Chhattisgarh: ಫೋನ್​ನಲ್ಲಿ ಮಾತನಾಡುತ್ತಾ ಬಸ್​ ಚಾಲನೆ, ಸೇತುವೆಗೆ ಡಿಕ್ಕಿ, 26 ಪ್ರಯಾಣಿಕರಿಗೆ ಗಾಯ

ಛತ್ತೀಸ್‌ಗಢದ ಘರ್ಘೋಡಾ ಪ್ರದೇಶದ ಬಳಿ ವೇಗವಾಗಿ ಬಂದ ಬಸ್(Bus) ಸೇತುವೆಗೆ ಡಿಕ್ಕಿ ಹೊಡೆದು 26 ಜನರು ಗಾಯಗೊಂಡಿದ್ದಾರೆ.

Chhattisgarh: ಫೋನ್​ನಲ್ಲಿ ಮಾತನಾಡುತ್ತಾ ಬಸ್​ ಚಾಲನೆ, ಸೇತುವೆಗೆ ಡಿಕ್ಕಿ, 26 ಪ್ರಯಾಣಿಕರಿಗೆ ಗಾಯ
ಬಸ್ ಅಪಘಾತ
Image Credit source: India Today

Updated on: Jun 19, 2023 | 12:39 PM

ಛತ್ತೀಸ್‌ಗಢದ ಘರ್ಘೋಡಾ ಪ್ರದೇಶದ ಬಳಿ ವೇಗವಾಗಿ ಬಂದ ಬಸ್(Bus) ಸೇತುವೆಗೆ ಡಿಕ್ಕಿ ಹೊಡೆದು 26 ಜನರು ಗಾಯಗೊಂಡಿದ್ದಾರೆ. ರೈಲ್ವೆ ಸೇತುವೆಯ ಮೇಲೆ ಸಂಭವಿಸಿದ ಬಸ್ ಅಪಘಾತದಲ್ಲಿ ಸುಮಾರು 26 ಜನರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಚಾಲಕ ವಾಹನ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡುವುದರಲ್ಲಿ ನಿರತರಾಗಿದ್ದರಿಂದ ಅಪಘಾತ ಸಂಭವಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಏಪ್ರಿಲ್‌ನಲ್ಲಿ ಇದೇ ರೀತಿಯ ಅಪಘಾತದಲ್ಲಿ ಛತ್ತೀಸ್‌ಗಢದಲ್ಲಿ ಬಸ್ ಪಲ್ಟಿಯಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 40 ಜನರು ಗಾಯಗೊಂಡಿದ್ದರು. ಆ ಸಮಯದಲ್ಲಿ, ಗಾಯಾಳುಗಳನ್ನು ತಕ್ಷಣವೇ ಅಂಬಾಗರ್ ಚೌಕಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತು. ಬಸ್ ದೊಂಡಿ ಲೋಹರಾ ಪ್ರದೇಶದ ಗ್ರಾಮಕ್ಕೆ ತೆರಳುತ್ತಿತ್ತು.

ಮತ್ತೊಂದು ಘಟನೆ
ಮಸ್ಸೂರಿ-ಡೆಹ್ರಾಡೂನ್ ರಸ್ತೆಯಲ್ಲಿ ಬಸ್ ಕಂದಕಕ್ಕೆ ಬಿದ್ದ ಪರಿಣಾಮ ಬಸ್ ಚಾಲಕ ಸೇರಿದಂತೆ 22 ಜನರು ಗಾಯಗೊಂಡಿದ್ದರು. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಹಾಯದಿಂದ ಎಲ್ಲಾ ಗಾಯಾಳುಗಳನ್ನು ರಕ್ಷಿಸಲಾಗಿದೆ ಮತ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us