ಭಾರತದಲ್ಲಿ ಕೊವಿಡ್ 19 ಲಸಿಕೆಯನ್ನು ವ್ಯವಸ್ಥಿತವಾಗಿ ನೀಡಲು, ನೋಂದಣಿಗಾಗಿ ಕೊವಿನ್ ಪೋರ್ಟಲ್ (CoWIN Portal) ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ. ಲಸಿಕೆ ಪಡೆಯುವವರು ಮೊದಲು ಈ ಪೋರ್ಟಲ್ಗೆ ಹೋಗಿ ನೋಂದಣಿ ಮಾಡಿಕೊಂಡರೆ, ಅವರಿಗೆ ಮೆಸೇಜ್ ಬರುತ್ತದೆ. ಆ ದಿನ ಹೋಗಿ ಲಸಿಕೆ ಪಡೆದರಾಯಿತು. ಇದರಿಂದ ಲಸಿಕೆ ಪಡೆಯುವ ಪ್ರಕ್ರಿಯೆ ತೀರ ಸರಳವಾಗುತ್ತಿದೆ. ಈಗಂತೂ ಕೊವಿನ್ ಪೋರ್ಟಲ್ನ್ನು ಹಿಂದಿ ಸೇರಿ ಪ್ರಾದೇಶಿಕ ಭಾಷೆಗಳಲ್ಲೂ ಅಭಿವೃದ್ಧಿ ಪಡಿಸಿದ್ದು, ಜನರಿಗೆ ಇನ್ನಷ್ಟು ಅನುಕೂಲವಾಗಿದೆ. ಇಂಥ ಕೊವಿನ್ ಪೋರ್ಟಲ್ ಇದೀಗ ವಿದೇಶಿಯರ ಆಕರ್ಷಣೆಯಾಗಿದೆ.
ಭಾರತದಲ್ಲಿ ಕೊವಿನ್ ಪೋರ್ಟಲ್ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಬೆನ್ನಲ್ಲೇ ಮಧ್ಯ ಏಷ್ಯಾ, ಲ್ಯಾಟಿನ್ ಆಮೆರಿಕಾ, ಆಫ್ರಿಕಾ ಸೇರಿದಂತೆ 50 ದೇಶಗಳು ಈ ಪೋರ್ಟಲ್ ವ್ಯವಸ್ಥೆ ಅಳವಡಿಕೆ ಆಸಕ್ತಿ ವಹಿಸಿವೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಸಿಇಒ, ಡಾ. ಆರ್.ಎಸ್.ಶರ್ಮಾ ತಿಳಿಸಿದ್ದಾರೆ. ಇನ್ನು ಆಸಕ್ತಿ ವ್ಯಕ್ತಪಡಿಸಿದ ದೇಶಗಳಿಗೆ ಕೋವಿನ್ ಪೋರ್ಟಲ್ ತಂತ್ರಜ್ಞಾನ ನೀಡಲು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾಗಿಯೂ ಹೇಳಿದ್ದಾರೆ.
ಭಾರತದಲ್ಲಿ ಕೊವಿನ್ ಆ್ಯಪ್ನಿಂದ ತುಂಬ ಅನುಕೂಲವಾಗುತ್ತಿದೆ. ಈ ಹಿಂದೆ ಆಧಾರ್, ಯುಪಿಐ ಅಭಿವೃದ್ಧಿ ಪಡಿಸಿದ ಅನುಭವದಲ್ಲೇ ಈ ಪೋರ್ಟಲ್ ಕೂಡ ಹೊರತರಲಾಗಿತ್ತು. ಕೇವಲ 5 ತಿಂಗಳಲ್ಲಿ ಈ ಪೋರ್ಟಲ್ನಲ್ಲಿ 30 ಕೋಟಿ ಬಳಕೆದಾರರು ನೋಂದಣಿ ಮಾಡಿಕೊಂಡಿದ್ದಾರೆ. ಅವರೆಲ್ಲರ ವಿವರವೂ ಈ ಪೋರ್ಟಲ್ನಲ್ಲಿ ಲಭ್ಯವಿದೆ ಎಂದು ಆರ್.ಎಸ್.ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ: ಐಎಎಫ್ ನೆಲೆಯಲ್ಲಿ ಸ್ಫೋಟ ಸಂಭವಿಸಿದ ನಂತರ ಜಮ್ಮುವಿನ ಕಲುಚಕ್ ಸೇನಾ ಶಿಬಿರದ ಮೇಲೆ ಮತ್ತೆರಡು ಡ್ರೋನ್ ಪತ್ತೆ
(CoWIN Portal attract foreign Countries said National Health Authoritys CEO S R Sharma)