ನಮ್ಮ ಹೆಮ್ಮೆಯ ಇಸ್ರೋ (ISRO) ಅ.21ರ ಶನಿವಾರ ಬೆಳಗ್ಗೆ 8.45ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನ ಯೋಜನೆಯ ಪರೀಕ್ಷಾ ವಾಹಕದ ಉಡಾವಣೆಯನ್ನು ಯಶಸ್ವಿಯಾಗಿ ನೆರವೇರಿಸಬೇಕಿತ್ತು (Gaganyaan Mission Test Flight). ಆದರೆ ತಾಂತ್ರಿಕ ಸಮಸ್ಯೆಯಿಂದ ಗಗನಯಾನ ಪರೀಕ್ಷಾ ಉಡಾವಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಆದಷ್ಟು ಬೇಗ ತಾಂತ್ರಿಕ ಸಮಸ್ಯೆಯನ್ನು ಪರಿಶೀಲಿಸಿ ಮತ್ತೊಮ್ಮೆ ಗಗನಯಾನ ಯೋಜನೆಯ ಪರೀಕ್ಷಾ ವಾಹಕದ ಉಡಾವಣೆಯನ್ನು ಕೈಗೊಳ್ಳುವುದಾಗಿ ಇಸ್ರೋ ಅಧ್ಯಕ್ಷ ಸ್ವಾಮಿನಾಥನ್ ತಿಳಿಸಿದ್ದಾರೆ.
ಇನ್ನು ಉಡಾವಣೆ ಸ್ಥಗಿತಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಿ ದೋಷವನ್ನು ಸರಿಪಡಿಸಲಾಗಿದ್ದು ಇಂದು ಬೆಳಗ್ಗೆ 10 ಗಂಟೆಗೆ ಗಗನಯಾನ ಯೋಜನೆಯ ಪರೀಕ್ಷಾ ವಾಹಕದ ಉಡಾವಣೆಯನ್ನು ಶೆಡ್ಯೂಲ್ ಮಾಡಲಾಗಿದೆ ಎಂದು ಇಸ್ರೋ ಟ್ವೀಟ್ ಮೂಲಕ ತಿಳಿಸಿದೆ.
Reason for the launch hold is identified and corrected.
The launch is planned at 10:00 Hrs. today.
— ISRO (@isro) October 21, 2023
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾಗಿರುವ ಇಸ್ರೋ ಇಂದು ಗಗನಯಾನ ನೌಕೆಯ ಸುರಕ್ಷತಾ ಪ್ರಯೋಗ ನಡೆಸಲು ತಯಾರಿ ನಡೆಸಿತ್ತು. ಬೆಳಗ್ಗೆ 8 ಗಂಟೆಗೆ ಪರೀಕ್ಷಾ ವಾಹಕದ ಉಡಾವಣೆಯಾಗಬೇಕಿತ್ತು. ಆದರೆ ಕೆಲವು ಸಮಸ್ಯೆಗಳಿಂದಾಗಿ ಉಡಾವಣೆ ಸಮಯದಲ್ಲಿ ವ್ಯತ್ಯಾಸವಾಗಿತ್ತು. ಕೊನೆಗೆ 8.45ಕ್ಕೆ ಗಗನಯಾನ ನೌಕೆಯ ಸುರಕ್ಷತಾ ಪ್ರಯೋಗ ನಡೆಸಲು ಇಸ್ರೋ ಸಮಯವನ್ನು ಶೆಡ್ಯೂಲ್ ಮಾಡಿತ್ತು. ಆದ್ರೆ ಉಡಾವಣೆಗೆ 5 ಸೆಕೆಂಡ್ಗೆ ಮುನ್ನಾ ನೌಕೆ ಉಡಾವಣೆ ಸ್ಥಗಿತಗೊಂಡಿದೆ. ಹವಾಮಾನ ವೈಪರೀತ್ಯ, ತಾಂತ್ರಿಕ ಕಾರಣದಿಂದ ಮಾನವಸಹಿತ ಗಗನಯಾನ ಯೋಜನೆಯ ನೌಕೆ ಪ್ರಯೋಗ ಸ್ಥಗಿತಗೊಂಡಿದೆ ಎಂದು ಇಸ್ರೋ ಮುಖ್ಯಸ್ಥ ಸೋಮನಾಥ್ ಮಾಹಿತಿ ನೀಡಿದ್ದಾರೆ.
