ಅವಾಗ ಉಸಿರು ಬಿಗಿಹಿಡಿದು ಪರೀಕ್ಷಿಸಿಕೊಳ್ಳಿ ಅಂದರು, ಈಗ ದಮ್ಮಯ್ಯ ಮೊದಲು ಉಸಿರು ಬಿಡಿ ಅಂತಿದ್ದಾರೆ! ಏನಿದು ಕೊರೊನಾ ಅಧ್ಯಯನ ವರದಿ?

|

Updated on: Jan 13, 2021 | 3:39 PM

ವೈರಸ್​ ಕಣಗಳು ಶ್ವಾಸಕೋಶದ ಆಳಕ್ಕೆ ಇಳಿದು, ಅಲ್ಲಿ ಹೇಗೆ ಸಂಗ್ರಹ ಆಗುತ್ತವೆ ಎಂಬುದನ್ನು ನಮ್ಮ ಅಧ್ಯಯನ ತಿಳಿಸುತ್ತದೆ. ಈ ಗಾಳಿಯಲ್ಲಿರುವ ಕಣಗಳು ಉಸಿರಾಟದ ಮೂಲಕ ಶ್ವಾಸಕೋಶದ ಆಳಕ್ಕೆ ಇಳಿಯು ಭೌತಿಕ ಪ್ರಕ್ರಿಯೆಯನ್ನು ನಾವು ವಿವರಿಸಿದ್ದೇವೆ ಎಂದು ಮಹೇಶ್​ ಪಂಚಗುಲಾ ತಿಳಿಸಿದ್ದಾರೆ.

ಅವಾಗ ಉಸಿರು ಬಿಗಿಹಿಡಿದು ಪರೀಕ್ಷಿಸಿಕೊಳ್ಳಿ ಅಂದರು, ಈಗ ದಮ್ಮಯ್ಯ ಮೊದಲು ಉಸಿರು ಬಿಡಿ ಅಂತಿದ್ದಾರೆ!  ಏನಿದು ಕೊರೊನಾ ಅಧ್ಯಯನ ವರದಿ?
IIT ಮದ್ರಾಸ್​
Follow us on

ಚೆನ್ನೈ: ಹೊಚ್ಚ ಹೊಸ ಮಾರ್ಗಸೂಚಿಯಲ್ಲಿ ‘ಉಸಿರು ಬಿಗಿ ಹಿಡಿಯುವುದರಿಂದ ಕೊವಿಡ್​-19 ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ’ ಎಂದು ಮದ್ರಾಸ್​ನ ಇಂಡಿಯನ್​ ಇನ್ಸ್​ಟಿಟ್ಯೂಟ್ ಆಫ್​ ಟೆಕ್ನಾಲಜಿ (IITM) ಜನರನ್ನು ಬೆಚ್ಚಿಬೀಳಿಸಿದೆ .

