ರ‍್ಯಾಟ್​ ಹೋಲ್ ಮೈನಿಂಗ್ ಎಂದರೇನು? ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವವರ ರಕ್ಷಣೆಗೆ ಈ ಮಾರ್ಗ ಏಕೆ?

|

Updated on: Nov 28, 2023 | 11:40 AM

ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ಸಿಲ್ಕ್ಯಾರಾ(Silkyara) ಸುರಂಗ ಮಾರ್ಗದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಕೈ ಮೂಲಕ ಕೊರೆಯುವ ಕಾರ್ಯ ನಡೆಯುತ್ತಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯ ಮತ್ತೊಮ್ಮೆ ವೇಗ ಪಡೆದುಕೊಳ್ಳುತ್ತಿದೆ. ಸುರಂಗದಲ್ಲಿರುವ ಕಾರ್ಮಿಕರನ್ನು ತಲುಪಲು ಲಂಬ ಹಾಗೂ ಅಡ್ಡ ಎರಡೂ ವಿಧದಲ್ಲಿ ಕೊರೆಯಲಾಗುತ್ತಿದೆ. ನವೆಂಬರ್ 12 ರಿಂದ 41 ಕಾರ್ಮಿಕರು ಈ ಸುರಂಗದೊಳಗೆ ಸಿಲುಕಿದ್ದಾರೆ. ಇದೀಗ ರ‍್ಯಾಟ್ ಹೋಲ್ ಮೈನಿಂಗ್ ತಂತ್ರವನ್ನು ಬಳಸಿಕೊಂಡು ಅವಶೇಷಗಳನ್ನು ತೆಗೆದುಹಾಕಲಾಗುತ್ತಿದೆ.

ರ‍್ಯಾಟ್​ ಹೋಲ್ ಮೈನಿಂಗ್ ಎಂದರೇನು? ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವವರ ರಕ್ಷಣೆಗೆ ಈ ಮಾರ್ಗ ಏಕೆ?
ಸುರಂಗ
Follow us on

ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ಸಿಲ್ಕ್ಯಾರಾ(Silkyara) ಸುರಂಗ ಮಾರ್ಗದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಕೈ ಮೂಲಕ ಕೊರೆಯುವ ಕಾರ್ಯ ನಡೆಯುತ್ತಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯ ಮತ್ತೊಮ್ಮೆ ವೇಗ ಪಡೆದುಕೊಳ್ಳುತ್ತಿದೆ. ಸುರಂಗದಲ್ಲಿರುವ ಕಾರ್ಮಿಕರನ್ನು ತಲುಪಲು ಲಂಬ ಹಾಗೂ ಅಡ್ಡ ಎರಡೂ ವಿಧದಲ್ಲಿ ಕೊರೆಯಲಾಗುತ್ತಿದೆ. ನವೆಂಬರ್ 12 ರಿಂದ 41 ಕಾರ್ಮಿಕರು ಈ ಸುರಂಗದೊಳಗೆ ಸಿಲುಕಿದ್ದಾರೆ. ಇದೀಗ ರ‍್ಯಾಟ್ ಹೋಲ್ ಮೈನಿಂಗ್ ತಂತ್ರವನ್ನು ಬಳಸಿಕೊಂಡು ಅವಶೇಷಗಳನ್ನು ತೆಗೆದುಹಾಕಲಾಗುತ್ತಿದೆ.

ಅಮೆರಿಕದ ಆಗರ್ ಡ್ರಿಲ್ ಯಂತ್ರ ಕೆಟ್ಟು ನಿಂತ ನಂತರ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಪಾರುಗಾಣಿಕಾ ಪೈಪ್‌ನೊಳಗೆ ಅಂಟಿಕೊಂಡಿರುವ ಬ್ಲೇಡ್ ಅನ್ನು ತುಂಡುಗಳಾಗಿ ಕತ್ತರಿಸಿ ತೆಗೆಯಲಾಯಿತು.

ರ‍್ಯಾಟ್ ಹೋಲ್ ಮೈನಿಂಗ್ ಎಂದರೇನು?
ರ‍್ಯಾಟ್ ಹೋಲ್ ಮೈನಿಂಗ್ ಮೇಘಾಲಯದಲ್ಲಿ ತುಂಬಾ ಪ್ರಚಲಿತದಲ್ಲಿದೆ, ಇದು ಕಿರಿದಾದ ಪ್ರದೇಶಗಳಿಂದ ಕಲ್ಲಿದ್ದಿಲನ್ನು ಹೊರತೆಗೆಯಲು ಬಳಸಲಾಗುವ ಗಣಿಗಾರಿಕೆ ವಿಧಾನ ಇದಾಗಿದೆ.

