ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಗುಡ್‌ನ್ಯೂಸ್: ಸೆ. 1 ರಿಂದ ಬೋರ್ಡಿಂಗ್ ಪಾಸ್‌ಗೆ ಇಮಿಗ್ರೇಷನ್ ಸ್ಟ್ಯಾಂಪಿಂಗ್ ರದ್ದು

ಸೆಪ್ಟೆಂಬರ್ 1 ರಿಂದ ಭಾರತದ ವಿಮಾನ ನಿಲ್ದಾಣಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಲಸೆ ಕೌಂಟರ್‌ಗಳಲ್ಲಿ ಬೋರ್ಡಿಂಗ್ ಪಾಸ್‌ಗೆ ಮುದ್ರೆ ಹಾಕುವ ನಿಯಮ ರದ್ದಾಗಿದೆ. ಇನ್ನು ಮುಂದೆ, ಡಿಜಿಟಲ್ ಇ-ಬೋರ್ಡಿಂಗ್ ಪಾಸ್ ತೋರಿಸಿ ಸುಲಭವಾಗಿ ವಲಸೆ ಅನುಮತಿ ಪಡೆಯಬಹುದು. ಈ ಕಾಗದ ರಹಿತ ಪ್ರಕ್ರಿಯೆಯು ಅನಾನುಕೂಲತೆಗಳನ್ನು ತಪ್ಪಿಸಿ, ವಿಮಾನ ನಿಲ್ದಾಣಗಳಲ್ಲಿ ಸರತಿ ಸಾಲಿನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಇದು ವೇಗದ ಮತ್ತು ಸುಗಮ ಪ್ರಯಾಣಕ್ಕೆ ದಾರಿಯಾಗಿದೆ.

ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಗುಡ್‌ನ್ಯೂಸ್: ಸೆ. 1 ರಿಂದ  ಬೋರ್ಡಿಂಗ್ ಪಾಸ್‌ಗೆ ಇಮಿಗ್ರೇಷನ್ ಸ್ಟ್ಯಾಂಪಿಂಗ್ ರದ್ದು
ಪಾಸ್

Updated on: Aug 23, 2026 | 8:26 AM

ನವದೆಹಲಿ, ಆಗಸ್ಟ್​ 23: ಭಾರತದ ವಿಮಾನ ನಿಲ್ದಾಣ(Airports)ಗಳಿಂದ ವಿದೇಶಗಳಿಗೆ ಪ್ರಯಾಣಿಸುವ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಕೇಂದ್ರ ಗೃಹ ಸಚಿವಾಲಯದ (MHA) ಸಿಹಿಸುದ್ದಿ ನೀಡಿದೆ. ಸೆಪ್ಟೆಂಬರ್ 1 ರಿಂದ ದೇಶದ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ವಲಸೆ ಕೌಂಟರ್‌ಗಳಲ್ಲಿ ಬೋರ್ಡಿಂಗ್ ಪಾಸ್‌ಗಳಿಗೆ ಭೌತಿಕವಾಗಿ ಮುದ್ರೆ ಹಾಕುವ ಕಡ್ಡಾಯ ನಿಯಮವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ಇ-ಬೋರ್ಡಿಂಗ್ ಪಾಸ್ ಮಾನ್ಯತೆ: ವಿದೇಶಕ್ಕೆ ಪ್ರಯಾಣಿಸುವವರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಡಿಜಿಟಲ್ ಇ-ಬೋರ್ಡಿಂಗ್ ಪಾಸ್ ತೋರಿಸಿ ಸುಲಭವಾಗಿ ವಲಸೆ ಅನುಮತಿ ಪಡೆಯಬಹುದು.
ಕಾಗದದ ಪಾಸ್‌ಗಳ ಬಳಕೆ ಮುಂದುವರಿಕೆ: ಮುದ್ರಿತ ಬೋರ್ಡಿಂಗ್ ಪಾಸ್ ಹೊಂದಿರುವ ಪ್ರಯಾಣಿಕರು ಅದನ್ನು ಬಳಸುವುದನ್ನು ಮುಂದುವರೆಸಬಹುದು, ಆದರೆ ಅಧಿಕಾರಿಗಳು ಇನ್ನು ಮುಂದೆ ಅದರ ಮೇಲೆ ಯಾವುದೇ ಮುದ್ರೆ ಒತ್ತುವುದಿಲ್ಲ.

