Chandrayaan-3 Mission: ಯಶಸ್ವಿಯಾಗಿ ಚಂದ್ರನ ಕಕ್ಷೆ ತಲುಪಿದ ಚಂದ್ರಯಾನ-3

|

Updated on: Aug 05, 2023 | 9:08 PM

ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 14ರಂದು ಚಂದ್ರಯಾನ-3 ನೌಕೆ ಉಡ್ಡಯನ ಮಾಡಲಾಗಿತ್ತು. ಇದೀಗ ನೌಕೆಯು ಯಶಸ್ವಿಯಾಗಿ ಚಂದ್ರನ ಕಕ್ಷೆ ತಲುಪಿದೆ ಎಂದು ಇಸ್ರೋ ತಿಳಿಸಿದೆ.

Chandrayaan-3 Mission: ಯಶಸ್ವಿಯಾಗಿ ಚಂದ್ರನ ಕಕ್ಷೆ ತಲುಪಿದ ಚಂದ್ರಯಾನ-3
ಚಂದ್ರಯಾನ-3
Follow us on

ನವದೆಹಲಿ, ಆಗಸ್ಟ್ 5: ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ISRO) ಮಹತ್ವಾಕಾಂಕ್ಷಿ ಚಂದ್ರಯಾನ-3 (Chandrayaan-3) ನೌಕೆ ಇಂದು (ಆಗಸ್ಟ್ 5) ಸಂಜೆ 7.15ಕ್ಕೆ ಯಶಸ್ವಿಯಾಗಿ ಚಂದ್ರನ ಕಕ್ಷೆ ತಲುಪಿದೆ. ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ನೌಕೆಯನ್ನು ಉಡ್ಡಯನ ಮಾಡಲಾಗಿತ್ತು.

ಈ ವಾರದ ಆರಂಭದಲ್ಲಿ ಭೂಮಿಯಿಂದ ನಿರ್ಗಮಿಸಿದ ನಂತರ, ಚಂದ್ರಯಾನ-3 ಚಂದ್ರನ ಪ್ರಭಾವದ ಗೋಳವನ್ನು ಪ್ರವೇಶಿಸಿತ್ತು. ನಂತರ ಸುರಕ್ಷಿತವಾಗಿ ಚಂದ್ರನ ಸುತ್ತ ಸುತ್ತುತ್ತಿದೆ ಎಂದು ಇಸ್ರೋ ಖಚಿತಪಡಿಸಿತ್ತು. ನಿರೀಕ್ಷಿಸಿದಂತೆ, ಚಂದ್ರಯಾನ-3 ಈಗ ದೀರ್ಘವೃತ್ತದ ಮಾರ್ಗವನ್ನು ಅನುಸರಿಸುತ್ತಿದೆ, ಭೂಮಿಗೆ ಅದರ ಹತ್ತಿರದ ಬಿಂದು (ಪೆರಿಜಿ) ಮತ್ತು ಅತ್ಯಂತ ದೂರದ ಬಿಂದು (ಅಪೋಜಿ) ನಡುವೆ ಚಲಿಸುತ್ತಿದೆ ಎಂದು ಇಸ್ರೋ ಈ ಹಿಂದೆ ತಿಳಿಸಿತ್ತು.

ಇದನ್ನೂ ಓದಿ: ಹೆಚ್ಚಿನ ಭೂ ವೀಕ್ಷಣೆಗಾಗಿ ಡಿಎಸ್-ಎಸ್ಎಆರ್ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಒಯ್ಯಲಿದೆ ಪಿಎಸ್ಎಲ್‌ವಿ-ಸಿ56 ಯೋಜನೆ

ಚಂದ್ರಯಾನ 3, ಚಂದ್ರಯಾನ 2 ರಂತೆ ಯಾವುದೇ ಆರ್ಬಿಟರ್ ಹೊಂದಿಲ್ಲ. ಒಂದು ಲ್ಯಾಂಡರ್ ಮತ್ತು ಒಂದು ರೋವರ್ ಅನ್ನು ಹೊಂದಿದೆ. ಇವೆರಡು ಚಂದ್ರನ ಮೇಲ್ಮೈಯಲ್ಲಿ ಒಂದು ಲೂನಾರ್ ದಿನ (ಚಂದ್ರನ ದಿನ) ಅಂದರೆ, ಭೂಮಿಯ ಲೆಕ್ಕಾಚಾರದಲ್ಲಿ 14 ದಿನಗಳು ಕಾರ್ಯಾಚರಿಸಲಿವೆ. ಒಂದು ಬಾರಿ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಬಳಿಕ, ರೋವರ್ ಅದರಿಂದ ಬಿಡುಗಡೆಯಾಗಿ ಚಂದ್ರನ ಮೇಲ್ಮೈಯನ್ನು ಅನ್ವೇಷಿಸಿ, ಪ್ರಯೋಗಗಳನ್ನು ನಡೆಸಿ, ಮಾಹಿತಿ ಕಲೆಹಾಕಲಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:54 pm, Sat, 5 August 23