ಹೈದರಾಬಾದ್ನ ದಿಶಾ ಗ್ಯಾಂಗ್ ರೇಪ್ ಪ್ರಕರಣ ದೇಶಾದ್ಯಂತ ಸದ್ದು ಮಾಡಿತ್ತು. ಕಾಮುಕರನ್ನ ಎನ್ಕೌಂಟರ್ ಮಾಡಲಾಗಿತ್ತು. ಇದು ಒಳ್ಳೆಯ ಪಾಠವಾಗುತ್ತೆ ಅಂತಲೇ ಹೇಳಲಾಗಿತ್ತು. ಆದ್ರೆ, ದಿಶಾ ಪ್ರಕರಣ ಮರೆಯಾಗುವ ಮುನ್ನವೇ ಹೈದರಾಬಾದ್ನಲ್ಲಿ ಕಾಮುಕರು ಮತ್ತೊಮ್ಮೆ ಪೈಶಾಚಿಕ ಕೃತ್ಯ ನಡೆಸಿದ್ದಾರೆ. ಘಟ್ಕೇಸರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾರೆ.ಮೆಡ್ಚಲ್ನ ಕಾಲೇಜು ವಿದ್ಯಾರ್ಥಿನಿ ನಿನ್ನೆ ಸಂಜೆ ಕಾಲೇಜು ಮುಗಿಸಿ ಕಾಲೇಜ್ ಬಸ್ನಲ್ಲೇ ಬಂದಿಳಿದಿದ್ದಳು. ಮನೆಗೆ ತೆರಳಲು ಆಟೋ ಹತ್ತಿದ್ಳು. ಆದ್ರೆ, ಮನೆಗೆ ಕರೆದೊಯ್ಯಬೇಕಿದ್ದ ಆಟೋ ಚಾಲಕ ವಿದ್ಯಾರ್ಥಿನಿಯನ್ನು ಓಮ್ನಿಗೆ ಶಿಫ್ಟ್ ಮಾಡಿ ತನ್ನ ಮೂವರು ಸಂಗಡಿಗರ ಜೊತೆಗೆ ಯಾನಂಪೇಟೆಯ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಪಾಪಕೃತ್ಯ ನಡೆಸಿದ್ದಾರೆ.
ಈ ವೇಳೆ ವಿದ್ಯಾರ್ಥಿನಿಯನ್ನು ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ನಿರ್ಜನ ಪ್ರದೇಶದಲ್ಲೇ ಆಕೆಯನ್ನ ಬೆತ್ತಲೆಯಾಗಿ ಬಿಟ್ಟು ಪರಾರಿಯಾಗಿದ್ದಾರೆ. ಅಲ್ಲಿಂದ ನರಳುತ್ತಾ ಸ್ಥಳೀಯರ ನೆರವು ಪಡೆದ ಯುವತಿ, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ವಿದ್ಯಾರ್ಥಿನಿ ಕೋಮಾ ಸ್ಥಿತಿಯಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಒಟ್ನಲ್ಲಿ ಕೇಳುವುದಕ್ಕೆ ಇಷ್ಟು ಭಯಾನಕವಾಗಿರುವ ಈ ಘಟನೆ ಹೈದರಾಬಾದ್ ನಗರವನ್ನೇ ಬೆಚ್ಚಿಬೀಳಿಸಿದೆ. ಪೊಲೀಸ್ರು ಕೂಡ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದು, ಕಾಮುಕ ಕ್ರಿಮಿಗಳ ಹೆಡೆಮುರಿ ಕಟ್ಟಲು ಸಜ್ಜಾಗಿದ್ದಾರೆ. ಪೊಲೀಸರ 10 ತಂಡ ರಚಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಗ್ಯಾಂಗ್ರೇಪ್: ನಾಲ್ವರು ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್ಶೀಟ್
Published On - 7:52 am, Thu, 11 February 21