರೆ ಕಾಲ್ಮನ್ ಅವರ ಪ್ರಸಿದ್ಧ ಆಪೆರೆಟ್ಟಾ(ಹಾಸ್ಯಭರಿತ ಗೀತನಾಟಕ) “ಲಾ ಬಯಾಡೆರ್” (La Bayadère) ನಾಟಕವನ್ನು ದೆಹಲಿಯಲ್ಲಿ ಪ್ರದರ್ಶಿಸಲಿದೆ.

1950ರ ಹಾಲಿವುಡ್ ಸ್ಟುಡಿಯೋ ಕಥಾಹಂದರ:

ಈ ನಾಟಕದ ಕಥೆಯು 1950ರ ದಶಕದ ಹಾಲಿವುಡ್ ಚಲನಚಿತ್ರ ಸ್ಟುಡಿಯೋವೊಂದರಲ್ಲಿ ನಡೆಯುತ್ತದೆ. ಅಲ್ಲಿ “ಲಾ ಬಯಾಡೆರೆ” ಎಂಬ ಮ್ಯೂಸಿಕಲ್ ಸಿನಿಮಾದ ಚಿತ್ರೀಕರಣ ನಡೆಯುತ್ತಿರುತ್ತದೆ. ತನಗೆ ಇಷ್ಟವಿಲ್ಲದ ಕಥೆಯನ್ನು ನಿರ್ದೇಶಕನು ಅನಿವಾರ್ಯವಾಗಿ ನಿರ್ದೇಶಿಸಬೇಕಾಗುತ್ತದೆ. ಇನ್ನೊಂದೆಡೆ, ಮುಖ್ಯ ನಟಿ ಬೇರೆ ಸ್ಟುಡಿಯೋಗೆ ಹೊರಟುಹೋಗುತ್ತಾಳೆ, ಹಾಗೂ ನಾಯಕನ ಪಾತ್ರವಾದ ‘ಭಾರತೀಯ ರಾಜಕುಮಾರ ರಾಜಾಮಿ’ ಪಾತ್ರಕ್ಕೆ ಸೂಕ್ತ ನಟ ಸಿಗದೆ ಚಿತ್ರತಂಡ ಪರದಾಡುತ್ತದೆ. ಆದರೆ “ಹಾಲಿವುಡ್” ಎಂಬ ಚಿತ್ರೋದ್ಯಮದ ಹಿಂದೆ ಸರಿಯುವುದಿಲ್ಲ, ಬದಲಾಗಿ ಹೊಸ ಸ್ಟಾರ್​​​​​ ಸೃಷ್ಟಿಸಲು ಚಿತ್ರತಂಡ ಹೇಗೆ ಶ್ರಮಿಸುತ್ತದೆ ಎಂಬುದೇ ಈ ಕಥೆಯ ಸ್ವಾರಸ್ಯ.

ಶಾಸ್ತ್ರೀಯ ಸಂಗೀತ ಮತ್ತು ಜಾಝ್‌ನ ಸಮ್ಮಿಲನ:

ಇಮ್ರೆ ಕಾಲ್ಮನ್ ಅವರ ಅಭಿಜಾತ ಶಾಸ್ತ್ರೀಯ ಸಂಗೀತದ ಜೊತೆಗೆ ಆಧುನಿಕ ಜಾಝ್ (Jazz) ಶೈಲಿಯನ್ನು ಸಂಯೋಜಿಸಿ, ಇಂದಿನ ಪ್ರೇಕ್ಷಕರಿಗೆ ತಲುಪುವಂತೆ ಈ ಅಪೆರೆಟ್ಟಾವನ್ನು ವಿನ್ಯಾಸಗೊಳಿಸಲಾಗಿದೆ.

ರಷ್ಯಾದ ಹೆಸರಾಂತ ಕಲಾವಿದರಿಂದ ನಿರ್ದೇಶನ:

ರಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಥಿಯೇಟರ್ ಆರ್ಟ್ಸ್ (GITIS) ಸಂಸ್ಥೆಯ ಗೆರಾರ್ಡ್ ವಾಸಿಲೀವ್ ಮತ್ತು ಝನ್ನಾ ಝೆರ್ಡರ್ ಅವರ ಗೈಡೆನ್ಸ್‌ನಲ್ಲಿ ತರಬೇತಿ ಪಡೆದ ಯುವ ನಟರು ಇದನ್ನು ಪ್ರದರ್ಶಿಸಲಿದ್ದಾರೆ. ರಷ್ಯಾದ ಗೌರವಾನ್ವಿತ ಕಲಾವಿದೆ ಝನ್ನಾ ಝೆರ್ಡರ್ (Zhanna Zherder) ಅವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ತಿರುಮಲ ಶ್ರೀವಾರಿ ಭಕ್ತರಿಗೆ ಟಿಟಿಡಿ ಸಿಹಿ ಸುದ್ದಿ: ನವರಾತ್ರಿ ಬ್ರಹ್ಮೋತ್ಸವಕ್ಕೆ 300ರೂ. ದರ್ಶನ ಟಿಕೆಟ್ ಬಿಡುಗಡೆ!

ಕಾರ್ಯಕ್ರಮದ ವಿವರಗಳು (Event Details):

  • ಸ್ಥಳ: ಕಮಾನಿ ಆಡಿಟೋರಿಯಂ, ಕೋಪರ್ನಿಕಸ್ ಮಾರ್ಗ, ನವದೆಹಲಿ
  • ದಿನಾಂಕ: ಅಕ್ಟೋಬರ್ 12, 2026
  • ಸಮಯ: ಸಂಜೆ 6:00 ರಿಂದ 8:30
  • ಭಾಷೆ: ರಷ್ಯನ್ (Russian)
  • ಟಿಕೆಟ್ ಕಾಯ್ದಿರಿಸುವಿಕೆ: ಬುಕ್ ಮೈ ಶೋ (BookMyShow) ಅಧಿಕೃತ ಲಿಂಕ್ ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:03 am, Wed, 7 October 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us