ಕಾಂಗ್ರೆಸ್‌ನ ಪ್ರಣಾಳಿಕೆ “ಮಾವೋವಾದಿ” ದಾಖಲೆ, ಇದು ದೇವಾಲಯದ ಚಿನ್ನ, ಮಹಿಳೆಯರ ಮಂಗಲಸೂತ್ರದ ಮೇಲೆ ಕಣ್ಣಿಟ್ಟಿದೆ : ಪ್ರಧಾನಿ ಮೋದಿ

|

Updated on: May 18, 2024 | 10:23 AM

ಮಹಾರಾಷ್ಟ್ರದ ಮುಂಬೈನಲ್ಲಿ ಪ್ರಧಾನಿ ಮೋದಿ ಅವರು ಶುಕ್ರವಾರ ರ್ಯಾಲಿ ನಡೆಸಿದ್ದಾರೆ . ಈ ವೇಳೆ ಮೋದಿ ಕಾಂಗ್ರೆಸ್​​​ ವಿರುದ್ಧ ವಾಗ್ದಾಳಿ ನಡೆಸಿದ್ದು. ಕಾಂಗ್ರೆಸ್​​​ ಪ್ರಣಾಳಿಕೆಯಲ್ಲಿ ನಮ್ಮ ದೇವಾಲಯ ಹಾಗೂ ಮಹಿಳೆಯರ ಮಂಗಲಸೂತ್ರದ ಮೇಲೆ ಕಣ್ಣಿಟ್ಟಿದೆ ಎಂದಿದ್ದಾರೆ. ಮುಂಬೈ 2014ರಲ್ಲಿ ಹಲವು ಭಯೋತ್ಪಾದಕ ದಾಳಿಗೆ ನಡುಗಿ ಹೋಗಿದೆ. ಆದರೆ ಇದೀಗ ಸುರಕ್ಷಿತವಾಗಿದೆ ಎಂದಿದ್ದಾರೆ.

ಕಾಂಗ್ರೆಸ್‌ನ ಪ್ರಣಾಳಿಕೆ ಮಾವೋವಾದಿ ದಾಖಲೆ, ಇದು ದೇವಾಲಯದ ಚಿನ್ನ, ಮಹಿಳೆಯರ ಮಂಗಲಸೂತ್ರದ ಮೇಲೆ ಕಣ್ಣಿಟ್ಟಿದೆ : ಪ್ರಧಾನಿ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಹಾರಾಷ್ಟ್ರದಲ್ಲಿ ಲೋಕಸಭೆ ಚುನಾವಣೆ ರ್ಯಾಲಿಯನ್ನು ಉದ್ದೇಶಿ ಶುಕ್ರವಾರ (ಮೇ.17) ಮಾತನಾಡಿದರು. ಈ ಸಮಯದಲ್ಲಿ ಕಾಂಗ್ರೆಸ್​​​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆ “ಮಾವೋವಾದಿ” ದಾಖಲೆ ಎಂದು ಕರೆದಿದ್ದಾರೆ. ಇದು ದೇಶದ ಆರ್ಥಿಕ ಬೆಳವಣಿಗೆಗೆ ಬ್ರೇಕ್ ಹಾಕುತ್ತದೆ. ಒಂದು ವೇಳೆ ಇದನ್ನು ಜಾರಿಗೆ ತಂದರೆ ದೇಶವನ್ನು ದಿವಾಳಿತನಕ್ಕೆ ಕರೆದೊಯ್ಯುತ್ತದೆ ಎಂದು ಎಚ್ಚರಿಸಿದ್ದಾರೆ. ಮಹಾತ್ಮ ಗಾಂಧೀಜಿಯವರ ಆಶಯದಂತೆ ಸ್ವಾತಂತ್ರ್ಯಾ ನಂತರ ಕಾಂಗ್ರೆಸ್​​​ನ್ನು ವಿಸರ್ಜಿಸಿದ್ದರೆ ಭಾರತ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಇಂದು ಇರುವುದಕ್ಕಿಂತ ಐದು ದಶಕಗಳಷ್ಟು ಮುಂದಿರುತ್ತಿತ್ತು ಎಂದು ಹೇಳಿದ್ದಾರೆ.

