ಹೈದರಾಬಾದ್​ನಲ್ಲಿ ಗೋಡೆ ಕುಸಿತ, ಮದುವೆಗೆ ಬಂದವರು ಮಸಣ ಸೇರಿದ್ರು

|

Updated on: Nov 11, 2019 | 1:02 PM

ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದ್​ನಲ್ಲಿ ಭೀಕರ ದುರ್ಘಟನೆಯೊಂದು ನಡೆದಿದೆ. ಗೋಡೆ ಕುಸಿದು ನಾಲ್ವರು ಮುಗ್ಧ ಜೀವಗಳು ಬಲಿಯಾಗಿವೆ. ಯಾರದೋ ತಪ್ಪಿಗೆ ಇನ್ಯಾರೋ ಬಲಿಯಾಗಿದ್ದಾರೆ. ಮದುವೆಗೆ ಅಂತಾ ಬಂದು ಮಸಣ ಸೇರಿದ್ರು! ನಿನ್ನೆ ಹೈದರಾಬಾದ್​ನ ಜನ ಶಾಕ್​ನಲ್ಲಿದ್ದರು. ಇದಕ್ಕೆ ಕಾರಣ ಹೈದರಾಬಾದ್​ನ ಅಂಬೆರ್​ಪೇಟೆಯಲ್ಲಿ ನಡೆದಿರುವ ದುರ್ಘಟನೆ. ಅಂಬೆರ್​ಪೇಟೆ ಗೋಲ್ನಾಕ್ ಪ್ರದೇಶದಲ್ಲಿ ಮದುವೆಯೊಂದು ನಡೀತಿತ್ತು. ಇನ್ನು ಈ ವೇಳೆ ಭಾರಿ ಅವಘಡವೊಂದು ನಡೆದುಬಿಟ್ಟಿದೆ. ಇಲ್ಲಿನ ಪರ್ಲ ಗಾರ್ಡನ್ ಫಂಕ್ಷನ್ ಹಾಲ್​ನಲ್ಲಿ ಮದುವೆ ನಡೆಯುವಾಗ ಶಿಥಿಲವಾಗಿದ್ದ ಗೋಡೆ ಕುಸಿದು, ನಾಲ್ವರು ಬಲಿಯಾಗಿದ್ದಾರೆ. […]

ಹೈದರಾಬಾದ್​ನಲ್ಲಿ ಗೋಡೆ ಕುಸಿತ, ಮದುವೆಗೆ ಬಂದವರು ಮಸಣ ಸೇರಿದ್ರು
Follow us on

ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದ್​ನಲ್ಲಿ ಭೀಕರ ದುರ್ಘಟನೆಯೊಂದು ನಡೆದಿದೆ. ಗೋಡೆ ಕುಸಿದು ನಾಲ್ವರು ಮುಗ್ಧ ಜೀವಗಳು ಬಲಿಯಾಗಿವೆ. ಯಾರದೋ ತಪ್ಪಿಗೆ ಇನ್ಯಾರೋ ಬಲಿಯಾಗಿದ್ದಾರೆ.

ಮದುವೆಗೆ ಅಂತಾ ಬಂದು ಮಸಣ ಸೇರಿದ್ರು!
ನಿನ್ನೆ ಹೈದರಾಬಾದ್​ನ ಜನ ಶಾಕ್​ನಲ್ಲಿದ್ದರು. ಇದಕ್ಕೆ ಕಾರಣ ಹೈದರಾಬಾದ್​ನ ಅಂಬೆರ್​ಪೇಟೆಯಲ್ಲಿ ನಡೆದಿರುವ ದುರ್ಘಟನೆ. ಅಂಬೆರ್​ಪೇಟೆ ಗೋಲ್ನಾಕ್ ಪ್ರದೇಶದಲ್ಲಿ ಮದುವೆಯೊಂದು ನಡೀತಿತ್ತು. ಇನ್ನು ಈ ವೇಳೆ ಭಾರಿ ಅವಘಡವೊಂದು ನಡೆದುಬಿಟ್ಟಿದೆ.

ಇಲ್ಲಿನ ಪರ್ಲ ಗಾರ್ಡನ್ ಫಂಕ್ಷನ್ ಹಾಲ್​ನಲ್ಲಿ ಮದುವೆ ನಡೆಯುವಾಗ ಶಿಥಿಲವಾಗಿದ್ದ ಗೋಡೆ ಕುಸಿದು, ನಾಲ್ವರು ಬಲಿಯಾಗಿದ್ದಾರೆ. ಅಲ್ಲದೆ ಗೋಡೆ ಬಿದ್ದ ರಭಸಕ್ಕೆ 2 ಆಟೋ, 10 ಬೈಕ್​ಗಳು ನಜ್ಜುಗುಜ್ಜಾಗಿವೆ. ದುರ್ಘಟನೆ ನಡೆಯುತ್ತಿದ್ದಂತೆ ಕಟ್ಟಡದ ಮಾಲೀಕ ನವಾಜ್ ಎಸ್ಕೇಪ್ ಆಗಿದ್ದಾನೆ.

ಮನಸೋ ಇಚ್ಛೆ ಮರುನಿರ್ಮಾಣ ಮಾಡಿದ್ದ ಮಾಲೀಕ!
ದುರ್ಘಟನೆ ಸಂಭವಿಸಿರುವ ಪರ್ಲ ಗಾರ್ಡನ್ ಫಂಕ್ಷನ್ ಹಾಲ್​ನ ಸುಮಾರು 17 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತಂತೆ. ಇತ್ತೀಚೆಗೆ ಕಟ್ಟಡದ ರಿನೋವೇಷನ್ ಮಾಡಿದ್ದ ಮಾಲೀಕ ನವಾಜ್, ಇಂಜಿನಿಯರ್​ಗಳ ಸಲಹೆ ಪಡೆದಿರಲಿಲ್ಲ. ಕಟ್ಟಡದ ಮೇಲೆ ಫಂಕ್ಷನ್ ಹಾಲ್ ನಿರ್ಮಿಸಿದ್ದ.

ಇದು ಶಿಥಿಲವಾಗಿದ್ದ ಕಾರಣ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಘಟನೆಯಲ್ಲಿ ವಿಜಯಲಕ್ಷ್ಮಿ, ಸುರೇಶ್, ಸೋಹೆಲ್ ಹಾಗೂ ಕೃಷ್ಣಯ್ಯ ಮೃತಪಟ್ಟಿದ್ದಾರೆ. ಇನ್ನು ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿದ ಜನಪ್ರತಿನಿಧಿಗಳು ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಮಾಲೀಕನ ತಪ್ಪಿಗೆ ಅಮಾಯಕರು ಬಲಿಯಾಗಿದ್ದಾರೆ.

ಘಟನೆ ನಂತರ ಎಸ್ಕೇಪ್ ಆಗಿರುವ ಮಾಲೀಕ ನವಾಜ್​ಗಾಗಿ ಪೊಲೀಸರು ಬಲೆ ಬೀಸಿದ್ದು, ಸದ್ಯದಲ್ಲೇ ಬಂಧಿಸುವ ಆಶಯದಲ್ಲಿದ್ದಾರೆ.

Published On - 8:55 am, Mon, 11 November 19