ಪ್ರಯೋಗ ಯಶಸ್ವಿಯಾಗಿದ್ದರೆ ಈ ಪ್ರಯೋಗದಿಂದ ನೌಕೆಯ ಸುರಕತೆ ಹಾಗೂ ತುರ್ತು ಸಂದರ್ಭಗಳಲ್ಲಿ ಗಗನ ಯಾತ್ರಿಕರು ಸುರಕ್ಷಿತವಾಗಿ ಲ್ಯಾಂಡಿಂಗ್ ಆಗುವ ಕುರಿತು ಇಸ್ರೋ ಅಧ್ಯಯನ ನಡೆಸಲು ಸಹಾಯವಾಗುತ್ತಿತ್ತು. ನೌಕೆಯನ್ನು ಭೂಮಿಯಿಂದ 17 ಕಿ.ಮೀ. ಎತ್ತರಕ್ಕೆ ಉಡಾವಣೆ ಮಾಡಿ, ಅಲ್ಲಿಂದ ಸಮುದ್ರಕ್ಕೆ ಬೀಳಿಸಲು ಇಸ್ರೋ ತಯಾರಿ ಮಾಡಿಕೊಂಡಿತ್ತು. ಆದರೆ ಈಗ ಈ ಯೋಜನೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಇದನ್ನೂ ಓದಿ: ಗಗನಯಾನ ಯೋಜನೆಯೆಡೆಗೆ ಮೊದಲ ಹೆಜ್ಜೆ: ಮೊದಲ ಅಭಿವೃದ್ಧಿ ಪರೀಕ್ಷಾ ಯೋಜನೆ ಟಿವಿ-ಡಿ1ಗೆ ಭಾರತ ಸನ್ನದ್ಧ
ಮುಂದಿನ ದಿನಗಳಲ್ಲಿ ಮಾನವ ಸಹಿತ ಗಗನಯಾನ ಕೈಗೊಂಡಾಗ ಯಾವುದೇ ಸಮಸ್ಯೆಗಳಾಗದಂತೆ ಸುರಕ್ಷಿತವಾಗಿ ಯೋಜನೆ ಯಶಸ್ವಿಯಾಗಲು ಈ ಪರಿಕ್ಷಾ ಹಾರಾಟ ನಡೆಸಲು ಇಸ್ರೋ ಮುಂದಾಗಿತ್ತು. ಈ ಮೂಲಕ ಮಾನವ ಸಹಿತ ಗಗನಯಾನದ ವೇಳೆ ಎದುರಾಗಬಹುದಾದ ವೈಫಲ್ಯಗಳನ್ನು ಅಧ್ಯಯನ ಮಾಡುವ ಸಲುವಾಗಿ ಇಸ್ರೊ ರಾಕೇಟ್ ಉಡ್ಡಯನ ಮಾಡಲು ತಯಾರಿ ನಡೆಸಿತ್ತು. ಚಂದ್ರಯಾನ–3 ಯೋಜನೆಯ ಸಂದರ್ಭದಲ್ಲೂ ಇಸ್ರೋ ಇಂಥದ್ದೊಂದು ಪರೀಕ್ಷಾರ್ಥ ಪ್ರಯೋಗವನ್ನು ನಡೆಸಿತ್ತು. ಅದು ಇಸ್ರೊಗೆ ಯಶಸ್ಸು ತಂದುಕೊಟ್ಟಿತ್ತು. ಇದರ ಫಲವಾಗಿ ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ದಕ್ಷಿಣ ಧ್ರುವದ ಸಮೀಪ ಇಳಿಯಲು ಸಾಧ್ಯವಾಗಿತ್ತು. ಹೀಗಾಗಿ ಗಗನಯಾನ ಯೋಜನೆಯಲ್ಲಿ ಗಗನಯಾತ್ರಿಗಳ ಸುರಕ್ಷತೆಗಾಗಿ ಈ ಪ್ರಯೋಗ ನಡೆಯಬೇಕಿತ್ತು. ಇದನ್ನು ಅಧ್ಯಯನ ಮಾಡಿ ಮುಂದೆ ಮಾನವ ಸಹಿತ ಗಗನಯಾನದ ವೇಳೆ ಉಂಟಾಗುವ ಸಮಸ್ಯೆಗಳ ಬಗ್ಗೆ ವಿಜ್ಞಾನಿಗಳು ಲೆಕ್ಕಾಚಾರ ಹಾಕುತ್ತಿದ್ದರು.
ದೇಶದ ಸುದ್ದಿಗಳಿಗಾಗಿ ಇದರ ಮೇಲೆ ಕ್ಲಿಕ್ ಮಾಡಿ
Published On - 8:56 am, Sat, 21 October 23