193224 PIN ಕೋಡ್ ಹೊಂದಿರುವ ಭಾರತದ ಮೊದಲ ಅಂಚೆ ಕಛೇರಿ ( post office) ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ವಾಸ್ತವಿಕ ನಿಯಂತ್ರಣ ರೇಖೆ (LoC) ಕಿಶನ್ಗಂಗಾ ನದಿಯ ದಡದಲ್ಲಿದೆ. ಈ ಮೊದಲು ಈ ಅಂಚೆ ಕಛೇರಿಯನ್ನು ದೇಶದ ಕೊನೆಯ ಅಂಚೆ ಕಛೇರಿ ಎಂದು ಕರೆಯಲಾಗುತ್ತಿತ್ತು. ಆದರೆ ಇಂದು ಭಾರತದ ಸೈನ್‌ಬೋರ್ಡ್ ಇದನ್ನು “ಭಾರತದ ಮೊದಲ ಅಂಚೆ ಕಚೇರಿ” ಎಂದು ಕರೆದಿದೆ. ಏಕೆಂದರೆ ಇದು ಎಲ್ಒಸಿ ಅಥವಾ ಗಡಿಯಿಂದ ದೂರದಲ್ಲಿರುವ ಮೊದಲ ಅಂಚೆ ಕಚೇರಿ ಎಂದು ಕರೆಯಲಾಗಿದೆ. ಬಾರಾಮುಲ್ಲಾ ವಿಭಾಗದ ಅಂಚೆ ಕಚೇರಿಗಳ ಮೇಲ್ವಿಚಾರಕ ಅಬ್ದುಲ್ ಹಮೀದ್ ಕುಮಾರ್ ಅವರು ಈ ಹಿಂದೆ ಇದನ್ನು ಕೊನೆಯ ಅಂಚೆ ಕಚೇರಿ ಎಂದು ಕರೆಯಲಾಗುತ್ತಿತ್ತು, ಯಾಕೆಂದರೆ ಅದು ತುಂಬಾ ದೂರದಲ್ಲಿ ಇತ್ತು. ದೇಶ ಗಡಿಯ ಕೊನೆಯ ಅಂಚೆ ಕಚೇರಿಯಾಗಿತ್ತು, ಆದರೆ ಇದೀಗ ಸೈನ್ಯವು ಅದನ್ನು ಮೊದಲ ಅಂಚೆ ಕಚೇರಿಯಾನ್ನಾಗಿ ಬದಲಾಯಿಸಿದೆ ಎಂದು ಹೇಳಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ಮತ್ತು ಪಾಕಿಸ್ತಾನ ಅಸ್ತಿತ್ವಕ್ಕೆ ಬರುವ ಮೊದಲೇ ಈ ಅಂಚೆ ಕಛೇರಿ ಕಾರ್ಯ ನಿರ್ವಹಿಸುತ್ತಿತ್ತು ಎಂದು ಕುಗ್ರಾಮದ ನಿವಾಸಿಗಳು ಹೇಳಿದ್ದಾರೆ. ಭಾರತ 1965, 1971 ರಲ್ಲಿ ಉಚ್ಛ್ರಾಯ (ಅಭಿವೃದ್ಧಿ) ಸ್ಥಿತಿಯಲ್ಲಿದ್ದರೂ ಕೂಡ ಈ ಅಂಚೆಯನ್ನು ಬಳಸಲಾಗಿತ್ತು. ಆದರೆ 1990ರಲ್ಲಿ ಪಾಕಿಸ್ತಾನ ಉಗ್ರರು ಈ ಪ್ರದೇಶದ ಮೇಲೆ ಶೆಲ್ ದಾಳಿ ನಡೆಸಿದ ಸಂದರ್ಭದಲ್ಲಿ ಇದರ ಮೇಲೆಯೂ ದಾಳಿ ಮಾಡಿದ್ದರು. ಅದರೂ ಇದು ತನ್ನ ಕಾರ್ಯಚಟುವಟಿಕೆಯನ್ನು ನಿಲ್ಲಿಸಲಿಲ್ಲ.
