ಹೈದ್ರಾಬಾದ್: ರೈತನ ಬಳಿ 8 ಲಕ್ಷ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದ ಗೂಡೂರು ಮಹಿಳಾ ತಹಶೀಲ್ದಾರ್ ಶೇಕ್ ಹಸೀನಾ ಅವರ ಮತ್ತಷ್ಟು ಅಕ್ರಮಗಳು ಬೆಳಕಿಗೆ ಬಂದಿವೆ. ಕರ್ನೂಲು ಜಿಲ್ಲೆಯ ಹಲವೆಡೆ ಹಾಸ್ಟೆಲ್ ರೂಮ್ಗಳನ್ನು ಬಾಡಿಗೆಗೆ ತೆಗೆದುಕೊಂಡು ಅಲ್ಲಿ ಅಕ್ರಮ ವ್ಯವಹಾರಗಳನ್ನು ನಡೆಸುತ್ತಿದ್ದಳು ಎಂದು ಎಸಿಬಿ ತನಿಖೆಯಲ್ಲಿ ತಿಳಿದು ಬಂದಿದೆ.
ಹಾಸ್ಟೆಲ್ಗಳ ರೂಮ್ಗಳನ್ನು ಬಾಡಿಗೆಗೆ ತೆಗೆದುಕೊಂಡು ಪ್ರತೀ ತಿಂಗಳು ಬಾಡಿಗೆ ನೀಡುತ್ತಿದ್ದಳು. ಅಲ್ಲದೆ, ತಹಶೀಲ್ದಾರ್ ಶೇಕ್ ಹಸೀನಾ ಅಕ್ರಮ ವ್ಯವಹಾರಗಳಲ್ಲಿ ನೇರವಾಗಿ ಭಾಗಿಯಾಗುತ್ತಿರಲಿಲ್ಲ. ಅವ್ಯವಹಾರಗಳನ್ನು ತನ್ನ ಅಸಿಸ್ಟೆಂಟ್ ಮೆಹಬೂಬ ಪಾಷಾ ಮೂಲಕ ಮಾಡಿಸುತ್ತಿದ್ದಳು ಎನ್ನಲಾಗಿದೆ.
ಜಮೀನು ಸಮಸ್ಯೆ ಪರಿಹರಿಸುವುದಾಗಿ ರೈತ ಸುರೇಶ್ ಎಂಬುವರ ಬಳಿ 8 ಲಕ್ಷ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದಳು. ನ.8ರಂದು ತಹಶೀಲ್ದಾರ್ ಅಸಿಸ್ಟೆಂಟ್ ಮೆಹಬೂಬು ಪಾಷಾ ಮೂಲಕ 4 ಲಕ್ಷ ರೂ. ಪಡೆಯಲು ಮಂದಾಗಿದ್ದರು. ಲಂಚ ಪಡೆಯುವ ವೇಳೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಮೆಹಬೂಬ್ ಪಾಷಾರನ್ನು ರೆಡ್ಹ್ಯಾಂಡ್ ಆಗಿ ಸೆರೆ ಹಿಡಿದಿದ್ದರು. ಅಂದಿನಿಂದ ತಹಶೀಲ್ದಾರ್ ಶೇಕ್ ಹಸೀನಾ ನಾಪತ್ತೆಯಾಗಿದ್ದಾರೆ.