ರ‍್ಯಾಟ್ ಹೋಲ್ ಎಂಬ ಪದವು ನೆಲದಲ್ಲಿ ಅಗೆದ ಕಿರಿದಾದ ರಂಧ್ರಗಳನ್ನು ಸೂಚಿಸುತ್ತದೆ. ಈ ರಂಧ್ರದಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಇಳಿಯಲು ಹಾಗೂ ಕಲ್ಲಿದ್ದಿಲನ್ನು ಹೊರತೆಗೆಯಲು ಸಾಧ್ಯವಾಗುತ್ತದೆ.

ರಂಧ್ರವನ್ನು ಕೊರದ ಬಳಿಕ ಕಲ್ಲಿದ್ದಿಲು ಜಾಗವನ್ನು ತಲುಪಲು ಹಗ್ಗಗಳು ಅಥವಾ ಬಿದಿರಿನ ಏಣಿಗಳನ್ನು ಬಳಸುತ್ತಾರೆ. ನಂತರ ಪಿಕ್ಸ್, ಸಲಿಕೆಗಳು ಮತ್ತು ಬುಟ್ಟಿಗಳಂತಹ ವಸ್ತುಗಳನ್ನು ಬಳಸಿಕೊಂಡು ಕೈಯಿಂದ ಹೊರ ತೆಗೆಯಲಾಗುತ್ತದೆ.

ಈ ರ‍್ಯಾಟ್ ಹೋಲ್ ಮೈನಿಂಗ್​ನಲ್ಲಿ ಎರಡು ವಿಧ
ಒಂದು ಅಡ್ಡ ಕತ್ತರಿಸುವ ಪ್ರಕ್ರಿಯೆ, ಎರಡನೆಯದು ಬಾಕ್ಸ್​ ಮಾದರಿಯಲ್ಲಿ ಕತ್ತರಿಸುವುದು. ಕಿರಿದಾದ ಸುರಂಗಗಳಿಗೆ ಸೈಡ್​ ಕಟಿಂಗ್​ ಬಳಸಲಾಗುತ್ತದೆ. ಇವುಗಳನ್ನು ಪರ್ವತದ ಇಳಿಜಾರಿನಲ್ಲಿ ನಿರ್ಮಿಸಲಾಗುತ್ತದೆ.

 ಅಪಾಯವೇನು?
ರ‍್ಯಾಟ್ ಹೋಲ್ ಮೈನಿಂಗ್ ಪರಿಸರ ಅಪಾಯಗಳನ್ನು ಉಂಟುಮಾಡುತ್ತದೆ. ಕಾರ್ಮಿಕರ ಸುರಕ್ಷತೆಯ ಬಗ್ಗೆ ನಂಬಿಕೆ ಇರುವುದಿಲ್ಲ. ಗಣಿಗಾರಿಕೆ ಪ್ರಕ್ರಿಯೆಯು ಭೂಮಿಯ ಅವನತಿ, ಅರಣ್ಯನಾಶ ಮತ್ತು ಜಲ ಮಾಲಿನ್ಯಕ್ಕೆ ಕಾರಣವಾಗಬಹುದು.

ರ‍್ಯಾಟ್ ಹೋಲ್ ಮೈನಿಂಗ್​ಗೆ ನಿಷೇಧ
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) 2014ರಲ್ಲಿ ಈ ವಿಧಾನವನ್ನು ನಿಷೇಧಿಸಿತ್ತು. ಮೇಘಾಲಯದಲ್ಲಿ ನಿಷೇಧಿಸಲಾಗಿತ್ತು, 2015ರಲ್ಲೂ ನಿಷೇಧ ಕಾಯ್ದುಕೊಂಡಿತ್ತು. ಇದಾದ ಬಳಿಕ ಈ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

2019 ರಲ್ಲಿ ನಡೆದ ಪ್ರಮುಖ ದುರಂತದಲ್ಲಿ, ಮೇಘಾಲಯದ ಪೂರ್ವ ಜೈನ್ತಿಯಾ ಹಿಲ್ಸ್ ಜಿಲ್ಲೆಯಲ್ಲಿ ಪ್ರವಾಹ ಸಂಭವಿಸಿದ ಬಳಿಕ ಇಲಿ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ 15 ಜನರು ಹಲವಾರು ದಿನಗಳವರೆಗೆ ಅಲ್ಲೇ ಇದ್ದರು, ನಂತರ ಸಾವನ್ನಪ್ಪಿದರು.

ನಾವು ಇದನ್ನು 10 ವರ್ಷಗಳಿಂದ ಮಾಡುತ್ತಿದ್ದೇವೆ ಮತ್ತು ನಮಗೆ ಸಾಕಷ್ಟು ಸ್ಥಳವಿದೆ. 41 ಕಾರ್ಮಿಕರನ್ನು ನಾವೆಲ್ಲರೂ ಹೊರಗೆ ತರಲು ಬಯಸುತ್ತೇವೆ ರಾಕೇಶ್ ರಜಪೂತ್ ಹೇಳಿದ್ದಾರೆ. ಒಬ್ಬೊಬ್ಬರನ್ನಾಗಿಯೇ ಸುರಂಗದಿಂದ ಹೊರ ತರಬೇಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