Video: ಪ್ರಧಾನಿ ಮೋದಿ ಕಾರ್ಯಕ್ರದ ಅಲಂಕಾರಕ್ಕೆಂದು ತಂದಿದ್ದ ಹೂವಿನ ಕುಂಡಗಳನ್ನು ಕದ್ದೊಯ್ದ ಜನ
ಪ್ರಧಾನಿ ನರೇಂದ್ರ ಮೋದಿ ಲಕ್ನೋಗೆ ಭೇಟಿ ನೀಡಿದ್ದರು. ಆದರೆ ಅವರ ಕಾರ್ಯಕ್ರಮದ ಬಳಿಕ ವೈರಲ್ ಆದ ವಿಡಿಯೋ ತೀವ್ರ ಮುಜುಗರವನ್ನುಂಟು ಮಾಡಿದೆ. ಪ್ರಧಾನಿಯವರ ಕಾರ್ಯಕ್ರಮಕ್ಕೂ ಮುನ್ನ ಇಡೀ ನಗರವನ್ನು ಹಸಿರು ಗಿಡಗಳು, ಹೂವಿನ ಕುಂಡಗಳಿಂದ ಅಲಂಕರಿಸಲಾಗಿತ್ತು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಜನರು ಹೂವಿನ ಪಾಟ್ಗಳನ್ನು ಕದ್ದೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಲಕ್ನೋ, ಡಿಸೆಂಬರ್ 26: ಪ್ರಧಾನಿ ನರೇಂದ್ರ ಮೋದಿ ಲಕ್ನೋಗೆ ಭೇಟಿ ನೀಡಿದ್ದರು. ಆದರೆ ಅವರ ಕಾರ್ಯಕ್ರಮದ ಬಳಿಕ ವೈರಲ್ ಆದ ವಿಡಿಯೋ ತೀವ್ರ ಮುಜುಗರವನ್ನುಂಟು ಮಾಡಿದೆ. ಪ್ರಧಾನಿಯವರ ಕಾರ್ಯಕ್ರಮಕ್ಕೂ ಮುನ್ನ ಇಡೀ ನಗರವನ್ನು ಹಸಿರು ಗಿಡಗಳು, ಹೂವಿನ ಕುಂಡಗಳಿಂದ ಅಲಂಕರಿಸಲಾಗಿತ್ತು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಜನರು ಹೂವಿನ ಪಾಟ್ಗಳನ್ನು ಕದ್ದೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಹಸಿರನ್ನು ಹೆಚ್ಚಿಸಲು ಮತ್ತು ಲಕ್ನೋದ ಸ್ವಚ್ಛ, ದೃಶ್ಯ ಆಕರ್ಷಕ ಚಿತ್ರಣವನ್ನು ಪ್ರಸ್ತುತಪಡಿಸಲು ನೂರಾರು ಅಲಂಕಾರಿಕ ಹೂವಿನ ಕುಂಡಗಳನ್ನು ಇರಿಸಲಾಗಿತ್ತು. ಧಾನಿ ನಿರ್ಗಮಿಸಿದ ಕೂಡಲೇ ಮತ್ತು ಭದ್ರತಾ ವ್ಯವಸ್ಥೆಗಳನ್ನು ಸಡಿಲಿಸಿದ ನಂತರ, ಹಲವಾರು ವ್ಯಕ್ತಿಗಳು ಹೂವಿನ ಕುಂಡಗಳನ್ನು ವೈಯಕ್ತಿಕ ಆಸ್ತಿಯಂತೆ ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಯಾವುದೇ ಭಯ ಅಥವಾ ಹಿಂಜರಿಕೆಯಿಲ್ಲದೆ ಜನರು ಹಗಲಿನಲ್ಲೇ ಜನರು ಇವುಗಳನ್ನು ಹೊತ್ತೊಯ್ದಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