1993ರಲ್ಲಿ ಕೆರಾನ್ ವಲಯಕ್ಕೆ ಹಠಾತ್ ಪ್ರವಾಹವೊಂದು ಅಪ್ಪಳಿಸಿತು. ಈ ಸಮಯದಲ್ಲಿ ಅಂಚೆ ಕಚೇರಿ ಕೂಡ ಈ ಪ್ರವಾಹದಲ್ಲಿ ಕೊಚ್ಚಿಹೋಗಿತ್ತು. ಆದರೆ ಪೋಸ್ಟ್ ಮಾಸ್ಟರ್ ಶಾಕೀರ್ ಭಟ್ ಇದನ್ನು ತಮ್ಮ ಮನೆಯಲ್ಲಿ ನಿರ್ವಹಿಸುವ ಸಾಹಸ ಮಾಡಿದರು. ಈ ಬಗ್ಗೆ ಮಾತನಾಡಿದ ಶಾಕೀರ್ ಭಟ್ 1947ರಲ್ಲಿ ಇಲ್ಲಿಗೆ ಬಂದಿರುವ ಅಂಚೆ ಕಚೇರಿ ಸೇವೆಯನ್ನು ಎಂದಿಗೂ ನಿಲ್ಲಿಸಿಲ್ಲ. ನಾನು 1992ರಲ್ಲಿ ಇಲಾಖೆಗೆ ನೇಮಕಗೊಂಡಿದ್ದೆ. 1993ರ ಪ್ರವಾಹದ ನಂತರ ನನ್ನ ಮನೆಯಿಂದಲೇ ಅಂಚೆ ಕಚೇರಿ ಕೆಲಸವನ್ನು ಮಾಡಿತ್ತಿದ್ದೆ. ಸರ್ಕಾರದಿಂದ ಯಾವುದೆ ಮನೆ ಬಾಡಿಗೆಗೆ ಎಂದು ಹಣ ಪಡೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.
2021ರ ಕದನ ವಿರಾಮದ ಮೊದಲು (ಭಾರತ ಮತ್ತು ಪಾಕಿಸ್ತಾನದ ನಡುವಿನ ಒಪ್ಪಂದ) ಪತ್ರಗಳು ಹೊರಗೆ ಹೋಗುವುದು, ಅಂಚೆ ತಲುಪಿಸುವುದು ಅಥವಾ ಪೋಸ್ಟ್‌ಗಳನ್ನು ತೆಗೆದುಕೊಳ್ಳುವುದು ತುಂಬಾ ಅಪಾಯಕಾರಿ. ಹಾಗಾಗಿ ಮತ್ತೆ ಇಲ್ಲಿ ಶಾಂತಿ ಸ್ಥಾಪನೆ ಮಾಡಬೇಕು. ಎರಡು ರಾಷ್ಟ್ರಗಳ ನಡುವೆ ಶಾಂತಿ ನೆಲೆಸಬೇಕೆಂದು ನಾವು ಬಯಸುತ್ತೇವೆ ಎಂದು ಭಟ್ ಪಿಟಿಐಗೆ ತಿಳಿಸಿದ್ದಾರೆ.
ಇನ್ನು ಇಲ್ಲಿ ವಿಶ್ವಾಸಾರ್ಹ ಸಂವಹನ ಸೌಲಭ್ಯದ ಕೊರತೆಯಿಂದಾಗಿ ಈ ಅಂಚೆ ಕಚೇರಿಯು ದೇಶಾದ್ಯಂತ ಇತರ ಅಂಚೆ ಕಚೇರಿಗಳಂತೆ ಆನ್‌ಲೈನ್ ಸೇವೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಶಾಕೀರ್ ಭಟ್ ಹೇಳಿದ್ದಾರೆ. ಇಲ್ಲಿ ಯಾವುದೇ ನೆಟ್ವರ್ಕ್ಗಳು ಇರುವುದಿಲ್ಲ. ಡಿಜಿಟಲ್ ಸಂಪರ್ಕದಿಂದ ಈ ಊರು ದೂರು ಇದೆ. ಇನ್ನು ಇಲ್ಲಿಗೆ ಪ್ರವಾಸಿಗರು ಹೆಚ್ಚು ಬರುವ ಕಾರಣ ಇಲ್ಲಿ ಸ್ವಲ್ಪ ಶಾಂತಿ ಇದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:15 pm, Fri, 11 August 23