ಲಕ್ನೋ: ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿರುವ ಬಲಾಢ್ಯ ಭಾರತದ ಸೇನೆ ವಿಶ್ವದಲ್ಲೇ ಪವರ್ಫುಲ್. ಅಮೆರಿಕ, ರಷ್ಯಾ ಹಾಗೂ ಚೀನಾದಂತಹ ರಾಷ್ಟ್ರಗಳ ಎದುರು ಕೂಡ ಪೈಪೋಟಿ ನೀಡುವಷ್ಟು ಭಾರತದ ಸೇನೆ ಬಲಶಾಲಿಯಾಗಿದೆ. ಇದನ್ನ ಇಡೀ ವಿಶ್ವಕ್ಕೆ ಪರಿಚಯಿಸುವ ಕಾರ್ಯ ಉತ್ತರ ಪ್ರದೇಶದಲ್ಲಿ ಆರಂಭವಾಗಿದ್ದು, ಡಿಫೆನ್ಸ್ ಎಕ್ಸ್ಪೋದಲ್ಲಿ ಭಾರತದ ಸೇನಾ ಶಕ್ತಿ ಅನಾವರಣಗೊಂಡಿದೆ.
ಆಕಾಶದಲ್ಲಿ ಘರ್ಜಿಸ್ತಿರುವ ಭಾರತೀಯ ಸೇನಾ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳು. ಹಾಗೇ ಮತ್ತೊಂದು ಕಡೆ ಭಾರತೀಯ ಸೇನಾ ಪಡೆಯ ವೀರಯೋಧರಿಂದ ಬಲ ಪ್ರದರ್ಶನ. ಅಂದಹಾಗೆ ನಿನ್ನೆಯಿಂದ ಉತ್ತರ ಪ್ರದೇಶದ ಲಖನೌನಲ್ಲಿ ಆರಂಭವಾದ ‘ಡಿಫೆನ್ಸ್ ಎಕ್ಸ್ಪೋ-2020’ ಝಲಕ್ ಇದು.
ರೈಫಲ್ ಹಿಡಿದು ‘ಡೆಮೋ’ ನೋಡಿದ ಪ್ರಧಾನಿ..!
ಭಾರತದಲ್ಲೇ ಶಸ್ತ್ರಾಸ್ತ್ರ ತಯಾರಿಕೆಗೆ ಒತ್ತು..!
ಒಟ್ನಲ್ಲಿ ‘ಡಿಫೆನ್ಸ್ ಎಕ್ಸ್ಪೋ-ಟ್ವೆಂಟಿ ಟ್ವೆಂಟಿ’ ಭಾರತದ ಮಿತ್ರ ರಾಷ್ಟ್ರಗಳ ಕಣ್ಣು ಅರಳುವಂತೆ ಮಾಡಿದ್ರೆ, ಶತ್ರು ರಾಷ್ಟ್ರಗಳಿಗೆ ನಡುಕ ಉಂಟುಮಾಡಿದೆ. ಜಾಗತಿಕವಾಗಿ ಮಿಲಿಟರಿ ಹಾಗೂ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚುಹಣ ಹೂಡುತ್ತಿರುವ ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದ್ದು, ಭವಿಷ್ಯದಲ್ಲಿ ಈ ವೆಚ್ಚ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
Published On - 9:46 am, Thu, 6 February 20