ಈಗಂತೂ ಕೊರೊನಾ ಇರುವುದರಿಂದ ಜನನಿಬಿಡ ಪ್ರದೇಶಗಳಿಗೆ ಹೋಗುವುದೇ ಆತಂಕದ ವಿಚಾರ. ಇನ್ನು ಕೆಲವರು ಜನಸಂದಣಿ ಇರುವ ಪ್ರದೇಶಗಳಲ್ಲಿ ಉಸಿರಾಟದ ಪ್ರಮಾಣವನ್ನು ಕಡಿಮೆ ಮಾಡುತ್ತಾರೆ. ಕೊರೊನಾ ಭಯದಿಂದ ಉಸಿರನ್ನು ಒಳಗೆ ತೆಗೆದುಕೊಂಡು ಸಹಜ ಸಮಯದಲ್ಲಿ ಹೊರಬಿಡುವ ಬದಲು, ಅದನ್ನು ಸ್ವಲ್ಪ ಹೊತ್ತು ಕಟ್ಟಲು ಪ್ರಯತ್ನಿಸುತ್ತಾರೆ. ಇದು ತಪ್ಪು ಎನ್ನುತ್ತಾರೆ IITMಯ ಸಂಶೋಧಕರು. ಹೀಗೆ ಉಸಿರನ್ನು ಒಳೆತೆಗೆದುಕೊಂಡು ಅದನ್ನು ಹೊರಬಿಡದೆ ಇದ್ದರೆ, ಸೋಂಕು ತುಂಬಿದ ಲಾಲಾರಸದ ಹನಿಗಳು ಶ್ವಾಸಕೋಶಕ್ಕೆ ತಲುಪುವ ಪ್ರಮಾಣ ಹೆಚ್ಚಾಗುತ್ತದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಹೊಸ ಅಧ್ಯಯನದಲ್ಲಿ.. ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಉಸಿರಾಟದ ಆವರ್ತನವನ್ನು ರೂಪಿಸಿದ್ದರು. ಈ ವೇಳೆ ಕಡಿಮೆ ಉಸಿರಾಟದ ಆವರ್ತನದಿಂದ ದೇಹದೊಳಗೆ ಸೋಂಕಿನ ಶೇಖರಣೆಯ ಸಮಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಅದು ಕೂಡಲೇ ಶ್ವಾಸಕೋಶಕ್ಕೆ ಹೋಗಿ ಶೇಖರಣೆಯಾಗಬಹುದು. ಸೋಂಕಿನ ತೀವ್ರತೆಯೂ ಅಧಿಕವಾಗಬಹುದು ಎಂದು ಅಧ್ಯಯನ ವರದಿಯಲ್ಲಿ ಹೇಳಿದ್ದಾರೆ.

IIT ಮದ್ರಾಸ್​ ನ ಅನ್ವಯಿಕ ಯಂತ್ರಶಾಸ್ತ್ರ ವಿಭಾಗದ(Department of Applied Mechanics) ಪ್ರೊ.ಮಹೇಶ್​ ಪಂಚಗುಲಾ ಅವರ ನೇತೃತ್ವದಲ್ಲಿ ಅಧ್ಯಯನ ನಡೆಸಲಾಗಿತ್ತು. ಈ ತಂಡದಲ್ಲಿ ಸಂಶೋಧಕರಾದ ಅರ್ನಬ್ ಕುಮಾರ್ ಮಲ್ಲಿಕ್, ಸೌಮಾಲ್ಯಾ ಮುಖರ್ಜಿಯವರು ಇದ್ದರು. ಈ ತಂಡದ ಅಧ್ಯಯನದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ Physics of Fluidsಜರ್ನಲ್​ನಲ್ಲಿ ಪ್ರಕಟವಾಗಿದೆ.

ವೈರಸ್​ ಕಣಗಳು ಶ್ವಾಸಕೋಶದ ಆಳಕ್ಕೆ ಇಳಿದು, ಅಲ್ಲಿ ಹೇಗೆ ಸಂಗ್ರಹ ಆಗುತ್ತವೆ ಎಂಬುದನ್ನು ನಮ್ಮ ಅಧ್ಯಯನ ತಿಳಿಸುತ್ತದೆ. ಈ ಗಾಳಿಯಲ್ಲಿರುವ ಕಣಗಳು ಉಸಿರಾಟದ ಮೂಲಕ ಶ್ವಾಸಕೋಶದ ಆಳಕ್ಕೆ ಇಳಿಯು ಭೌತಿಕ ಪ್ರಕ್ರಿಯೆಯನ್ನು ನಾವು ವಿವರಿಸಿದ್ದೇವೆ ಎಂದು ಮಹೇಶ್​ ಪಂಚಗುಲಾ ತಿಳಿಸಿದ್ದಾರೆ.

ಜನಸಂದಣಿ ಇರುವ ಪ್ರದೇಶಗಳಲ್ಲಿ ಇದ್ದಾಗ ಸಡನ್​ ಆಗಿ ಯಾರೋ ಸೀನುತ್ತಾರೆ.. ಅಥವಾ ಕೆಮ್ಮುತ್ತಾರೆ. ಆಗ ವ್ಯಕ್ತಿಯ ಬಾಯಿ ಅಥವಾ ಮೂಗಿನಿಂದ ಹೊರಡುವ ಹನಿಗಳು ಗಾಳಿಯ ಮೂಲಕ ನಿಮ್ಮ ದೇಹಕ್ಕೆ ಸೇರಬಹುದು. ಆಗ ನಿಮಗೂ ಕೊರೊನಾ ಸೋಂಕು ತಗಲುವುದು ಸಹಜ. ಹೀಗೆ ಡ್ರಾಪ್​ಲೆಟ್​ಗಳ ಮೂಲಕ ದೇಹ ಪ್ರವೇಶಿಸಿದ ಹನಿಗಳ ಚಲನೆಯನ್ನು ಐಐಟಿ ಮದ್ರಾಸ್​ ತಂಡ ಅಧ್ಯಯನ ಮಾಡಿದೆ.

