ಜುಲೈ 1 ರಿಂದ ಈ ಪ್ಲಾಸ್ಟಿಕ್​​​ ವಸ್ತುಗಳನ್ನು ಸುತರಾಂ ಬಳಸುವಂತಿಲ್ಲ! ನಿಷೇಧ ಹೇರಿದ್ದೇವೆ ಎಂದ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್

| Updated By: ವಿವೇಕ ಬಿರಾದಾರ

Updated on: Jun 27, 2022 | 7:48 PM

ಭಾರತವು ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಗಳಲ್ಲಿ ಪ್ಲಾಸ್ಟಿಕ್​​ ಬಳಕೆಯು ಒಂದಾಗಿದೆ. ಭಾರತವು  ಪ್ರತಿ ವರ್ಷ 3.5 ಮಿಲಿಯನ್​​ ಟನ್​​ನಷ್ಟು ಪ್ಲಾಸ್ಟಿಕ್​​ ತ್ಯಾಜ್ಯವನ್ನು ಹೊರ ಹಾಕುತ್ತದೆ. ಇದು ಕಳೆದ ಐದು ವರ್ಷಗಳಲ್ಲಿ ದ್ವಿಗುಣವಾಗಿದೆ ಹೀಗಾಗಿ ಜುಲೈ 1 ರಿಂದ ಏಕ-ಬಳಕೆಯ ಪ್ಲಾಸ್ಟಿನ್ನು​​ ನಿಷೇಧಿಸಲಾಗುವುದು  ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಹೇಳಿದ್ದಾರೆ.  

ಜುಲೈ 1 ರಿಂದ ಈ ಪ್ಲಾಸ್ಟಿಕ್​​​ ವಸ್ತುಗಳನ್ನು ಸುತರಾಂ ಬಳಸುವಂತಿಲ್ಲ! ನಿಷೇಧ ಹೇರಿದ್ದೇವೆ ಎಂದ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್
ಪ್ಲಾಸ್ಟಿಕ್​ ತ್ಯಾಜ್ಯ
Follow us on

ನವದೆಹಲಿ: ಭಾರತವು ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಗಳಲ್ಲಿ ಪ್ಲಾಸ್ಟಿಕ್​​ (Plastic) ಬಳಕೆಯು ಒಂದಾಗಿದೆ. ಭಾರತವು  ಪ್ರತಿ ವರ್ಷ 3.5 ಮಿಲಿಯನ್​​ ಟನ್​​ನಷ್ಟು ಪ್ಲಾಸ್ಟಿಕ್​​ ತ್ಯಾಜ್ಯವನ್ನು ಹೊರ ಹಾಕುತ್ತದೆ. ಇದು ಕಳೆದ ಐದು ವರ್ಷಗಳಲ್ಲಿ ದ್ವಿಗುಣವಾಗಿದೆ ಹೀಗಾಗಿ ಜುಲೈ (July) 1 ರಿಂದ ಏಕ-ಬಳಕೆಯ ಪ್ಲಾಸ್ಟಿನ್ನು​​ ನಿಷೇಧಿಸಲಾಗುವುದು  ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ (Bhupendra Yadav) ಹೇಳಿದ್ದಾರೆ.

 ನಿಷೇಧಿಸಲಾಗುವ  ಪ್ಲಾಸ್ಟಿಕ್​​ ವಸ್ತುಗಳು ?

