ದೆಹಲಿ ಆಗಸ್ಟ್ 29: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಂಗಳವಾರ ಚಂದ್ರಯಾನ-3 (Chandrayaan 3) ರ ಪ್ರಗ್ಯಾನ್ ರೋವರ್ (Pragyan Rover) ಕುರಿತು ಹೊಸ ಅಪ್ಡೇಟ್ ಹಂಚಿಕೊಂಡಿದೆ. Hello earthlings! (ಭೂಮಿಯಲ್ಲಿ ವಾಸಿಸುವವರೇ) ಇದು ಚಂದ್ರಯಾನ-3ರ ರ ಪ್ರಗ್ಯಾನ್ ರೋವರ್. ನೀವು ಚೆನ್ನಾಗಿದ್ದೀರಿ ಎಂದು ನಾನು ಭಾವಿಸುತ್ತೇನೆ. ನಾನು ಚಂದ್ರನ ರಹಸ್ಯಗಳನ್ನು ಬಹಿರಂಗಪಡಿಸುವ ಹಾದಿಯಲ್ಲಿದ್ದೇನೆ ಎಂದು ಎಲ್ಲರಿಗೂ ತಿಳಿಸಲು ನಾನು ಬಯಸುತ್ತೇನೆ. ನಾನು ಮತ್ತು ನನ್ನ ಸ್ನೇಹಿತ ವಿಕ್ರಮ್ ಲ್ಯಾಂಡರ್ ಸಂಪರ್ಕದಲ್ಲಿದ್ದೇವೆ. ನಾವು ಆರೋಗ್ಯವಾಗಿದ್ದೇವೆ. ಶೀಘ್ರದಲ್ಲೇ ಒಳ್ಳೆಯ ಸಂಗತಿ ಹೇಳುವೆ ಎಂದು ಚಂದ್ರಯಾನ 3 ಅಧಿಕೃತ ಎಕ್ಸ್ ಹ್ಯಾಂಡಲ್ ಪೋಸ್ಟ್ ಮಾಡಿದೆ.
ಸೋಮವಾರ, ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈಯಲ್ಲಿ ಅದರ ಸ್ಥಳಕ್ಕಿಂತ ಸ್ವಲ್ಪ ಮುಂದೆ ನಾಲ್ಕು ಮೀಟರ್ ವ್ಯಾಸದ ಕುಳಿಯನ್ನು ಎದುರಿಸಿತು. ನಂತರ ಅದರ ಮಾರ್ಗವನ್ನು ಹಿಂತಿರುಗಿಸಲು ಆದೇಶಿಸಲಾಯಿತು. ಪಥವನ್ನು ಬದಲಿಸಲು ರೋವರ್‌ಗೆ ಆದೇಶ ನೀಡಲಾಯಿತು ಎಂದು ಇಸ್ರೋ ಎಕ್ಸ್‌ನಲ್ಲಿ ಪೋಸ್ಟ್ ಮಾಡಿತ್ತು. ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಚಂದ್ರನ ಮೇಲ್ಮೈ ಥರ್ಮೋಫಿಸಿಕಲ್ ಪ್ರಯೋಗ (ChaSTE) ಪೇಲೋಡ್‌ನಿಂದ ‘ವಿಕ್ರಮ್ ಲ್ಯಾಂಡರ್’ನಲ್ಲಿ ಮೊದಲ ವೀಕ್ಷಣೆಯನ್ನು ಬಿಡುಗಡೆ ಮಾಡಿದ ಒಂದು ದಿನದ ನಂತರ ಇದು ಬಂದಿದೆ.
PHOTO | “Hello earthlings! This is #Chandrayaan3‘s Pragyan Rover. I hope you’re doing well. I want to let everyone know that I’m on my way to uncover the secrets of the Moon 🌒. Me and my friend Vikram Lander are in touch. We’re in good health. The best is coming soon…” posts… pic.twitter.com/9eld2uQRAZ
— Press Trust of India (@PTI_News) August 29, 2023
ChaSTE (ಚಂದ್ರನ ಮೇಲ್ಮೈ ಥರ್ಮೋಫಿಸಿಕಲ್ ಪ್ರಯೋಗ) ಚಂದ್ರನ ಮೇಲ್ಮೈಯ ಉಷ್ಣ ವರ್ತನೆಯನ್ನು ಅರ್ಥಮಾಡಿಕೊಳ್ಳಲು ಧ್ರುವದ ಸುತ್ತಲಿನ ಚಂದ್ರನ ಮೇಲಿನ ತಾಪಮಾನವನ್ನು ಅಳೆಯುತ್ತದೆ.
ಇದು ಮೇಲ್ಮೈ ಕೆಳಗೆ 10 ಸೆಂ.ಮೀ ಆಳವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿರುವ ನಿಯಂತ್ರಿತ ನುಗ್ಗುವ ಕಾರ್ಯವಿಧಾನವನ್ನು ಹೊಂದಿರುವ ತಾಪಮಾನದ ಪ್ರೋಬ್ ಹೊಂದಿದೆ. ಈ ಪ್ರೋಬ್ (ಸಾಧನವನ್ನು)10 ಪ್ರತ್ಯೇಕ ತಾಪಮಾನ ಸಂವೇದಕಗಳೊಂದಿಗೆ ಅಳವಡಿಸಲಾಗಿದೆ.
ಆಗಸ್ಟ್ 26 ರಂದು, ಪ್ರಗ್ಯಾನ್ ರೋವರ್ ದಕ್ಷಿಣ ಧ್ರುವದಲ್ಲಿ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ‘ಶಿವಶಕ್ತಿ ಪಾಯಿಂಟ್’ ಸುತ್ತಲೂ ತಿರುಗುತ್ತಿದೆ ಎಂದು ಇಸ್ರೋ ಹೇಳಿತ್ತು. ಚಂದ್ರಯಾನ 3 ರ ‘ವಿಕ್ರಮ್’ ಲ್ಯಾಂಡರ್‌ನ ಟಚ್‌ಡೌನ್ ಪಾಯಿಂಟ್ ಅನ್ನು ‘ಶಿವಶಕ್ತಿ’ ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ಇದನ್ನೂ ಓದಿ: ಚಂದ್ರಯಾನ ಯಶಸ್ವಿಯಾಗಿ ಲ್ಯಾಂಡಿಂಗ್ ಆದ ಆಗಸ್ಟ್ 23ನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದ ಕೇಂದ್ರ ಸಚಿವ ಸಂಪುಟ
ಇದು ಭಾರತ, ಇದು ನವೀನವಾಗಿ ಮತ್ತು ಅನನ್ಯವಾಗಿ ಯೋಚಿಸುತ್ತದೆ. ಇದು ಕತ್ತಲೆ ವಲಯಗಳಿಗೆ ಹೋಗಿ ಬೆಳಕನ್ನು ಹರಡುವ ಮೂಲಕ ಜಗತ್ತನ್ನು ಬೆಳಗಿಸುವ ಭಾರತವಾಗಿದೆ” ಎಂದು ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ಮೋದಿ ಹೇಳಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