ಜೆಮ್ಶೆಡ್ಪುರದಲ್ಲಿರುವ ಸ್ಟೀಲ್ ತಯಾರಿಕಾ ಕಂಪನಿ ಟಾಟಾ ಸ್ಟೀಲ್ ಈ ಕೊವಿಡ್ 19 ಸಂದರ್ಭದಲ್ಲಿ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ತನ್ನ ಕಂಪನಿಯ ಯಾವುದೇ ಉದ್ಯೋಗಿ ಕೊವಿಡ್ ಸೋಂಕಿನಿಂದ ಮೃತಪಟ್ಟರೆ, ಅವರಿಗೆ ನೀಡಲಾಗುತ್ತಿದ್ದ ತಿಂಗಳ ವೇತನವನ್ನು ನಿಲ್ಲಿಸುವುದಿಲ್ಲ. ಅವರ ಕುಟುಂಬಕ್ಕೆ ಕೊಡುತ್ತೇವೆ ಎಂದು ತಿಳಿಸಿದೆ.
ಸಾಮಾಜಿಕ ಭದ್ರತಾ ಯೋಜನೆಯಡಿ ಕಂಪನಿ ತಿಂಗಳ ವೇತನವನ್ನು ಮುಂದುವರಿಸುತ್ತದೆ. ಒಬ್ಬ ಉದ್ಯೋಗಿ ಕೊವಿಡ್ 19ನಿಂದ ಮೃತಪಟ್ಟ ತಕ್ಷಣ ಅವರಿಗೆ ನೀಡಲಾಗುತ್ತಿದ್ದ ವೇತನವನ್ನು ನಿಲ್ಲಿಸುವುದಿಲ್ಲ. ಅವರ ನಿವೃತ್ತಿಯವರೆಗೆ, ಅಂದರೆ 60ವರ್ಷ ಆಗುವವರೆಗೂ ಕುಟುಂಬಕ್ಕೆ ಆ ಹಣ ನೀಡಲಾಗುತ್ತದೆ ಎಂದು ಕಂಪನಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ.
ಮೇ 23ರಂದು ಹೇಳಿಕೆ ಬಿಡುಗಡೆ ಮಾಡಿದ್ದು, ಆ ಉದ್ಯೋಗಿಯ ಕುಟುಂಬಕ್ಕೆ ಸಂಬಳದ ಜತೆ ವೈದ್ಯಕೀಯ ಅನುಕೂಲ ಮತ್ತು ವಸತಿ ಸೌಲಭ್ಯವನ್ನೂ ನೀಡಲಾಗುವುದು ಎಂದು ತಿಳಿಸಿದೆ. ಇದರೊಂದಿಗೆ ಕೊರೊನಾದಿಂದ ಸಾವನ್ನಪ್ಪುವ ಉದ್ಯೋಗಿಗಳ ಮಕ್ಕಳ ಶಿಕ್ಷಣದ ವೆಚ್ಚವನ್ನೂ ಟಾಟಾ ಸ್ಟೀಲ್ ಭರಿಸಲಿದೆ ಎಂದೂ ಮಾಹಿತಿ ನೀಡಿದೆ. ಕಂಪನಿಯ ಉಳಿದ ಉದ್ಯೋಗಿಗಳ ವೇತನದಲ್ಲಿ ಹೆಚ್ಚಳವಾದರೂ ಇವರ ಸಂಬಳದಲ್ಲಿ ಹೆಚ್ಚಳ ಮಾಡಲಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ. ಈ ಮೂಲಕ ಟಾಟಾ ಸ್ಟೀಲ್ ಕಾರ್ಪೋರೇಟ್ ವಲಯದಲ್ಲಿ ಒಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಉಳಿದ ಕಂಪನಿಗಳಿಗೆ ಮಾದರಿಯಾಗಿದೆ.
ಇದನ್ನೂ ಓದಿ: Pope Francis: ಪೋಪ್ ಫ್ರಾನ್ಸಿಸ್ಗೆ ಎಲೆಕ್ಟ್ರಿಕ್ ಕಾರು ಸಿದ್ಧಪಡಿಸಲಿದೆ ಫಿಸ್ಕರ್ ಆಟೋಮೊಬೈಲ್ ಕಂಪೆನಿ
Karnataka Rain: ಯಾಸ್ ಚಂಡಮಾರುತದ ಪ್ರಭಾವ; ಕರ್ನಾಟಕದಲ್ಲಿ ಇಂದಿನಿಂದ ಮೇ 29ರವರೆಗೂ ವ್ಯಾಪಕ ಮಳೆ
Published On - 6:38 pm, Tue, 25 May 21