  1. ಪ್ಲಾಸ್ಟಿಕ್​​ ಇಯರ್ ಬಡ್ಸ್​​, ಬಲೂನ್‌ಗಳು, ಪ್ಲಾಸ್ಟಿಕ್​​ ರ್ಯಾಪರ್​, ಪ್ಲಾಸ್ಟಿಕ್ ಕಡ್ಡಿಗಳು ಮತ್ತು ಅಲಂಕಾರಕ್ಕಾಗಿ ಬಳಸುವ ಪ್ಲಾಸ್ಟಿಕ್​​ ವಸ್ತುಗಳು.
  2. ಪ್ಲಾಸ್ಟಿಕ್ ಪ್ಲೇಟ್‌ಗಳು, ಕಪ್‌ಗಳು, ಗ್ಲಾಸ್‌ಗಳು, ಫೋರ್ಕ್‌ಗಳು, ಸ್ಪೂನ್‌ಗಳು, ಚಾಕುಗಳು, ಸ್ಟ್ರಾಗಳು, ಟ್ರೇಗಳು, ಸ್ಟಿರರ್‌ಗಳನ್ನು ನಿಷೇಧಿಸಲಾಗುವುದು.
  3. ಸ್ವೀಟ್ ಬಾಕ್ಸ್‌ಗಳು, ಆಮಂತ್ರಣ ಪತ್ರಿಕೆಗಳು ಮತ್ತು ಸಿಗರೇಟ್ ಪ್ಯಾಕೆಟ್‌ಗಳಿಗಾಗಿ ಫಿಲ್ಮ್‌ಗಳನ್ನು ಪ್ಯಾಕಿಂಗ್ / ಸುತ್ತುವುದು
  4. 100 ಮೈಕ್ರಾನ್‌ಗಳಿಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಅಥವಾ PVC ಬ್ಯಾನರ್‌ಗಳನ್ನು ನಿಷೇಧಿಸಲಾಗುವುದು

ಪ್ಲಾಸ್ಟಿಕ್​​​ನ ಪರ್ಯಾಯ ವಸ್ತುಗಳು

  1. ಥರ್ಮಾಕೋಲ್ ಬದಲಿಗೆ  ಮರುಬಳಕೆಯ ಮತ್ತು ಸುಕ್ಕುಗಟ್ಟಿದ ಕಾಗದ, ಜೇನುಗೂಡಿನಂತಿರುವ ಕಾಗದಗಳನ್ನು ಬಳಸಿ
  2.  ಐಸ್ ಕ್ರೀಮ್‌ಗಳಿಗೆ ಮರದ ತುಂಡುಗಳ ಚಮಚವನ್ನು ಬಳಸಿ. ಕೇಕ್ ಮತ್ತು ಅಲ್ಪೋಪಹಾರಗಳನ್ನು ಸೇವಿಸಲು ಪೇಪರ್ ಚಮಚಗಳನ್ನು ಬಳಸಿ. ತೊಳೆಯಬಹುದಾದ ಇಯರ್‌ ಬಡ್ಸ್​​ ಅಥವಾ ಮರದ ಇಯರ್​ ಬಡ್ಸ್​ ಬಳಸಿ.
  3. ಪ್ಲಾಸ್ಟಿಕ್  ಪ್ಲೇಟ್‌ಗಳು, ಗ್ಲಾಸ್‌ಗಳು, ಕತ್ತರಿ, ಚಾಕುಗಳ ಬದಲಿಗೆ ಕಾಗದದಿಂದ ಮಾಡಿದ ಬಟ್ಟಲುಗಳು,  ಬಿದಿರಿನಿಂದ ತಯಾರಿಸಿದ ವಸ್ತು,  ಮಣ್ಣಿನ ಲೋಟಗಳು,  ಸ್ಟೀಲ್ ಕತ್ತರಿ, ಚಾಕು, ಪ್ಲೇಟ್‌ಗಳು, ಲೋಹದ ಬಾಟಲಿಗಳು ಇತ್ಯಾದಿಗಳನ್ನು ಬಳಸಿ
  4. PVC ಬ್ಯಾನರ್‌ಗಳ ಬದಲಿಗೆ  ಪಾಲಿಥಿಲೀನ್ ಮರುಬಳಕೆ ಮಾಡಬಹುದಾದ ವಸ್ತುಗಳಿಂದ ತಯಾರಿಸಿದ ಬ್ಯಾನರ್‌ಗಳನ್ನು ಬಳಸಿ.

