ಇತ್ತೀಚೆಗೆ ಸರ್ಕಾರ ಜಾರಿಗೆ ತಂದಿರುವ ಭಾರತೀಯ ನ್ಯಾಯ ಸಂಹಿತೆಗೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದಿದೆ. ಹೊಸ ಕಾನೂನಿನಲ್ಲಿ 7 ಲಕ್ಷ ರೂಪಾಯಿ ದಂಡ ಮತ್ತು ಹಿಟ್ ಆ್ಯಂಡ್ ರನ್(Hit And Run) ರಸ್ತೆ ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಬಗ್ಗೆ ಲಾರಿ ಚಾಲಕರಲ್ಲಿ ತೀವ್ರ ಅಸಮಾಧಾನವಿದೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಕೆಲವೆಡೆ ಇಂಧನ ಕೊರತೆ ಎದುರಾಗುವ ಭೀತಿ ಎದುರಾಗಿದೆ. ಈ ನಿಬಂಧನೆಗಳಿಂದಾಗಿ ಟ್ರಕ್ ಚಾಲಕರು ಅನಗತ್ಯ ಕಿರುಕುಳವನ್ನು ಎದುರಿಸಬೇಕಾಗಬಹುದು ಎಂದು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಹೇಳಿದೆ.
ಆದ್ದರಿಂದ ಇವುಗಳನ್ನು ಹಿಂಪಡೆಯಬೇಕು. ಈ ನಿಬಂಧನೆಗಳು ಇನ್ನೂ ಜಾರಿಗೆ ಬಂದಿಲ್ಲ. ಆದರೂ ಮಹಾರಾಷ್ಟ್ರದಲ್ಲಿ ಟ್ರಕ್ ಚಾಲಕರ ಅತ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಕಂಡುಬರುತ್ತಿವೆ. ಮಹಾರಾಷ್ಟ್ರದ ಪೆಟ್ರೋಲಿಯಂ ವಿತರಕರ ಸಂಘದ ಕಾರ್ಯದರ್ಶಿ ಅಕಿಲ್ ಅಬ್ಬಾಸ್ ಮಾತನಾಡಿ, ಛತ್ರಪತಿ ಸಂಭಾಜಿನಗರದ ಕೆಲವು ಪೆಟ್ರೋಲ್ ಪಂಪ್‌ಗಳಲ್ಲಿ ಈಗಾಗಲೇ ಕೆಲಸ ಸ್ಥಗಿತಗೊಂಡಿದೆ ಎಂದು ತಿಳಿಸಿದ್ದಾರೆ.
ಮತ್ತಷ್ಟು ಓದಿ: New Criminal Laws: ಮೂರು ಕ್ರಿಮಿನಲ್ ಕಾನೂನು ವಿಧೇಯಕಗಳನ್ನು ಹಿಂಪಡೆದ ಕೇಂದ್ರ ಸರ್ಕಾರ
ಸೊಲ್ಲಾಪುರ, ಕೊಲ್ಹಾಪುರ, ನಾಗ್ಪುರ ಮತ್ತು ಗೊಂಡಿಯಾ ಜಿಲ್ಲೆಗಳಲ್ಲಿಯೂ ರಾಸ್ತಾ ರೋಕೋ ಪ್ರತಿಭಟನೆಗಳು ನಡೆಯುತ್ತಿವೆ. ಅದೇ ಸಮಯದಲ್ಲಿ, ನವಿ ಮುಂಬೈ ಮತ್ತು ಇತರ ಸ್ಥಳಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಹಿಮಾಚಲ, ರಾಜಸ್ಥಾನ ಮತ್ತು ಬಿಹಾರಗಳಲ್ಲಿ ಭಾಗಶಃ ಪರಿಣಾಮ ಬೀರಿತು. ಮಧ್ಯಪ್ರದೇಶದ ಇಂದೋರ್, ಗುಜರಾತ್‌ನ ಸೂರತ್ ಮತ್ತು ಹರಿಯಾಣದ ಅಂಬಾಲಾದಲ್ಲಿ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.ಉನಾ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ಕಾನೂನು ತಿದ್ದುಪಡಿ ಮಾಡಿದೆ. ಈ ತಿದ್ದುಪಡಿಯನ್ನು ವಿರೋಧಿಸಿ ಟ್ರಕ್ ಚಾಲಕರು ಮುಷ್ಕರ ನಡೆಸಿದ್ದಾರೆ.
ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಜನರು ತಮ್ಮ ವಾಹನಗಳಿಗೆ ಅಗತ್ಯಕ್ಕಿಂತ ಹೆಚ್ಚು ಇಂಧನ ತುಂಬಿಸಿಕೊಳ್ಳುತ್ತಿರುವುದು ಕಂಡುಬಂದಿದ್ದು, ಹಲವು ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಂಪೂರ್ಣ ಖಾಲಿಯಾಗಿದೆ. ಒಂದೆಡೆ ಪೆಟ್ರೋಲ್‌ಗಾಗಿ ಗ್ರಾಹಕರ ನಡುವೆ ಜಗಳಗಳು ಕೂಡ ನಡೆಯುತ್ತಿವೆ.
ಈ ಮೂರು ಮಸೂದೆಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ- 1860, ಕ್ರಿಮಿನಲ್ ಪ್ರೊಸೀಜರ್ ಆಕ್ಟ್- 1898, ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್-1872 ಅನ್ನು ಬದಲಾಯಿಸುತ್ತದೆ. ಭಾರತೀಯ ನ್ಯಾಯ ಸಂಹಿತೆ ಜಾರಿಯಾದರೆ, ಭಾರತೀಯ ದಂಡ ಸಂಹಿತೆ (IPC)ರದ್ದಾಗಲಿದೆ.
ಚಾಲಕರ ಮುಷ್ಕರದಿಂದಾಗಿ ತೈಲ ಪೂರೈಕೆಗೆ ತೊಂದರೆಯಾಗಿದೆ ಎನ್ನುತ್ತಾರೆ ಪೆಟ್ರೋಲ್ ಪಂಪ್ ನಿರ್ವಾಹಕರು. ಈ ನಿಟ್ಟಿನಲ್ಲಿ ಸರ್ಕಾರ ಮುತುವರ್ಜಿ ವಹಿಸಿ ಲಾರಿ ಚಾಲಕರ ಜತೆ ಮಾತುಕತೆ ನಡೆಸಿ ಮುಷ್ಕರದ ಪರಿಸ್ಥಿತಿಯನ್ನು ಶೀಘ್ರವೇ ಬಗೆಹರಿಸಿ ಎಲ್ಲ ವ್ಯವಸ್ಥೆ ಸುಗಮವಾಗಬೇಕು ಎಂದು ತಿಳಿಸಿದ್ದಾರೆ.
ಒಂದು ವೇಳೆ ರಸ್ತೆಯಲ್ಲಿ ಸಂಪೂರ್ಣವಾಗಿ ಮಂಜು ಮುಸುಕಿದ ವಾತಾವರಣವಿದ್ದು ರಸ್ತೆ ಕಾಣದೆ ಅಪಘಾತ ಸಂಭವಿಸಿದರೆ, ಇದನ್ನೂ ಹಿಟ್ ಆ್ಯಂಡ್ ರನ್ ಎಂದು ಪರಿಗಣಿಸಬಹುದು. ಈ ಮೂಲಕ ಚಾಲಕರು 10 ವರ್ಷಗಳ ಕಾಲ ಜೈಲಲ್ಲಿ ಕೂರಬೇಕಾಗುತ್ತದೆ ಎಂದು ಚಾಲಕರು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