ಕಾಂಗ್ರೆಸ್ ತನ್ನ ಉಳಿವಿಗಾಗಿ ಹೋರಾಟ ನಡೆಸುತ್ತಿದೆ. ತನ್ನನ್ನು ಉಳಿಸಿಕೊಳ್ಳಲು ಕಾಂಗ್ರೆಸ್​​​ ಯಾವ ಹಂತಕ್ಕೂ ಬೇಕಾದರೂ ಹೋಗಬಹುದು. ಈ ಮಾವೋವಾದಿ ಪ್ರಣಾಳಿಕೆಯು ದೇವಾಲಯ ಮತ್ತು ಮಹಿಳೆಯರ ‘ಮಂಗಲಸೂತ್ರ’ ಚಿನ್ನದ ಮೇಲೆ ಕಣ್ಣಿಟ್ಟಿದೆ ಎಂದು ಹೇಳಿದರು. ಈ ಹಿಂದೆ ಪ್ರಧಾನಿ ಮೋದಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್ ಮುದ್ರೆ ಇದೆ ಎಂದಿದ್ದರು.

1980 ರ ದಶಕದಲ್ಲಿ ರದ್ದುಪಡಿಸಲಾದ ಪಿತ್ರಾರ್ಜಿತ ತೆರಿಗೆಯನ್ನು (ಮೃತ ವ್ಯಕ್ತಿಯಿಂದ ಪಡೆದ ಆಸ್ತಿಗಳ ಮೇಲಿನ ತೆರಿಗೆ) ಮರಳಿ ತರಲು ಕಾಂಗ್ರೆಸ್​​ ತಯಾರಿ ನಡೆಸುತ್ತಿದೆ. ಅವರ ಪ್ರಣಾಳಿಕೆಯಲ್ಲಿ ಇದು 50 ಪ್ರತಿಶತದಷ್ಟು ಪಿತ್ರಾರ್ಜಿತ ತೆರಿಗೆಯನ್ನು ಸಹ ಯೋಜಿಸಿದೆ. ಕಾಂಗ್ರೆಸ್​​​ ನಿಮ್ಮ ಆಸ್ತಿಯನ್ನು ಮುಸ್ಲಿಂ ಸಮುದಾಯಕ್ಕೆ ಮಾರಾಟ ಮಾಡುತ್ತದೆ ಎಂದು ಬಿಜೆಪಿಯ ಸ್ಟಾರ್ ಪ್ರಚಾರಕರು ಆರೋಪಿಸಿದ್ದಾರೆ.

ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸುವ 370 ನೇ ವಿಧಿಯನ್ನು ತೆಗೆದುಹಾಕುವುದು ಒಂದು ಕಾಲದಲ್ಲಿ ದೇಶದಲ್ಲಿ ಅಸಾಧ್ಯವಾದ ಕೆಲಸಗಳೆಂದು ಹೇಳಲಾಗಿತ್ತು. ಆದರೆ ಇಂದು ಬಿಜೆಪಿ ಸರ್ಕಾರ ಮಾಡಿ. ಇದಕ್ಕೆ ಪ್ರಮುಖ ಕಾರಣ ಹಾಗೂ ಇಷ್ಟೇಲ್ಲ ಮಾಡಲು ಸಾಧ್ಯವಾದ್ದದು ನಿಮ್ಮ ಒಂದು ಮತದಿಂದ ಎಂದು ಬಿಜೆಪಿ ನಾಯಕರು ಹೇಳಿದರು.

