ದೆಹಲಿ: ದೆಹಲಿಯಲ್ಲಿ ಪ್ರವಾಹ (Flood) ಬರುವ ಸಾಧ್ಯತೆ ಇಲ್ಲ. ಅಗತ್ಯವಿದ್ದರೆ, ನಾವು ತಗ್ಗು ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತೇವೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಹೇಳಿದ್ದಾರೆ. ಯಮುನಾ ನದಿಯ (Yamuna River) ನೀರಿನ ಮಟ್ಟವು ನಾಳೆ ಬೆಳಿಗ್ಗೆ ಅಪಾಯದ ಮಟ್ಟವನ್ನು ದಾಟಲಿದೆ ಎಂದು ದೆಹಲಿ ಲೋಕೋಪಯೋಗಿ ಇಲಾಖೆ ಸಚಿವ ಅತಿಶಿ ಹೇಳಿದ್ದಾರೆ. ಯಮುನಾದಲ್ಲಿ ನೀರಿನ ಮಟ್ಟ ಈಗಾಗಲೇ ಅಪಾಯದ ಗಡಿ ದಾಟಿದೆ. ಇಂದು (ಸೋಮವಾರ) ಮಧ್ಯಾಹ್ನ 1 ಗಂಟೆಗೆ 204.63 ಮೀಟರ್ ತಲುಪಿದೆ. ಎಚ್ಚರಿಕೆಯ ಮಟ್ಟ 204.50 ಆಗಿದೆ. ಪ್ರವಾಹದಂತಹ ಪರಿಸ್ಥಿತಿ ಎದುರಾದರೂ ರಾಜಧಾನಿ ನಗರವನ್ನು ಎಲ್ಲದಕ್ಕೂ ಸಿದ್ಧ ಮಾಡಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ.
ಭಾರೀ ಮಳೆಯು ಜನರಿಗೆ ಸಮಸ್ಯೆಗಳನ್ನು ಉಂಟುಮಾಡಿತು. ದೆಹಲಿಯ ವ್ಯವಸ್ಥೆಯು ಅದನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಪ್ರತಿ ವರ್ಷ ಮಳೆಯ ನಂತರ, ಕೆಲವು ದುರ್ಬಲ ಪ್ರದೇಶಗಳು ಜಲಾವೃತವಾಗುತ್ತವೆ ಮತ್ತು ನೀರನ್ನು ಒಂದೆರಡು ಗಂಟೆಗಳಲ್ಲಿ ಹೊರಹಾಕಲಾಗುತ್ತದೆ. ಆದರೆ 153 ಮಿಮೀ ಮಳೆಯಾಗಿದ್ದು ಸುಮಾರು 40 ವರ್ಷಗಳ ನಂತರ ಈ ರೀತಿ ಮಳೆ ಬಂದಿದೆ ಎಂದು ಅವರು ಹೇಳಿದರು.
दिल्ली में भारी बारिश के हालात और यमुना नदी के बढ़े जलस्तर को लेकर महत्वपूर्ण प्रेस कॉन्फ़्रेंस। LIVE https://t.co/hQKl389kHf
— Arvind Kejriwal (@ArvindKejriwal) July 10, 2023
ಯಮುನಾ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಜಲ ಆಯೋಗದೊಂದಿಗೆ ಸಂಪರ್ಕದಲ್ಲಿರುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ಇಲ್ಲಿ ಪ್ರವಾಹದಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಇದು ಪರಸ್ಪರ ಬೆರಳು ತೋರಿಸುವ ಸಮಯವಲ್ಲ. ಎಲ್ಲಾ ಪೀಡಿತ ರಾಜ್ಯಗಳ ಸರ್ಕಾರಗಳು ಸಾರ್ವಜನಿಕರಿಗೆ ಪರಿಹಾರ ಒದಗಿಸಲು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದಿದ್ದಾರೆ ಕೇಜ್ರಿವಾಲ್.
ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಪ್ರದೇಶಗಳಲ್ಲಿ ನೀರು ಹರಿಯುತ್ತಿರುವುದು ಇದೇ ಮೊದಲು. ಕೆಲವು ರಸ್ತೆಗಳಲ್ಲಿ ಹೊಂಡಗಳಾಗಿವೆ, ಕಾರಣವನ್ನು ತಿಳಿಯಲ ನಾವು ಅಧಿಕಾರಿಗಳನ್ನು ಕೇಳಿದ್ದೇವೆ ಎಂದು ಅವರು ಹೇಳಿದರು. ಅಹಿತಕರ ಘಟನೆಗಳನ್ನು ತಪ್ಪಿಸಲು ರಸ್ತೆಗಳಲ್ಲಿನ ಗುಂಡಿಗಳನ್ನು ಕಲ್ಲುಗಳಿಂದ ತುಂಬಿಸಲಾಗುವುದು ಎಂದು ಹೇಳಿದ ಮುಖ್ಯಮಂತ್ರಿ, ಜಲಾವೃತ ಸಮಸ್ಯೆಗಳನ್ನು ಪರಿಹರಿಸಲು ಎನ್‌ಡಿಎಂಸಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಹತ್ನಿಕುಂಡ್ ಬ್ಯಾರೇಜ್‌ನಿಂದ ಯಮುನಾ ನದಿಗೆ ಹರ್ಯಾಣ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಿದ್ದರಿಂದ ದೆಹಲಿ ಸರ್ಕಾರ ಭಾನುವಾರ ಪ್ರವಾಹದ ಎಚ್ಚರಿಕೆ ನೀಡಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಬ್ಯಾರೇಜ್‌ನಿಂದ 1,90,837 ಕ್ಯೂಸೆಕ್‌ಗಳನ್ನು ಬಿಡಲಾಗಿದೆ.
1971 ರಲ್ಲಿ ಹತ್ನಿಕುಂಡ್‌ನಿಂದ ನೀರು ಬಿಡುಗಡೆಯಾದಾಗ ದೆಹಲಿಯು ಕೊನೆಯ ಬಾರಿಗೆ ಪ್ರವಾಹವನ್ನು ಕಂಡಿದೆ. ಆದರೆ ಈ ಬಾರಿ ಪ್ರವಾಹ ಉಂಟಾಗದಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಜ್ರಿವಾಲ್ ಹೇಳಿದರು.
ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರವನ್ನು ಹೆಚ್ಚಿಸಲು ಸುಪ್ರೀಂಕೋರ್ಟ್ನ್ನು ವೇದಿಕೆಯಾಗಿ ಬಳಸಬೇಡಿ: ಸಿಜೆಐ
2013ರಲ್ಲಿ ಹರ್ಯಾಣದಿಂದ ಎಂಟು ಲಕ್ಷ ಕ್ಯೂಸೆಕ್ ನೀರು ಬಿಡಲಾಗಿತ್ತು. ನೀರು ಹೆಚ್ಚಿದೆ, ಆದರೆ ಯಾವುದೇ ಪ್ರವಾಹ ಸಾಧ್ಯತೆ ಇಲ್ಲ. ಯಮುನಾ ನೀರಿನ ಮಟ್ಟ 206 ಮೀಟರ್ ದಾಟಿದರೆ, ನಾವು ಯಮುನಾ ಸುತ್ತಮುತ್ತಲಿನ ಜನರನ್ನು ಸ್ಥಳಾಂತರಿಸುತ್ತೇವೆ. 41,000 ಜನರನ್ನು ಈಗಾಗಲೇ ಗುರುತಿಸಲಾಗಿದ್ದು ಅವರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗುವುದು ಎಂದು ದೆಹಲಿ ಸಿಎಂ ಹೇಳಿದ್ದಾರೆ.
ಇತರ ಪೂರ್ವಸಿದ್ಧತಾ ಕ್ರಮಗಳ ಬಗ್ಗೆ ಮಾತನಾಡಿದ ಕೇಜ್ರಿವಾಲ್, ನೀರನ್ನು ಹರಿಸಲು 680 PWD ಪಂಪ್‌ಗಳನ್ನು ಬಳಸಲಾಗುತ್ತದೆ. 100 ಹೆಚ್ಚುವರಿ ಮೊಬೈಲ್ ಪಂಪ್‌ಗಳು ಸಹ ಬಳಕೆಯಲ್ಲಿವೆ. ಅಪಘಾತ ತಪ್ಪಿಸಲು ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:35 pm, Mon, 10 July 23