Buget 2021: ಹೊಸತಾಗಿ 100 ಸೈನಿಕ ಶಾಲೆ, 750 ಏಕಲವ್ಯ ಮಾದರಿ ವಸತಿ ಶಾಲೆ ಅಭಿವೃದ್ಧಿಗೆ ಯೋಜನೆ

| Updated By: ರಾಜೇಶ್ ದುಗ್ಗುಮನೆ

Updated on: Feb 01, 2021 | 7:47 PM

Budget 2021 ಬುಡಕಟ್ಟು ಪ್ರದೇಶಗಳಲ್ಲಿ 750 ಏಕಲವ್ಯ ಮಾದರಿ ಶಾಲೆಗಳನ್ನು ಆರಂಭಿಸಲಾಗುವುದು. ಪ್ರತಿಶಾಲೆಗೆ 20 ಕೋಟಿಯಿಂದ ₹38 ಕೋಟಿ ಅನುದಾನ ಏರಿಕೆ ಮಾಡಿದ್ದು ಗುಡ್ಡಪ್ರದೇಶಗಳಲ್ಲಿರುವ ಶಾಲೆಗಳಿಗೆ 48 ಕೋಟಿವರೆಗೆ ಅನುದಾನ ಏರಿಕೆ ಮಾಡಲಾಗಿದೆ.

Buget 2021: ಹೊಸತಾಗಿ 100 ಸೈನಿಕ ಶಾಲೆ, 750 ಏಕಲವ್ಯ ಮಾದರಿ ವಸತಿ ಶಾಲೆ ಅಭಿವೃದ್ಧಿಗೆ ಯೋಜನೆ
ವಿದ್ಯಾರ್ಥಿಗಳು (ಪಿಟಿಐ ಚಿತ್ರ)
Follow us on

ದೆಹಲಿ : ರಾಜ್ಯ ಸರ್ಕಾರ, ಖಾಸಗಿ ಶಾಲೆ ಮತ್ತು ಎನ್​ಜಿಒ ಸಹಭಾಗಿತ್ವದೊಂದಿಗೆ ದೇಶದಲ್ಲಿ 100 ಸೈನಿಕ ಶಾಲೆಗಳನ್ನು ಆರಂಭಿಸಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ 15,000ಕ್ಕಿಂತಲೂ ಹೆಚ್ಚು ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಬಜೆಟ್ ಮಂಡನೆ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಉನ್ನತ ಶಿಕ್ಷಣದ ಬಗ್ಗೆ ಬಜೆಟ್ ಭಾಷಣದಲ್ಲಿ ಮಾತನಾಡಿದ ನಿರ್ಮಲಾ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಸೌಲಭ್ಯ, ಅರ್ಹತೆ , ನಿಯಂತ್ರಣ ಮತ್ತು ಅನುದಾನ- ಹೀಗೆ ನಾಲ್ಕು ವಿಭಾಗಗಳಾಗಿ ವಿಂಗಡಿಸಸಲಾಗುವುದು. ಲಡಾಖ್ ನಲ್ಲಿ ಉನ್ನತ ಶಿಕ್ಷಣ ಒದಗಿಸುವುದಕ್ಕಾಗಿ ಲೇಹ್ ನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ .

ಬುಡಕಟ್ಟು ಪ್ರದೇಶಗಳಲ್ಲಿ 750 ಏಕಲವ್ಯ ಮಾದರಿ ಶಾಲೆಗಳನ್ನು ಆರಂಭಿಸಲಾಗುವುದು. ಪ್ರತಿಶಾಲೆಗೆ 20 ಕೋಟಿಯಿಂದ ₹38 ಕೋಟಿ ಅನುದಾನ ಏರಿಕೆ ಮಾಡಿದ್ದು ಗುಡ್ಡಪ್ರದೇಶಗಳಲ್ಲಿರುವ ಶಾಲೆಗಳಿಗೆ 48 ಕೋಟಿವರೆಗೆ ಅನುದಾನ ಏರಿಕೆ ಮಾಡಲಾಗಿದೆ.
ಈ ವರ್ಷದಿಂದ ಮುಂದಿನ 6 ವರ್ಷದವರೆಗೆ (2025- 2026) ಪರಿಶಿಷ್ಟ ಜಾತಿ ವಿಭಾಗಕ್ಕೆ ಸೇರಿದ 4 ಕೋಟಿ ವಿದ್ಯಾರ್ಥಿಗಳಿಗೆ ₹35,219 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ.

ಶಿಕ್ಷಣ ಪೂರ್ವ ಅಪ್ರೆಂಟಿಸ್​ಶಿಪ್, ಇಂಜಿನಿಯರಿಂಗ್ ಪದವೀಧರರರಿಗೆ ಮತ್ತು ಡಿಪ್ಲೊಮಾ ಹೊಂದಿರುವವರಿಗೆ ತರಬೇತಿಗೆ ₹3,000ಕ್ಕಿಂತಲೂ ಹೆಚ್ಚು ಕೋಟಿ ಅನುದಾನ ನೀಡಲು ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ತರಬೇತಿ ಯೋಜನೆ(ಎನ್ ಎಟಿಎಸ್)ಗೆ ತಿದ್ದುಪಡಿ ಪ್ರಸ್ತಾಪವನ್ನು ನಿರ್ಮಲಾ ಮುಂದಿಟ್ಟಿದ್ದಾರೆ.

‘ಆವಿಷ್ಕಾರ, ಸಂಶೋಧನೆ ಮತ್ತು ಅಭಿವೃದ್ದಿ ’ ಕ್ಷೇತ್ರವನ್ನು ಬಲಪಡಿಸಲು, ಐದು ವರ್ಷಗಳಿಂದ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನಕ್ಕೆ 50,000 ಕೋಟಿ ಅನುದಾನ ನೀಡಲಾಗಿದೆ.

ರಾಷ್ಟ್ರೀಯ ಭಾಷಾ ಅನುವಾದ ಮಿಷನ್ (ಎನ್‌ಎಲ್‌ಟಿಎಂ) – ಪ್ರಮುಖ ಭಾರತೀಯ ಭಾಷೆಗಳಲ್ಲಿ ನೀತಿ ಮತ್ತು ಸರ್ಕಾರಿ ದಾಖಲೆಗಳನ್ನು ಲಭ್ಯವಾಗುವಂತೆ ಮಾಡಲು ಹೊಸ ಉಪಕ್ರಮವನ್ನು ಪರಿಚಯಿಸಲಾಗುತ್ತಿದೆ. ಅಲ್ಲದೆ, ಆಳ ಸಮುದ್ರ ಸಂಶೋಧನೆಗೆ ಮುಂದಿನ 5 ವರ್ಷಗಳಲ್ಲಿ ₹4000 ಕೋಟಿ ಖರ್ಚು ಮಾಡಲಿದ್ದು ಡೀಪ್ ಓಷನ್ ಮಿಷನ್ ಅನ್ನು ಪ್ರಾರಂಭಿಸಲಾಗುವುದು ಎಂದು ವಿತ್ತ ಸಚಿವರು ಹೇಳಿದ್ದಾರೆ.

Budget 2021 | ನಾಲ್ಕು ರಾಜ್ಯಗಳ ಚುನಾವಣೆಗೆ ‘ಹೆದ್ದಾರಿ’ ನಿರ್ಮಿಸಿದ ಕೇಂದ್ರ ಬಜೆಟ್​

Published On - 7:46 pm, Mon, 1 February 21