Liquor Policy Case: ವಿಚಾರಣೆಗೆ ಹಾಜರಾಗಿ, ಸಿಬಿಐನಿಂದ ಮನೀಶ್ ಸಿಸೋಡಿಯಾಗೆ ನೋಟಿಸ್
ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ವಿಚಾರಣೆಗೆ ಹಾಜರಾಗುವಂತೆ ಮನೀಶ್ ಸಿಸೋಡಿಯಾ ನೋಟಿಸ್ ನೀಡಿದೆ.
ದೆಹಲಿ: ಮದ್ಯ ನೀತಿ ಪ್ರಕರಣಕ್ಕೆ (Liquor Policy Case) ಸಂಬಂಧಿಸಿದಂತೆ ಸಿಬಿಐನಿಂದ ವಿಚಾರಣೆಗೆ ಹಾಜರಾಗುವಂತೆ ಮನೀಶ್ ಸಿಸೋಡಿಯಾ ನೋಟಿಸ್ ನೀಡಿದೆ. ಮನೀಷ್ ಸಿಸೋಡಿಯಾ ಅವರು ಶನಿವಾರ ಮದ್ಯದ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನನ್ನೂ ಕೇಂದ್ರೀಯ ತನಿಖಾ ದಳ (ಸಿಬಿಐ) ವಿಚಾರಣೆಗೆ ಕರೆದಿದ್ದಾರೆ ಎಂದು ಶನಿವಾರ ಹೇಳಿದ್ದಾರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಈ ಇಲಾಖೆಯನ್ನು ಏಜೆನ್ಸಿಯಂತೆ ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸಿಬಿಐ ನಾಳೆ ಮತ್ತೆ ನನ್ನನ್ನು ವಿಚಾರಣೆಗೆ ಕರೆದಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೂ ನನ್ನ ಮೇಲೆ ಸಿಬಿಐ, ಇಡಿ (ಜಾರಿ ನಿರ್ದೇಶನಾಲಯ) ದ ಎಲ್ಲ ರೀತಿಯ ಅಧಿಕಾರದ ಪ್ರಯೋಗಗಳನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ. ನನ್ನ ಮನೆ ಮೇಲೆ ದಾಳಿ ಮಾಡಿದ್ದಾರೆ, ನನ್ನ ಬ್ಯಾಂಕ್ ಲಾಕರ್ ಅನ್ನು ಶೋಧಿಸಿದ್ದಾರೆ. ಆದರೆ ಈವರೆಗೆ ನನ್ನ ವಿರುದ್ಧ ಯಾವುದೇ ಸಾಕ್ಷಿ ಅವರಿಗೆ ಸಿಕ್ಕಿಲ್ಲ ಎಂದು ದೆಹಲಿ ಉಪಮುಖ್ಯಮಂತ್ರಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Delhi Liquor Policy Case: ದೆಹಲಿ ಅಬಕಾರಿ ನೀತಿ ಹಗರಣ: ತೆಲಂಗಾಣ ಸಿಎಂ ಪುತ್ರಿ ಕವಿತಾರ ಮಾಜಿ ಆಡಿಟರ್ ಬಂಧನ
ನಾನು ದೆಹಲಿಯ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇನೆ. ಹೀಗಾಗಿ ಅದನ್ನು ನಿಲ್ಲುಸಲು ಈ ರೀತಿಯಲ್ಲಿ ಕ್ರಮಗಳನ್ನು ಮಾಡುತ್ತಿದ್ದಾರೆ. ನಾನು ಯಾವಾಗಲೂ ತನಿಖೆಗೆ ಸಹಕರಿಸಿದ್ದೇನೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದಿಂದ ಪ್ರತಿನಿಧಿಸುತ್ತಿರುವ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಕಳೆದ ವರ್ಷ ನಡೆಸಿದ ತನಿಖೆಯಲ್ಲಿ ಸಿಸೋಡಿಯಾ ವಿರುದ್ಧ ನಡೆಸಿದ ಕಾರ್ಯಚರಣೆಯನ್ನು ಸಿಬಿಐ ಮುಚ್ಚಿಹಾಕಿದೆ, ಈಗ ರದ್ದುಗೊಂಡಿರುವ ಮದ್ಯ ಮಾರಾಟ ನೀತಿಯ ರೋಲ್‌ಔಟ್‌ನಲ್ಲಿ ಭ್ರಷ್ಟಾಚಾರ ಹಗರಣವನ್ನು ಆರೋಪಿಸಿದೆ ಎಂದು ಹೇಳಿದ್ದಾರೆ.
Published On - 1:20 pm, Sat, 18 February 23