Cheetah In India: ಕುನೊ ರಾಷ್ಟ್ರೀಯ ಉದ್ಯಾನಕ್ಕೆ 12 ಚೀತಾಗಳ ಪ್ರವೇಶ, ಇಲ್ಲಿದೆ ವಿಡಿಯೊ

|

Updated on: Feb 18, 2023 | 2:35 PM

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ 12 ಚೀತಾಗಳ ಪ್ರವೇಶ ಮಾಡಿದೆ. ಬೋನ್​​ಗಳಿಂದ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಬಿಡುಗಡೆ ಮಾಡಲಾಗಿದೆ. 12 ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಕೇಂದ್ರ ಸಚಿವ ಭೂಪೇಂದರ್ ಯಾದವ್ ಬಿಡುಗಡೆ ಮಾಡಿದ್ದಾರೆ.

ಮಧ್ಯಪ್ರದೇಶ: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ 12 ಚೀತಾಗಳ (Cheetah) ಪ್ರವೇಶ ಮಾಡಿದೆ. ಬೋನ್​​ಗಳಿಂದ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಬಿಡುಗಡೆ ಮಾಡಲಾಗಿದೆ. 12 ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಕೇಂದ್ರ ಸಚಿವ ಭೂಪೇಂದರ್ ಯಾದವ್ ಬಿಡುಗಡೆ ಮಾಡಿದ್ದಾರೆ. ಇವರ ಜೊತೆಗೆ ಕೇಂದ್ರ ಸಚಿವ ಯಾದವ್​ಗೆ ​ಸಿಎಂ ಶಿವರಾಜ್ ಸಿಂಗ್​ ಚೌಹಾಣ್ ಸಾಥ್​​ ನೀಡಿದ್ದಾರೆ.

ಗ್ವಾಲಿಯರ್ ಏರ್​ಬೇಸ್​ನಿಂದ ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಕರೆ ತರಲಾಗಿತ್ತು. ಬೆಳಗ್ಗೆ ದಕ್ಷಿಣ ಆಫ್ರಿಕಾದಿಂದ ಹೊರಟ 12 ಚೀತಾಗಳನ್ನು ಭಾರತಕ್ಕೆ ತಲುಪಿದ್ದು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. IAF ವಿಮಾನದಲ್ಲಿ ಗ್ವಾಲಿಯರ್ ಏರ್​ಬೇಸ್​ಗೆ 12 ಚೀತಾಗಳನ್ನು ತರಲಾಗಿದೆ.

Published On - 2:03 pm, Sat, 18 February 23