ದೆಹಲಿ:ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದ ಪೌರತ್ವ ತಿದ್ದುಪಡಿ ವಿಧೇಯಕ-2019ಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಅಂಕಿತ ದೊರೆತಿದೆ. 2019ರ ಡಿಸೆಂಬರ್ 12ರಿಂದಲೇ ಮಸೂದೆ ಜಾರಿಗೆ ಅಧಿಸೂಚನೆ ನೀಡಿದ್ದು, 2014ಕ್ಕೂ ಮುನ್ನ ಭಾರತದಲ್ಲಿರುವ ವಲಸಿಗರಿಗೆ ಪೌರತ್ವ ನೀಡಲಾಗುತ್ತೆ.
ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಅಂಗೀಕಾರವಾದ ಬೆನ್ನಲ್ಲೇ ಈಶಾನ್ಯ ಭಾರತದಲ್ಲಿ ಭಾರಿ ಪ್ರತಿಭಟನೆ ನಡೆದಿದ್ದವು. ನಿನ್ನೆ ರಾಜ್ಯಸಭೆಯಲ್ಲಿ 7 ತಾಸು ಚರ್ಚೆಯ ಬಳಿಕ ಪೌರತ್ವ ತಿದ್ದುಪಡಿ ಅಂಗೀಕಾರವಾಯಿತು. ಇದರ ಬೆನ್ನಲ್ಲೇ ಅಸ್ಸಾಂ ಮತ್ತಿತರ ಕಡೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇಂದು ಪೊಲೀಸ್ ಫೈರಿಂಗ್ ನಡೆಸಿ ಮೂವರು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಪೊಲೀಸ್, ಆರ್ಮಿ ಭದ್ರತೆ ಒದಗಿಸಲಾಗಿದೆ.
ಇಂದು ರಾಷ್ಟ್ರಪತಿ ಅವರಿಂದ ಅಂಕಿತ ಪಡೆದ ಮಸೂದೆ ಕಾಯ್ದೆಯಾಗಿ ಬದಲಾಗಿದ್ದು ಈ ಕಾಯ್ದೆಯ ಅನ್ವಯ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ನಿರಾಶ್ರಿತರಾಗಿ ಭಾರತಕ್ಕೆ ಆಗಮಿಸಿದ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ದೊರೆಯಲಿದೆ. ಹಾಗೂ ಹಿಂದು, ಸಿಖ್, ಬೌದ್ಧ, ಜೈನ, ಪಾರ್ಸಿ, ಕ್ರಿಶ್ಚಿಯನ್ನರಿಗೆ ಪೌರತ್ವ ಸಿಗಲಿದೆ.