ಕೊವಿಡ್19 ಸಾಂಕ್ರಾಮಿಕ ಕಾಯಿಲೆ ದೇಶದಾದ್ಯಂತ ಹೆಚ್ಚಾಗಿ ಹರಡುತ್ತಿದ್ದಂತೆಯೇ ಕೊರೊನಾ ತಡೆಯಲು ಸರ್ಕಾರ ಕೆಲವು ನಿರ್ಬಂಧಗಳನ್ನು ಹೇರಿದೆ. ಇದು ಚಿನ್ನದ ಬೇಡಿಕೆಯ ಮೇಲೂ ಪರಿಣಾಮ ಬೀರಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಚಿನ್ನದ ದರ ಕಡಿಮೆಯಾಗಿದೆ. ಮೇಲೆ ರಿಯಾಯತಿ ನೀಡಲಾಗಿದೆ. ಮೊದಲ ವಾರಕ್ಕೆ ಹೋಲಿಸಿದರೆ ಈ ವಾರದಲ್ಲಿ ವ್ಯಾಪಾರಸ್ಥರು 2 ಡಾಲರ್ನಷ್ಟು ಚಿನ್ನದ ದರ ಕಡಿಮೆ ಮಾಡಿದ್ದಾರೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಆಮದು ಮಾಡಿಕೊಳ್ಳುವ ಚಿನ್ನದ ಮೇಲೆ ಭಾರತದಲ್ಲಿ ಶೇ 10.57 ಆಮದು ಸುಂಕ ಮತ್ತು ಶೇ 3 ಜಿಎಸ್ಟಿ ತೆರಿಗೆ ವಿಧಿಸಲಾಗುತ್ತದೆ. ಬಹುತೇಕ ಎಲ್ಲಾ ರಾಜ್ಯಗಳಲ್ಲಿಯೂ ಕೊವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದ ನಿರ್ಬಂಧಗಳು ಇರುವುದಿಂದ ಚಿನ್ನಕ್ಕೆ ರಿಯಾಯತಿ ನೀಡಲಾಗಿದೆ ಎಂದು ಮುಂಬೈ ಮೂಲದ ವ್ಯಾಪರಿಯೊಬ್ಬರು ತಿಳಿಸಿದ್ದಾರೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಚಿನ್ನದ ಬೇಡಿಕೆಯು 140 ಟನ್ಗಳಿಗೆ ಅಂದರೆ ಶೇ 37ರಷ್ಟು ಬೇಡಿಕೆ ಏರಿಕೆಯಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ತಿಳಿಸಿದೆ.
ಮುಂಬರುವ ದಿನಗಳಲ್ಲಿ 10 ಗ್ರಾಂ ಚಿನ್ನದ ದರ ಶೇ 0.13ರಷ್ಟು ಹೆಚ್ಚಳವಾಗಿ, 46,785 ರೂಪಾಯಿ ಆಗುವ ಸಾಧ್ಯತೆ ಇದೆ. ಹಾಗೆಯೇ ಬೆಳ್ಳಿ ದರ 1 ಕೆಜಿಗೆ 68,423 ರೂಪಾಯಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಪ್ರತಿ ತಿಂಗಳಿಗೂ ಭಾರತದಲ್ಲಿ 10 ಗ್ರಾಂ ಗೆ 1,800ರಂತೆ ದರ ಏರಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಎಂಸಿಎಕ್ಸ್ ಗೋಲ್ಡ್ 49,000 ವರೆಗೂ ತಲುಪಬಹುದು. ಚಿನ್ನದ ದರ ಏರಿಳಿಕೆ ಹೊಂದಿದ್ದರೂ ಕೂಡಾ ಟ್ರೇಡರ್ಸ್, ಚಿನ್ನ ಖರೀದಿಗೆ ಮುಂದಾಗುತ್ತಾರೆ ಎಂದು ಎಂಸಿಎಕ್ಸ್ ಗೋಲ್ಡ್ ತಿಳಿಸಿದೆ. ಚಿನ್ನದ ಬೇಡಿಕೆ ಪ್ರತಿದಿನದ ಏರಿಳಿತದ ಮೇಲೆ ಅವಲಂಬಿತವಾಗಿದೆ.
Published On - 2:10 pm, Sun, 2 May 21