ಇನ್ನು ಪ್ರಧಾನಿ ಮೋದಿ ಅವರು ರ್ಯಾಲಿಯಲ್ಲಿ ಮುಂಬೈ ದಾಳಿ ಬಗ್ಗೆಯೂ ಮಾತನಾಡಿದ್ದಾರೆ. ಈ ಹಿಂದೆ ಮಹಾನಗರವನ್ನು ಬೆಚ್ಚಿಬೀಳಿಸಿದ ಭಯೋತ್ಪಾದಕ ದಾಳಿಗಳು ಮತ್ತು ಸರಣಿ ಬಾಂಬ್ ಸ್ಫೋಟ ನಡೆದಿತ್ತು. ಆಗಾ ಕಾಂಗ್ರೆಸ್​​ ಅಧಿಕಾರದಲ್ಲಿ ಇತ್ತು. ಆದರೆ 2014ರ ನಂತರ ಈ ಪರಿಸ್ಥಿತಿ ಬದಲಾವಣೆ ಆಗಿದೆ. ಈ ವಿಚಾರವನ್ನು ಮುಂಬೈ ಜನತೆ ಮೇ 20ರಂದು ಮತದಾನ ಮಾಡಲು ಹೋಗುವಾಗ ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಮುಂಬೈ ಜನತೆ ಸುರಕ್ಷಿತವಾಗಿದ್ದಾರೆ ಎಂದರು. ಇದರ ಜತೆಗೆ ಉದ್ಧವ್ ಠಾಕ್ರೆ ನೇತೃತ್ವದ ಪಕ್ಷವನ್ನು ಕೂಡ ಟೀಕಿಸಿದರು. “ನಕಲಿ” ಶಿವಸೇನೆಯು ಜನರ ಆದೇಶಕ್ಕೆ ದ್ರೋಹ ಬಗೆದಿದೆ ಮುಂಬೈ ಮತ್ತು ಮಹಾರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿದೆ ಎಂದರು. ರಾಮ ಮಂದಿರವನ್ನು ನಿಂದಿಸುವವರ ಜೊತೆಗೆ ಹಾಗೂ ಸಾವರ್ಕರ್ ಜೊತೆ ನಿಲ್ಲುವ ಶಿವಸೇನೆ ಬಾಳಾಸಾಹೇಬ್ ಠಾಕ್ರೆಗೆ ದ್ರೋಹ ಮಾಡಿದೆ ಎಂದು ಹೇಳಿದರು.

ಇದನ್ನು ಓದಿ: ಎಲ್ಲಿ ಬುಲ್ಡೋಜರ್ ಚಲಾಯಿಸಬೇಕು ಎಂದು ಯೋಗಿ ಆದಿತ್ಯನಾಥ್ ಅವರಿಂದ ಕಲಿಯಿರಿ: ಮೋದಿ

ಇನ್ನು ಮುಂಬೈ ಭಾರತದ ಮೊದಲ ಬುಲೆಟ್ ರೈಲು ಪಡೆಯುವ ದಿನಗಳು ದೂರವಿಲ್ಲ, ಮುಂಬೈ ಹಣಕಾಸು ಬಂಡವಾಳವು ಸ್ಟಾರ್ಟ್‌ಅಪ್‌ಗಳ ಕೇಂದ್ರವಾಗಿ ಹೊರಹೊಮ್ಮಿದೆ. ಇಂದು, ಮುಂಬೈನಲ್ಲಿ 8,000 ಸ್ಟಾರ್ಟ್‌ಅಪ್‌ಗಳಿವೆ. ಭಾರತವು ಎರಡನೇ ಅತಿದೊಡ್ಡ ಮೊಬೈಲ್ ಉತ್ಪಾದನಾ ಕೇಂದ್ರವಾಗಿದೆ. ಹಾಗೂ ಮುಂಬೈ ದೇಶದ ಆರ್ಥಿಕ ಶಕ್ತಿ ಕೇಂದ್ರವಾಗಿದೆ ಮತ್ತು ಮಹಾನಗರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಷೇರು ಮಾರುಕಟ್ಟೆ ಈಗ ವಿಶ್ವದ ನಾಲ್ಕನೇ ದೊಡ್ಡ ಷೇರು ಮಾರುಕಟ್ಟೆ ಆಗಿದೆ ಎಂದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