ಅನನುಕೂಲತೆಗಳಿಗೆ ಮುಕ್ತಿ: ಕಾಗದದ ಪಾಸ್‌ಗಳ ಮೇಲೆ ತಪ್ಪಾದ ಜಾಗದಲ್ಲಿ ಅಥವಾ ಅಸ್ಪಷ್ಟವಾಗಿ ಸೀಲ್ ಬೀಳುವುದರಿಂದ ಬಾರ್‌ಕೋಡ್ ಸ್ಕ್ಯಾನ್ ಮಾಡಲು ಮತ್ತು ವಿವರಗಳನ್ನು ಓದಲು ಉಂಟಾಗುತ್ತಿದ್ದ ತೊಂದರೆಗಳನ್ನು ತಪ್ಪಿಸಲು ಈ ಸುಧಾರಣೆ ತರಲಾಗಿದೆ.

ಮತ್ತಷ್ಟು ಓದಿ: ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಕನಕಪುರ ರಸ್ತೆಯ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ: ಸಚಿವ ಎಂಬಿ ಪಾಟೀಲ್ ಮಾಹಿತಿ

ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆ ವೇಳೆ ಭದ್ರತಾ ಪಡೆ ಸಿಐಎಸ್‌ಎಫ್ (CISF) ಸಿಬ್ಬಂದಿ ಬೋರ್ಡಿಂಗ್ ಪಾಸ್‌ಗೆ ಸ್ಟ್ಯಾಂಪ್ ಮಾಡುವ ಪದ್ಧತಿಯನ್ನು ಮೊದಲೇ ರದ್ದುಗೊಳಿಸಲಾಗಿತ್ತು. ಈಗ ವಲಸೆ ಕೌಂಟರ್‌ಗಳಲ್ಲೂ ಇದು ನಿಲ್ಲಲಿದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ವಲಸೆ ಪ್ರವೇಶ ಮತ್ತು ನಿರ್ಗಮನದ ವೇಳೆ ಪಾಸ್‌ಪೋರ್ಟ್ ಮೇಲೆ ಸೀಲ್ ಹಾಕುವುದನ್ನೂ ರದ್ದುಗೊಳಿಸಲು ಪ್ರಾಯೋಗಿಕ ಯೋಜನೆ ಸಿದ್ಧವಾಗುತ್ತಿದ್ದು, ಶೀಘ್ರದಲ್ಲೇ ಜಾರಿಗೆ ಬರಲಿದೆ.

ವಿಮಾನ ನಿಲ್ದಾಣಗಳಲ್ಲಿ ಇ-ಗೇಟ್ಸ್ ಮತ್ತು ಬಯೋಮೆಟ್ರಿಕ್ ಆಧಾರಿತ ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್ (FTI-TTP) ವ್ಯವಸ್ಥೆಗೆ ಪೂರಕವಾಗಿ ಕಾಗದ ರಹಿತ ಪ್ರಕ್ರಿಯೆಯನ್ನು ವಿಸ್ತರಿಸಲಾಗುತ್ತಿದೆ. ಪರಿಶೀಲನಾ ಪ್ರಕ್ರಿಯೆ ವೇಗಗೊಳ್ಳುವುದರಿಂದ ಅಂತಾರಾಷ್ಟ್ರೀಯ ಟರ್ಮಿನಲ್‌ಗಳಲ್ಲಿ ಸರತಿ ಸಾಲಿನ ದಟ್ಟಣೆ ಗಣನೀಯವಾಗಿ ತಗ್ಗಲಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us