ನಿಷೇಧಿತ ಪ್ಲಾಸ್ಟಿಕ್  ಉತ್ಪನ್ನಗಳನ್ನು ಬಳಸಿದರೆ ಅಥವಾ ಕಸ ರೂಪದಲ್ಲಿ ಹಾಕಿದರೆ ವ್ಯಕ್ತಿವ ಮತ್ತು ಮನೆಗಳಿಗೆ  500 ರೂ ಮತ್ತು ಸಾಂಸ್ಥಿಕ ತ್ಯಾಜ್ಯ ಉತ್ಪಾದಕರಿಗೆ ರೂ 5000 ದಂಡ ವಿಧಿಸಲಾಗುತ್ತದೆ.

Earthday.org ನ ವರದಿಯ ಪ್ರಕಾರ, ಜನರು ಪ್ರತಿ ನಿಮಿಷಕ್ಕೆ ಸುಮಾರು 1.2 ಮಿಲಿಯನ್ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುತ್ತಾರೆ ಮತ್ತು ಪ್ರತಿ ವರ್ಷ ಸುಮಾರು 500 ಬಿಲಿಯನ್ ಪ್ಲಾಸ್ಟಿಕ್ ಕಪ್‌ಗಳನ್ನು ಬಳಸುತ್ತಾರೆ. ಸರಿಸುಮಾರು, ನಮ್ಮ ಜಾಗತಿಕ ವಾರ್ಷಿಕ ಪ್ಲಾಸ್ಟಿಕ್ ಉತ್ಪಾದನೆಯ ಅರ್ಧದಷ್ಟು ಏಕ-ಬಳಕೆ ಪ್ಲಾಸ್ಟಿಕ್​​ನ್ನು ಉತ್ಪಾದಿಸಲಾಗುತ್ತದೆ. ವಿಜ್ಞಾನ ಮತ್ತು ಪರಿಸರ  ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳ ಅಧ್ಯಯನದ ಪ್ರಕಾರ, ಭಾರತದಲ್ಲಿ ಪ್ರತಿದಿನ 25, 940 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ.

2020 ರಲ್ಲಿ ಜಾಗತಿಕ ಸಾಗರ ಶುದ್ಧೀಕರಣದಲ್ಲಿ ಸಿಕ್ಕ ಟಾಪ್​​ 10 ತ್ಯಾಜ್ಯಗಳು

  1. ಸಿಗರೇಟ್ ತುಂಡುಗಳು: 964,521
  2. ಪ್ಲಾಸ್ಟಿಕ್ ಪಾನೀಯ ಬಾಟಲಿಗಳು: 627,014
  3. ಪ್ಲಾಸ್ಟಿಕ್​​ ರ್ಯಾಪರ್​​: 573,534
  4. ಇತರೆ ಕಸ: 519,438
  5. ಬಾಟಲ್ ಮುಚ್ಚಳ: 409,855
  6. ದಿನಸಿ ಚೀಲಗಳು: 272,399
  7. ಸ್ಟ್ರಾಗಳು, ಸ್ಟಿರರ್‌ಗಳು: 224,170
  8. ಪ್ಲಾಸ್ಟಿಕ್​​ ಡಬ್ಬ: 222,289
  9. ಪ್ಲಾಸ್ಟಿಕ್​​ ಕ್ಯಾನ್‌ಗಳು: 162,750
  10. ಗಾಜಿನ ಪಾನೀಯ ಬಾಟಲಿಗಳು: 146,255

ಪ್ಲಾಸ್ಟಿಕ್​​ನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಪರಿಸರದ ಮೇಲೆ ಆಗುವ ದುಷ್ಪರಿಣಾಮವನ್ನು ತೆಡೆಗಟ್ಟಬಹದು. ಸಾದ್ಯವಾದಷ್ಟು ಪ್ಲಾಸ್ಟಿಕ್​​ ಬಳಕೆಯನ್ನು ಕಡಿಮೆ ಮಾಡಿ. ಗಾಜು, ಸ್ಟೀಲ್​​, ಮಣ್ಣಿನ, ಕಾಗದ, ಪಿಂಗಾಣಿ, ತಾಮ್ರದ ವಸ್ತುಗಳನ್ನು ಬಳಸಿ.