ಈ ಚಿಕ್ಕ ಹನಿಗಳ ಚಲನೆ ಸಣ್ಣ ರಕ್ತನಾಳಗಳಲ್ಲಿ ಹೇಗಿರುತ್ತದೆ ಎಂಬುದನ್ನೂ ಸಂಶೋಧನೆ ಮಾಡಿದೆ. ಏರೋಸೋಲ್ಸ್​ (aerosols)ಗಳನ್ನು ಬಳಸಿ, ನಡೆಸಿದ ಅಧ್ಯಯನದಿಂದ ಈ ವಿಚಾರ ಹೊರಬಿದ್ದಿದೆ. ಉಸಿರನ್ನು ಬಿಗಿಹಿಡಿಯುವುದರಿಂದಕ ಕೊವಿಡ್​-19ನಿಂದ ಪಾರಾಗಬಹುದು ಎಂದು ಭಾವಿಸಿದ್ದರೆ ತಪ್ಪು, ಇದರಿಂದ ಸೋಂಕಿಗೆ ಒಳಗಾಗುವ ಸಾಧ್ಯತೆಯೇ ಹೆಚ್ಚು ಎಂಬುದನ್ನು ಸಂಶೋಧಕರ ತಂಡ ಸ್ಪಷ್ಟಪಡಿಸಿದೆ.

ಆದರೆ ಈ ಮೊದಲು ಬೇರೆ ಸಂಶೋಧಕರು ಕೊರೊನಾ ಬಂದ ಹೊಸದರಲ್ಲಿ ಏನು ಹೇಳಿದ್ದರು ಗೊತ್ತಾ?
ನಿಮಗೆ ಕೊರೊನಾ ಬಂದಿದೆಯಾ, ಇಲ್ವಾ? ಎಂಬುದನ್ನು ಪರೀಕ್ಷಿಸಿಕೊಳ್ಳಲು ಆಸ್ಪತ್ರೆಗೆ ಏನೂ ಹೋಗಬೇಕಿಲ್ಲ. ನೀವೇ ಮನೆಯಲ್ಲೇ.. ನಿಂತನಿಲುವಿನಲ್ಲೇ.. ಪರೀಕ್ಷಿಸಿಕೊಳ್ಳಬಹುದು. ಜಸ್ಟ್​,  ಉಸಿರು ಬಿಗಿಹಿಡಿದು ಪರೀಕ್ಷಿಸಿಕೊಳ್ಳಿ ಅಂದಿದ್ದರು. ನೀವು ಹೆಚ್ಚು ಸಮಯ ಉಸಿರು ಬಿಗಿಹಿಡಿದಿದ್ದೇ ಆದ್ರೆ ಜೈಹೋ! ನಿಮಗೆ ಕೊರೊನಾ ಇಲ್ಲಾ ಎಂದೇ ತಿಳಿದುಕೊಳ್ಳಿ ಅಂದುಬಿಟ್ಟಿದ್ದರು. ಈಗ ನೋಡಿದರೆ ಹೊಸ ಸಂಶೋಧಕರು.. ದಮ್ಮಯ್ಯ ಮೊದಲು ಉಸಿರು ಬಿಡಿ ಅಂತಿದ್ದಾರೆ! ಏನೋಪಾ..

7 ಜನರನ್ನು ಸೇರಿಸಿಕೊಂಡರೂ ರಾಜ್ಯ ಬಿಜೆಪಿ ಸರ್ಕಾರ ಟೇಕಾಫ್ ಆಗಲ್ಲ: ಸಿದ್ದರಾಮಯ್ಯ