ಶಾಜಾಪುರ: ಇಂದು ಬೆಳಗ್ಗೆ ಬಸ್ ಮತ್ತು ಟ್ರಕ್ ಡಿಕ್ಕಿಯಾಗಿರುವ ಘಟನೆ ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ನಡೆದಿದೆ. ಈ ಅಪಘಾತದಲ್ಲಿ 4 ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಈ ಬಸ್ನಲ್ಲಿ ಪ್ರಯಾಣಿಕರು ಅಹಮದಾಬಾದ್‌ಗೆ ತೆರಳುತ್ತಿದ್ದ, ಶಾಜಾಪುರ ಬಳಿ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ತಕ್ಷಣ ಸ್ಥಳೀಯ ಆಡಳಿತ ಆಗಮಿಸಿದ್ದು, ತುರ್ತು ಚಿಕಿತ್ಸಾ ದಳದವರು ನೆರವು ನೀಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಉಜ್ಜಯಿನಿಯ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
Published On - 9:46 am, Thu, 18 May 23