ಈ ಅಪ್ಪಟ ವಿದ್ಯಾರ್ಥಿಗೆ All the Best ಹೇಳಲೇ ಬೇಕು, ಯಾಕೆ ಅಂತೀರಾ!?

ಗುಜರಾತ್: ರಾಜ್ಯದ ಶಿವಂ ಸೋಲಂಕಿ ಎಂಬ ಅಪ್ಪಟ ವಿದ್ಯಾರ್ಥಿ ದ್ವಿತೀಯ ಪಿಯುಸಿಯಲ್ಲಿ ಶೇ. 92ರಷ್ಟು ಅಂಕ ಗಳಿಸಿ, ಅಮೋಘ ಸಾಧನೆ ಮಾಡಿದ್ದಾನೆ. ಏನು ಈ ಸಾಧನೆಯ ವಿಶೇಷ ಅಂದ್ರಾ.. ಶಿವಂ ಸೋಲಂಕಿಗೆ 12 ವರ್ಷ ವಯಸ್ಸಾಗಿದ್ದಾಗ ಅಪಘಾತ ಸಂಭವಿಸಿ, ಆತ ಎರಡು ಕೈಗಳು ಮತ್ತು ಕಾಲೊಂದನ್ನು ಶಾಶ್ವತವಾಗಿ ಕಳೆದುಕೊಂಡಿದ್ದ. ಇನ್ನು ಈಗ ಶೇ. 92ರಷ್ಟು ಅಂಕ ಗಳಿಸಿರುವ ಸಾಹಸಿ ಶಿವಂ ಸೋಲಂಕಿ, ತಾನು ವೈದ್ಯನಾಗಬೇಕು ಎಂದು ಬಯಸಿದ್ದಾನೆ. ಅಥವಾ ಇನ್ಯಾವುದೇ ಕ್ಷೇತ್ರದಲ್ಲಾದರೂ ಪರವಾಗಿಲ್ಲ.. ಒಟ್ಟಿನಲ್ಲಿ ಜನ ಸೇವೆ […]

ಈ ಅಪ್ಪಟ ವಿದ್ಯಾರ್ಥಿಗೆ All the Best ಹೇಳಲೇ ಬೇಕು, ಯಾಕೆ ಅಂತೀರಾ!?
ಸಾಧು ಶ್ರೀನಾಥ್​

Updated on: May 22, 2020 | 3:12 PM

ಗುಜರಾತ್: ರಾಜ್ಯದ ಶಿವಂ ಸೋಲಂಕಿ ಎಂಬ ಅಪ್ಪಟ ವಿದ್ಯಾರ್ಥಿ ದ್ವಿತೀಯ ಪಿಯುಸಿಯಲ್ಲಿ ಶೇ. 92ರಷ್ಟು ಅಂಕ ಗಳಿಸಿ, ಅಮೋಘ ಸಾಧನೆ ಮಾಡಿದ್ದಾನೆ. ಏನು ಈ ಸಾಧನೆಯ ವಿಶೇಷ ಅಂದ್ರಾ..


ಶಿವಂ ಸೋಲಂಕಿಗೆ 12 ವರ್ಷ ವಯಸ್ಸಾಗಿದ್ದಾಗ ಅಪಘಾತ ಸಂಭವಿಸಿ, ಆತ ಎರಡು ಕೈಗಳು ಮತ್ತು ಕಾಲೊಂದನ್ನು ಶಾಶ್ವತವಾಗಿ ಕಳೆದುಕೊಂಡಿದ್ದ.

ಇನ್ನು ಈಗ ಶೇ. 92ರಷ್ಟು ಅಂಕ ಗಳಿಸಿರುವ ಸಾಹಸಿ ಶಿವಂ ಸೋಲಂಕಿ, ತಾನು ವೈದ್ಯನಾಗಬೇಕು ಎಂದು ಬಯಸಿದ್ದಾನೆ. ಅಥವಾ ಇನ್ಯಾವುದೇ ಕ್ಷೇತ್ರದಲ್ಲಾದರೂ ಪರವಾಗಿಲ್ಲ.. ಒಟ್ಟಿನಲ್ಲಿ ಜನ ಸೇವೆ ಮಾಡಬೇಕು ಎಂದಿದ್ದಾನೆ.  All the Best ಕಂದಾ!

Published On - 2:06 pm, Fri, 22 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us