ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಎಎಪಿ ಹಾಗೂ ಬಿಜೆಪಿ ಮಹಿಳಾ ಕೌನ್ಸಿಲರ್ಗಳ ನಡುವೆ ಘರ್ಷಣೆ ಶುರುವಾಗಿದೆ. ಬುಧವಾರ ಐದನೇ ಬಾರಿಗೆ ಸದನವನ್ನು ಮುಂದೂಡಲಾಗಿತ್ತು. ದೆಹಲಿ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶೆಲ್ಲಿ ಒಬೆರಾಯ್ ಭರ್ಜರಿ ಗೆಲುವು ಸಾಧಿಸಿದ್ದರು. ಎಎಪಿಯು 150 ಮತ ಗಳಿಸುವ ಮೂಲಕ ಬಿಜೆಪಿಯ 15 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸಿತ್ತು.
ಚುನಾವಣೆ ವೇಳೆ ಕೌನ್ಸಿಲರ್ಗಳು ಮೊಬೈಲ್ ಮೂಲಕ ಮತ ಯಂತ್ರಗಳ ಚಿತ್ರವನ್ನು ತೆಗೆಯುತ್ತಿದ್ದರು, ಇದು ಮತದಾನ ಉಲ್ಲಂಘನೆಯಾದಂತಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಆಗ ಗದ್ದಲ ಶುರುವಾಗಿತ್ತು, ಹಾಗಾಗಿ ಈ ಮತಗಳನ್ನು ತಿರಸ್ಕರಿಸಿ ಹೊಸದಾಗಿ ಚುನಾವಣೆ ನಡೆಸಿ ಎಂದು ಒತ್ತಾಯಿಸಿದೆ.
ಮತ್ತಷ್ಟು ಓದಿ: Delhi Mayor Polls: ಫೆ.22ಕ್ಕೆ ಮೇಯರ್ ಚುನಾವಣೆ ಘೋಷಣೆ
250 ವಾರ್ಡ್ಗಳಿಗೆ ನಡೆದಿದ್ದ ದೆಹಲಿ ಚುನಾವಣೆಯಲ್ಲಿ ಎಎಪಿ 134, ಬಿಜೆಪಿ 104, ಕಾಂಗ್ರೆಸ್ 9 ಇತರರು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಗದ್ದಲ, ಗಲಾಟೆಯ ಹಿನ್ನೆಲೆಯಲ್ಲಿ 4 ಬಾರಿ ದೆಹಲಿ ಮೇಯರ್ ಚುನಾವಣೆಯನ್ನು ಮುಂದೂಡಲಾಗಿತ್ತು. ಪಾಲಿಕೆ ಚುನಾವಣೆ ನಡೆದು 2 ತಿಂಗಳ ಬಳಿಕ ಮೇಯರ್ ಆಯ್ಕೆ ಮಾಡಲಾಗಿದೆ.
#WATCH | Delhi: Ruckus and sloganeering continue at MCD house as AAP-BJP councillors clash with each other after the house proceedings resumed for the fourth time. The MCD house was again adjourned for the fifth time since last night. pic.twitter.com/O6MO2cOgs1
— ANI (@ANI) February 23, 2023
150 ಮತಗಳನ್ನು ಪಡೆಯುವ ಮೂಲಕ ಆಮ್ ಆದ್ಮಿ ಪಕ್ಷಕ್ಕೆ ಮೇಯರ್ ಪಟ್ಟ ಸಿಕ್ಕಿದೆ. ದೆಹಲಿ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ನಾಮನಿರ್ದೇಶನ ಸದಸ್ಯರಿಗೂ ಮತದಾನದ ಹಕ್ಕು ನೀಡಿದ್ದರು. ಇದೇ ವಿಚಾರಕ್ಕೆ ಪಾಲಿಕೆ ಸಭಾಂಗಣದಲ್ಲಿ ಗದ್ದಲ ನಡೆದಿತ್ತು.
Published On - 10:11 am, Thu, 23 February 23